ಯುದ್ಧ

ಬತ್ತಳಿಕೆಯೊಳಗಿನ ಬಾಣಗಳೆಲ್ಲಾ

ಬರಿದಾದವನಶ್ಟೆ
ರಸ್ತೆಮೇಲಿನ ಕಲ್ಲುಗಳನ್ನು
ಕೈಗೆತ್ತಿಕೊಳ್ಳುವನು
ದೂರದ್ರಿಶ್ಟಿಗೆಟುಕದ ದಿಕ್ಕಿನತ್ತೆಸೆಯಲು

ಮನಸಿನೊಳಗಿನ ಮಾತುಗಳೆಲ್ಲಾ
ಮುಗಿದವನಶ್ಟೆ
ಕತ್ತಿ ಮಚ್ಚುಗಳನ್ನು
ಕೈಗೆತ್ತಿಕೊಳ್ಳುವನು
ಅಂತರಾಳಕ್ಕಿಳಿಯದ ವಾದಗಳ ಕತ್ತು ಕುಯ್ಯಲು

ಬರಿ ಕಲ್ಲು, ಕತ್ತಿಗಳಿಂದಲೆ
ಕಾಳಗಗಳನ್ನು ಜಯಿಸಲೆತ್ನಿಸುವ
ಕಲಿಯುಗವಿದು.
ಎಲ್ಲರೂ ಭಾಗಿಯಾಗಲೇಬೇಕು ಯುದ್ಧದಲ್ಲಿ
ಬದುಕನ್ನು ಜಯಿಸಲು.

ಅಗೋ…
ಯಾರೋ ಪುಂಡ ಪೋಕರಿ ಬಂದು
ನನ್ನ ಗಟ್ಟಿ ಕವಿತೆಗೇ
ತನ್ನ ಕತ್ತಿಯನ್ನು ಸಾಣೆಯಿರಿಸಿದ್ದಾನೆ…
ಏಳುತ್ತಿವೆ ಕಿಡಿಗಳು

ಅವನ ಕತ್ತಿಗೆ
ನನ್ನ ಕವಿತೆಯ ಪದಗಳು ಅಂಟಿಕೊಳ್ಳುತ್ತಿವೆ.
ಅವನಿಗರಿವಿಲ್ಲದೆಯೆ ಅವನ ಕತ್ತಿಗಿಂತ
ನನ್ನ ಕವಿತೆ
ಇನ್ನೂ ಹರಿತವಾಗುತ್ತಿದೆ!

Comments

comments

Leave a Reply

Read previous post:
ಸುಧಾರಿತ ಎಲೆಕ್ಟ್ರಾನಿಕ್ ಮತಯಂತ್ರಗಳ ಬೇಡಿಕೆ

ಸುಧಾರಿತ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ನಿರ್ಮಿಸುವಂತೆ ಕೇಂದ್ರ ಚುನಾವಣಾ ಆಯೋಗವು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್‌ಗೆ ಕೋರಿಕೆ ಸಲ್ಲಿಸಿದೆ. ಈ ಮೊದಲು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗುತ್ತಿದೆ ಎಂದು ಆರೋಪಗಳಿದ್ದ...

Close