ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಜಾತ್ರೆ

Mithuna Kodethoor

ತುಳುನಾಡಿನ ಐತಿಹಾಸಿಕ ಕಾರಣಿಕ ಪುರುಷರಾದ ಕಾಂತಾಬಾರೆ ಬೂದಾಬಾರೆಯರ ಜನ್ಮಕ್ಷೇತ್ರ ಬಳ್ಕುಂಜೆ ಕೊಲ್ಲೂರಿನಲ್ಲಿ ವರ್ಷಾವಧಿ ಜಾತ್ರೆ ತಾ.27ರಿಂದ 29ರತನಕ ನಡೆಯಲಿದೆ ಎಂದು ಕ್ಷೇತ್ರ ಸಮಿತಿಯ ಅಧ್ಯಕ್ಷ ಸೋಮಪ್ಪ ಸುವರ್ಣ ತಿಳಿಸಿದ್ದಾರೆ. ತಾ.27ರಂದು ದುಗ್ಗಣ್ಣ ಸಾವಂತರು, ಕಟೀಲು ಅನಂತ ಆಸ್ರಣ್ಣ, ಶಾಸಕ ಅಭಯಚಂದ್ರ, ಸಾಂಸದ ನಳಿನ್ ಕುಮಾರ್ ಉಪಸ್ಥಿತಿಯಲ್ಲಿ ನವ ನಿರ್ಮಾಣ ರಸ್ತೆಯ ಉದ್ಘಾಟನೆ ನಡೆಯಲಿದೆ. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ತುಕಾರಾಮ ಪೂಜಾರಿ, ಡಾ. ಸಂಜೀವ ದಂಡೆಕೇರಿ, ಲಕ್ಷ್ಮೀ ಕುಮಾರನ್, ಸತ್ಯಜಿತ್ ಸುರತ್ಕಲ್, ಮುದ್ದು ಮೂಡುಬೆಳ್ಳೆ ಮುಂತಾದವರು ಸಭಾ  ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಸಿಹಿತ್ಲು ರಂಗ ಸುದರ್ಶನ ತಂಡದಿಂದ ಜಾನಪದ ವೈವಿಧ್ಯ, ಕಾಂತಾಬಾರೆ ಬೂದಾಬಾರೆ ಐತಿಹಾಸಿಕ ನಾಟಕ ಜರಗಿದೆ. ತಾ.28ರಂದು ಸಾಮೂಹಿಕ ಆಶ್ಲೇಷ ಬಲಿ ಸೇವೆ, ಜಾರಂದಾಯ, ಗುಡ್ಡೆ ಧೂಮಾವತಿ ಬಂಟ, ಸರಳ ಧೂಮಾವತಿ ದೈವಗಳ ನೇಮ, ತಾ.29 ಬೆಳಿಗ್ಗೆ ಕಾಂತಾಬಾರೆ ಬೂದಾಬಾರೆಯರ ವೀರ ಚರಿತ್ರೆ ಪಠಣ(ಬೀರ) ನಡೆಯಲಿದೆ

Comments

comments

Leave a Reply

Read previous post:
Kateel Shree Durgaparameshwari Temple

Photos by : Harish Kodethoor

Close