ಏಳಿಂಜೆ ಪಟ್ಟೆಯಲ್ಲಿ ರಜತವೈಭವ

ಏಳಿಂಜೆಯ ನವಚೇತನ ಯುವಕಮಂಡಲದ ರಜತ ವರ್ಷಾಚರಣೆ ನಿಮಿತ್ತ ರಜತವೈಭವ ಗ್ರಾಮ ಸಾಂಸ್ಕ್ರತಿಕ ಕಾರ್ಯಕ್ರಮ ಶನಿವಾರ ಪಟ್ಟೆ ಜಾರಂದಾಯ ಬಂಟ ದೈವಸ್ಥಾನದಲ್ಲಿ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಅಡ್ಯಂತಾಯರ ಅಧ್ಯಕ್ಷತೆಯಲ್ಲಿ ಉಜ್ಜು ಪೂಜಾರಿ ಹಾಗೂ ಚಲ್ಲು ಮುಖಾರಿ ಯವರನ್ನು ಸನ್ಮಾನಿಸಲಾಯಿತು.

ಯುವಕಸಂಘದ ಮಾಜಿ ಅಧ್ಯಕ್ಷ ಲೋಕನಾಥ ಶೆಟ್ಟಿ, ಅಧ್ಯಕ್ಷ ಸುಧಾಕರ ಸಾಲ್ಯಾನ್, ಕಾರ್ಯದರ್ಶಿ ಬಾಲಕ್ರಷ್ಣ ಶೆಟ್ಟಿ ಮತ್ತಿತರರಿದ್ದರು. ಇದೇ ಸಂಧರ್ಭ ಪಟ್ಟೆ ಅಂಗನವಾಡಿ ವತಿಯಿಂದ ಪಟ್ಟೆ ಶಾಲಾ ನಿವ್ರತ್ತ ಶಿಕ್ಷಕಿ ಬ್ಲೋಸಿಯಸ್ ಮೆಂಡೋನ್ಸಾರನ್ನು ಸನ್ಮಾನಿಸಲಾಯಿತು. ಅಂಗನವಾಡಿ ಶಿಕ್ಷಕಿ ಮಮತಾ, ಪಟ್ಟೆ ಫ್ರಂಡ್ಸ್ ಅಧ್ಯಕ್ಷ ಹರೀಶ್, ಪದ್ಮಿನಿ ವಸಂತ್ ಉಪಸ್ಥಿತರಿದ್ದರು.ಲಕ್ಷ್ಮಣ್ ಬಿ .ಬಿ. ಸ್ವಾಗತಿಸಿ ಶರತ್ ಕಾರ್ಯಕ್ರಮ ನಿರೂಪಿಸಿದರು. ಜಯಂತ ಶೆಟ್ಟಿ ಸೂರತ್ ಪ್ರಾಯೋಜಕತ್ವದಲ್ಲಿ ವಿಜಯಾ ಕಲಾವಿದರಿಂದ ಜನ್ನೆ ಜನೆ ಎಂಚ ? ತುಳು ನಾಟಕ ನಡೆಯಿತು.

Comments

comments

Leave a Reply

Read previous post:
ಕಿಲೆಂಜೂರಿನಲ್ಲಿ ಅಷ್ಠ ಪವಿತ್ರ ನಾಗಮಂಡಲೋತ್ಸವ

ಜನವರಿ 28ರಂದು ಮಂಗಳೂರು ತಾಲೂಕು ಕಿನ್ನಿಗೋಳಿ ಸಮೀಪದ ಕಿಲೆಂಜೂರು ಮಾಡರ ಮನೆಯಲ್ಲಿ ಜರಗುವ ಅಷ್ಠಪವಿತ್ರ ನಾಗಮಂಡಲೋತ್ಸವವು ಅತ್ತೂರು ಮೂಡುಮನೆ ಜಯರಾಮ ಉಡುಪರ ನೇತೃತ್ವದಲ್ಲಿ ಜರಗಲಿದ್ದು, ಉಡುಪಿ ಸಗ್ರಿ...

Close