ಕಿಲೆಂಜೂರಿನಲ್ಲಿ ಅಷ್ಠ ಪವಿತ್ರ ನಾಗಮಂಡಲೋತ್ಸವ

ಜನವರಿ 28ರಂದು ಮಂಗಳೂರು ತಾಲೂಕು ಕಿನ್ನಿಗೋಳಿ ಸಮೀಪದ ಕಿಲೆಂಜೂರು ಮಾಡರ ಮನೆಯಲ್ಲಿ ಜರಗುವ ಅಷ್ಠಪವಿತ್ರ ನಾಗಮಂಡಲೋತ್ಸವವು ಅತ್ತೂರು ಮೂಡುಮನೆ ಜಯರಾಮ ಉಡುಪರ ನೇತೃತ್ವದಲ್ಲಿ ಜರಗಲಿದ್ದು, ಉಡುಪಿ ಸಗ್ರಿ ಗೋಪಾಲಕೃಷ್ಣ ಸಾಮಗರು ನಾಗಪಾತ್ರಿಗಳಾಗಿಯೂ, ಕೃಷ್ಣಪ್ರಸಾದ್ ವೈದ್ಯ, ಶ್ರೀ ವೈದ್ಯನಾಥ್ವೇಶ್ವರ ಡಮರು ಮೇಳ, ಮದ್ದೂರು ಹಾಗೂ ನಾಗ ಕನ್ನಿಕೆಯಾಗಿ ನಟರಾಜ ವೈದ್ಯ ಮತ್ತು ಬಾಲಕೃಷ್ಣ ವೈದ್ಯ, ಮದ್ದೂರು ಇವರಿಂದ ನಡೆಯಲಿರುವುದು. ಜನವರಿ 25, 2012ರಂದು ಉಗ್ರಾಣ ಮುಹೂರ್ತವು ವೇ|ಮೂ|ಗಣಪತಿ ಉಡುಪ ಅತ್ತೂರು ಇವರು ಉದ್ಘಾಟಿಸಲಿದ್ದು, ವಾಸುದೇವ ಆಸ್ರಣ್ಣ, ಅನುವಂಶಿಕ ಮೊಕ್ತೇಸರ, ಶ್ರೀ ಕ್ಷೇತ್ರ ಕಟೀಲು ಇವರು ಆಶೀರ್ವಚನ ಮಾಡಲಿರುವ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭುವನಾಭಿರಾಮ ಉಡುಪ, ಯುಗಪುರುಷ ಕಿನ್ನಿಗೋಳಿ ಭಾಗವಹಿಸಲಿರುವರು. ಅದೇ ಬೆಳಿಗ್ಗೆ 10ರಿಂದ ಸಾಲಿಗ್ರಾಮ ಡಿವೈನ್ ಪಾರ್ಕ್ ಅಂಗಸಂಸ್ಥೆ ವಿವೇಕ ಜಾಗ್ರತ ಬಳಗ, ಮುಲ್ಕಿ ಇವರಿಂದ “ಸಂಭ್ರಮದೀಪ” ಕಾರ್ಯಕ್ರಮ ಜರಗಲಿದ್ದು, ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಭಾಕರ ಶೆಟ್ಟಿ ಗುತ್ತಿನಾರ್, ಶಿಬರೂರು ಗುತ್ತು ಇವರು ನೆರವೇರಿಸಲಿದ್ದಾರೆ. ಮಧ್ಯಾಹ್ನ 2ರಿಂದ ದಿನೇಶ್ ಕೊಡೆತ್ತೂರು ಬಳಗದವರಿಂದ ’ಭಕ್ತಿಗೀತೆ ಕಾರ್ಯಕ್ರಮ’ ನೆರವೇರಲಿದೆ. ಅಲ್ಲದೆ, ಜನವರಿ 25ರಿಂದ 31ರ ವರೆಗೆ ಪ್ರತಿದಿನ ಮಧ್ಯಾಹ್ನ 12.30ರಿಂದ ಅನ್ನ ಸಂತರ್ಪಣೆ ನೆರವೇರಲಿರುವುದು.
