ಮುಂಡ್ಕೂರಿನಲ್ಲಿ ತಿಂಗೊಲ್ದ ಸಂಕ್ರಾಂತಿ ( ಸನ್ಮಾನ)

ಮುಂಡ್ಕೂರಿನ ಗುರುಪ್ರಸಾದ್ ಚಾರಿಟೇಬಲ್ ಟ್ರಸ್ಟ್ ಹಾಗೂ ತಿಂಗೊಲ್ದ ಸಂಕ್ರಾಂತಿ ಸಮಿತಿಗಳ ಸಂಯುಕ್ತ ಆಸರೆಯಲ್ಲಿ 41ನೇ ತಿಂಗೊಲ್ದ ಸಂಕ್ರಾಂತಿ ಕಾರ್ಯಕ್ರಮ ಶನಿವಾರ ಮುಂಡ್ಕೂರಿನ ಭಾರ್ಗವ ವೇದಿಕೆಯಲ್ಲಿ ನಡೆಯಿತು. ಗುರುಪ್ರಸಾದ್ ಚಾರಿಟೇಬಲ್ ಟ್ರಸ್ಟ್‌ನ ವಿಶ್ವಸ್ಥ ರಾಘು .ಟಿ .ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಮುಂಡ್ಕೂರಿನ ದೇವಳದ ಅರ್ಚಕ ರಾಘವೇಂದ್ರ ಆಚಾರ್ಯ ಆಶೀರ್ವಚನ ನೀಡಿದರು.

ಮುಂಡ್ಕೂರಿನ ಜೆಸಿರೆಟ್ ವಿಂಗ್ ಅಧ್ಯಕ್ಷೆ ರಮ್ಯಾ ಅರುಣ್ ರಾವ್, ಜೆ.ಸಿ.ಐ ಅಧ್ಯಕ್ಷ ಸುರೇಂದ್ರ ಭಟ್, ಸಮಿತಿಯ ಸ್ಥಾಪಕಾಧ್ಯಕ್ಷ ದೇವಪ್ಪ ಸಪಳಿಗರ ಉಪಸ್ಥಿತಿಯಲ್ಲಿ ಮುಂಡ್ಕೂರಿನ ಜಿ .ಪಂ . ಶಾಲೆಯ ನಿವ್ರತ್ತ ಶಿಕ್ಷಕಿ ಕುಮುದಿನಿ ಯವರನ್ನು ಸನ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷ ಅರುಣ್ ರಾವ್  ಸ್ವಾಗತಿಸಿ  ಸಂಯೋಜಕ ಗಿರಿಧರ್ ಪ್ರಭು ಸನ್ಮಾನ ಪತ್ರ ವಾಚಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. 

ದಿನೇಶ್ ಕೊಡೆತ್ತೂರು ಬಳಗದಿಂದ ಭಕ್ತಿ ಸಂಗೀತ ನಡೆಯಿತು.

Comments

comments

Leave a Reply

Read previous post:
ಏಳಿಂಜೆ ಪಟ್ಟೆಯಲ್ಲಿ ರಜತವೈಭವ

ಏಳಿಂಜೆಯ ನವಚೇತನ ಯುವಕಮಂಡಲದ ರಜತ ವರ್ಷಾಚರಣೆ ನಿಮಿತ್ತ ರಜತವೈಭವ ಗ್ರಾಮ ಸಾಂಸ್ಕ್ರತಿಕ ಕಾರ್ಯಕ್ರಮ ಶನಿವಾರ ಪಟ್ಟೆ ಜಾರಂದಾಯ ಬಂಟ ದೈವಸ್ಥಾನದಲ್ಲಿ ನಡೆಯಿತು. ದೈವಸ್ಥಾನದ ಆಡಳಿತ ಮೊಕ್ತೇಸರ ರಘುರಾಮ ಅಡ್ಯಂತಾಯರ...

Close