ಏಳಿಂಜೆ-ಮುತ್ತಾಯಕೆರೆಗೆ ಗುದ್ದಲಿಪೂಜೆ

ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರು ಕೆರೆಗಳ ಹೂಳೆತ್ತುವಿಕೆಗೆ ಶಾಸಕರಿಗಾಗಿ ಬಿಡುಗಡೆ ಗೊಳಿಸಿದ್ದ 5ಕೋಟಿ ರೂ. ಅನುದಾನದ ಪೈಕಿ ಐಕಳ ಗ್ರಾ.ಪಂ. ನ ಏಳಿಂಜೆ ಮುತ್ತಾಯ ಕೆರೆಗೆ ಗುದ್ದಲಿ ಪೂಜೆ ಗುರುವಾರ ನಡೆಯಿತು.

ಸುಮಾರು 20ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳ್ಳಲಿರುವ ಕೆರೆಗೆ ಶಾಸಕ ಕೆ.ಅಭಯಚಂದ್ರ ಜೈನ್ ಗುದ್ದಲಿ ಪೂಜೆ ನೆರೆವೇರಿಸಿದರು. ಅರ್ಚಕ ಸುಬ್ರಮಣ್ಯ ಭಟ್ ರ ಪೌರೋಹಿತ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಕಳ ಗ್ರಾ.ಪಂ ಅಧ್ಯಕ್ಷ ಯೋಗೀಶ್ ಕೊಟ್ಯಾನ್, ಜಿ.ಪಂ.ಸದಸ್ಯೆ ಆಶಾ ಸುವರ್ಣ, ತಾ.ಪಂ.ಸದಸ್ಯ ನೆಲ್ಸನ್, ಎ.ಪಿ.ಎಂ.ಸಿ ಸದಸ್ಯ ಪ್ರಮೋದ್, ಏಳಿಂಜೆ ಶ್ರೀ ಕೋಡ್ದಬ್ಬುದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಪಂ.ಸದಸ್ಯರಾದ ಪ್ರಕಾಶ್ ಶೆಟ್ಟಿ. ಸೆವೆರಿನ್ ಲೋಬೋ, ಗ್ರೇಸಿ, ಸುಶೀಲ, ಜಯಂತ ಪೂಜಾರಿ, ಮಾಜಿ ತಾ.ಪಂ.ಸದಸ್ಯೆ ಸುಜಾತ.ಎಂ, ಹೇಮನಾಥ ಶೆಟ್ಟಿ, ಸುನೀಲ್ ವಾಸ್, ಸುಧಾಕರ ಸಾಲ್ಯಾನ್, ಸತ್ಯನ್ ಶೆಟ್ಟಿ, ಸ್ಟ್ವೆಪ್ನಿಲ್, ಮೋಹನ್ ಶೆಟ್ಟಿ, ಪಾಂಡುರಂಗ ಶೆಟ್ಟಿ, ನೇಮಿರಾಜ್ ಮತ್ತಿತರರಿದ್ದರು.

Comments

comments

Leave a Reply

Read previous post:
ಮುಂಡ್ಕೂರಿನಲ್ಲಿ ತಿಂಗೊಲ್ದ ಸಂಕ್ರಾಂತಿ ( ಸನ್ಮಾನ)

ಮುಂಡ್ಕೂರಿನ ಗುರುಪ್ರಸಾದ್ ಚಾರಿಟೇಬಲ್ ಟ್ರಸ್ಟ್ ಹಾಗೂ ತಿಂಗೊಲ್ದ ಸಂಕ್ರಾಂತಿ ಸಮಿತಿಗಳ ಸಂಯುಕ್ತ ಆಸರೆಯಲ್ಲಿ 41ನೇ ತಿಂಗೊಲ್ದ ಸಂಕ್ರಾಂತಿ ಕಾರ್ಯಕ್ರಮ ಶನಿವಾರ ಮುಂಡ್ಕೂರಿನ ಭಾರ್ಗವ ವೇದಿಕೆಯಲ್ಲಿ ನಡೆಯಿತು. ಗುರುಪ್ರಸಾದ್...

Close