ಮಧ್ಯಾಹ್ನ ಗಂಟೆ 4.30ಕ್ಕೆ ’ನಂದಗೋಕುಲ’ ’ಅತಿಥಿಗೃಹ’ವನ್ನು ಆನಂತ ಪದ್ಮನಾಭ ಆಸ್ರಣ್ಣರು ಉದ್ಘಾಟಸರಿದ್ದು, ಆಶೀರ್ವಚನವನ್ನು ಶ್ರೀಶ್ರೀಶ್ರೀ ಈಶ ವಿಠಲದಾಸ ಸ್ವಾಮೀಜಿ ’ಸಾಂದೀಪನಿ’ ಸಾಧನಾಶ್ರಮ ಶ್ರೀ ಕ್ಷೇತ್ರ ಕೇಮಾರು, ಅಧ್ಯಕ್ಷತೆಯನ್ನು ನಾಗಮಂಡಲ ಸಮಿತಿಯ ಗೌರವಾಧ್ಯಕ್ಷ ಕೆ.ಸುಧಾಕರ ಶೆಟ್ಟಿ, ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಉಪಕಾರ್ಯದರ್ಶಿ ಇವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಈಶ್ವರ ಕಟೀಲು, ಜಿಲ್ಲಾ ಪಂಚಾಯತ್ ಸದಸ್ಯರು, ವೈ.ಮೋನಪ್ಪ ಶೆಟ್ಟಿ ಎಕ್ಕಾರು, ಅಧ್ಯಕ್ಷರು, ವ್ಯ.ಸೇ.ಸ.ಬ್ಯಾಂಕ್ ಬಜ್ಪೆ, ಕೆ.ಲವ.ಶೆಟ್ಟಿ ಅಧ್ಯಕ್ಷರು, ವ್ಯ.ಸೇ.ಸ.ಬ್ಯಾಂಕ್, ಕಿನ್ನಿಗೋಳಿ ಭಾಗವಹಿಸಲಿರುವರು. ಅಲ್ಲದೆ ಅದೇ ರಾತ್ರಿ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ.
ಜನವರಿ 26 ಮತ್ತು 27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು. 28 ರಂದು ಬೆಳಿಗ್ಗೆ ನಾಗಮಂಡಲ ಚಪ್ಪರದಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಲಿದೆ. ಸಂಜೆ ಗಂಟೆ 6ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವು ನಾರಾಯಣ ಮಾಡ ವೇದಿಕೆಯಲ್ಲಿ ನಡೆಯಲಿದ್ದು, ಮುಲ್ಕಿ ಸೀಮೆ ದುಗ್ಗಣ್ಣ ಸಾವಂತ ಅರಸರು ಸಭಾಧ್ಯಕ್ಷತೆಯನ್ನು, ಶ್ರೀಸುಬ್ರಹ್ಮಣ್ಯ ಮಠದ ಶ್ರೀಶ್ರೀಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರಿಂದ ಆಶೀರ್ವಚನ, ಕಟೀಲು ಕ್ಷೇತ್ರದ ವೇ|ಮೂ ಲಕ್ಷ್ಮೀನಾರಾಯಣ ಆಸ್ರಣ್ಣರು ಶುಭಾಶಂಸನೆ ಗೈಯಲಿದ್ದಾರೆ. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಾನ್ಯ ಕೃಷ್ಣ ಜೆ. ಪಾಲೆಮಾರ್, ನಳಿನ್ ಕುಮಾರ್ ಕಟೀಲು, ಸಂಸದರು, ಅಭಯಚಂದ್ರ ಜೈನ್, ಶಾಸಕರು ಮೂಡಬಿದ್ರೆ ಕ್ಷೇತ್ರ, ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ| ವಿನಯ ಹೆಗ್ಡೆ, ಬೆಳಗಾವಿ ವಿ.ಟಿ.ಯು ವಿಶ್ರಾಂತ ಉಪಕುಲಪತಿ ಡಾ| ಕೆ.ಬಲವೀರ ರೆಡ್ಡಿ, ಮಾಜಿ ಸಚಿವರಾಗಿರುವ ಅಮರನಾಥ ಶೆಟ್ಟಿ, ಆಳ್ವಾಸ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಮೋಹನ್ ಆಳ್ವ, ದ.ಕ.ಜಿ.ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್, ಮುಂಬಾಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಕಟೀಲು ದಶಾವತಾರ ಯಕ್ಷಗಾನ ಮಂಡಳಿಯ ಸಂಚಾಲಕ ದೇವೀಪ್ರಸಾದ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಕಲಾಜಗತ್ತು ಮುಂಬೈ, ಅತ್ತೂರು ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸೀತಾರಾಮ ಶೆಟ್ಟಿ, ಶಂಭು ಮುಕ್ಕಾಲ್ದಿ ಭಂಡಾರ ಮನೆ ಇವರುಗಳು ಉಪಸ್ಥಿತರಿರುವರು. ಧಾರ್ಮಿಕ ಉಪನ್ಯಾಸವನ್ನು ಕರ್ನಾಟಕ ಧಾರ್ಮಿಕ ಪರಿಷತ್ ಸದಸ್ಯರಾಗಿರುವ ವಿದ್ವಾನ್ ಪಂಜ ಭಾಸ್ಕರ ಭಟ್ ನೆರವೇರಿಸಲಿರುವರು. ನವನೀತ ಶೆಟ್ಟಿ ಕದ್ರಿ ಮತ್ತು ಕೆ.ಕೆ.ಪೇಜಾವರ್ ಕಾರ್ಯಕ್ರಮ ನಿರ್ವಹಣೆ ಗೈಯಲಿರುವರು. ಬಳಿಕ ರಾತ್ರಿ 8.30ರಿಂದ “ಸತ್ಯನಾಪುರತ ಸಿರಿ” ತುಳು ನೃತ್ಯರೂಪಕ, 10.30ರಿಂದ ನಾಗಬನದಲ್ಲಿ ಹಾಲಿಟ್ಟು ಸೇವೆ ಹಾಗೂ ರಾತ್ರಿ ಗಂಟೆ 11ರಿಂದ ನಾಗಮಂಡಲ ಚಪ್ಪರದಲ್ಲಿ “ಅಷ್ಠಪವಿತ್ರ ನಾಗಮಂಡಲ ಸೇವೆ” ಜರಗಲಿದೆ. ಜ. 30 ಹಾಗೂ 31ರಂದು ಧರ್ಮದೈವಗಳಿಗೆ ನೇಮೋತ್ಸವವು ನಡೆಯಲಿದೆ.
ಅತ್ತೂರು-ಕೆಮ್ರಾಲ್-ಕಿಲೆಂಜೂರು ಗ್ರಾಮಸ್ಥರ ಸಹಕಾರದೊಂದಿಗೆ ನಡೆಯಲಿರುವ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಯಾಗಿ ನೆರವೇರುವಂತೆ ಪದ್ಮನಾಭ ಮಾಡ, ಮಾಡರ ಮನೆ, ಭವಾನಿ ಶಂಕರ ಶೆಟ್ಟಿ, ಧರ್ಮದರ್ಶಿ, ಬೈಂಗನ್‌ವಾಡಿ ದುರ್ಗಾಪರಮೇಶ್ವರೀ ದೇವಸ್ಥಾನ, ಮುಂಬೈ, ಎಂ.ನಾರಾಯಣ ಶೆಟ್ಟಿ ಬಪ್ಪನಾಡು, ಸೀತಾ ನಿಲಯ ಮುಲ್ಕಿ, ಶಂಕರ ಶೆಟ್ಟಿ ಕೆಮ್ರಾಲ್ ಬಾಳಿಕೆ, ನಾಗಮಂಡಲ ಸಮಿತಿಯ ಅಧ್ಯಕ್ಷ ಗಣೇಶ್ ಶೆಟ್ಟಿ ಐಕಳ, ಮಾಡರಮನೆ ಕುಟುಂಬಿಕರು, ಕೆಮ್ರಾಲ್ ಬಾಳಿಕೆ ಕುಟುಂಬಿಕರು ಒಳಗೊಂಡಂತೆ ನಾಗಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ದಾಮೋದರ ಕೆ.ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿರುತ್ತಾರೆ.

ಭುವನಾಭಿರಾಮ ಉಡುಪ, ಶೇಖರ್ ಮಾಡ, ಸಂತೋಷ್ ಶೆಟ್ಟಿ ಕಾಟಿಪಳ್ಳ, ಸಂದೇಶ್ ಶೆಟ್ಟಿ ಕಾಟಿಪಳ್ಳ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕೆಮ್ರಾಲ್ ಒಕ್ಕೂಟದ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರಧ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಕೆಮ್ರಾಲ್ ಒಕ್ಕೂಟದ ಪದಗ್ರಹಣ ರವಿವಾರ ಕೆಮ್ರಾಲ್ ಸರಕಾರಿ ಫ್ರೌಢ ಶಾಲೆಯಲ್ಲಿ ನಡೆಯಿತು. ಯೋಜನೆಯ ತಾಲೂಕು ನಿರ್ದೇಶಕ ಸಂಪತ್...

Close