ಕಿನ್ನಿಗೋಳಿಯಲ್ಲಿ ಯೋಗಾಂಜಲಿ – 2012

 ಸ್ವಸ್ಥ ಸಮಾಜಕ್ಕೆ ಯೋಗ ಪರಮೌಷಧ, ಯೋಗದಿಂದ ರೋಗ ದೂರ ಮಾಡಲು ಸಾಧ್ಯ ಎಂದು ಕಟೀಲಿನ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಯುಗಪುರುಷ, “ಶ್ರೀ ಪತಂಜಲಿ ಯೋಗ ಅಧ್ಯಯನ ಮಂದಿರ”, “ಕುಜಿಂಗಿರಿ ಹಾಗೂ ಗಮ್ಮತ್ ಕಲಾವಿದೆರ್” ಕುಜಿಂಗಿರಿಗಳ ಸಹಯೋಗದೊಂದಿಗೆ ನಡೆದ ಯೋಗಾಂಜಲಿ – 2012 ಉದ್ಘಾಟಿಸಿ ಮಾತನಾಡಿದರು.
ಭಾರತದಲ್ಲಿಯೇ ಹುಟ್ಟಿದ ಯೋಗವನ್ನು ವಿದೇಶಿಯರೂ ಅನುಸರಿಸುತ್ತಿದ್ದು ಯೋಗದಿಂದ ಮಾನಸಿಕ ರೋಗವನ್ನೂ ತಡೆಯಲು ಸಾಧ್ಯವೆಂದ ಅವರು ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ತರಬೇತಿ ನೀಡುವ ಅವಶ್ಯಕತೆ ಇದೆ ಎಂದರು. ಯುಗಪುರುಷದ ಭುವನಾಭಿರಾಮ ಉಡುಪ ಅಧ್ಯಕ್ಷತೆ ವಹಿಸಿದ್ದು, ವೇದ ವಿದ್ವಾಂಸ ವಾದಿರಾಜ ಉಪಾದ್ಯಾಯ, ಕೊಲಕಾಡಿ ಶುಭ ಹಾರೈಸಿದರು. ಕಟೀಲು ಕಾಲೇಜು ಪ್ರಾಚಾರ‍್ಯ ಬಾಲಕೃಷ್ಣ ಶೆಟ್ಟಿ, ಉಪನ್ಯಾಸಕ ಸೋಂದ ಭಾಸ್ಕರ ಭಟ್ಟ, ಜಿ.ಪಂ.ಸದಸ್ಯ ಈಶ್ವರ ಕಟೀಲು, ಸದಾಶಿವ ಶೆಟ್ಟಿಗಾರ್, ಪ್ರಥ್ವೀಶ ಎಸ್. ಕರಿಕೆ, ದೇವಪ್ರಸಾದ್ ಪುನರೂರು, ಹೇಮಲತಾ ಅಮೀನ್, ಉಪಸ್ಥಿತರಿದ್ದರು.

ರಾಷ್ಟ್ರ ಮಟ್ಟದ ಯೋಗ ಪಟುಗಳಾದ ಕೌಶಿಕ್ ಎಸ್, ರಕ್ಷೀತ್ ಆಚಾರ್ಯ, ರಾಜ್ಯ ಮಟ್ಟದ ಯೋಗಪಟು ಪ್ರಣೀಕ್ ಕೊಟ್ಯಾನ್ ರನ್ನು ಸನ್ಮಾನಿಸಲಾಯಿತು.

ಹರಿಪ್ರಸಾದ್  ಸ್ವಾಗತಿಸಿ, ವ್ಯವಸ್ಥಾಪಕ ಹರಿರಾಜ್ ಶೆಟ್ಟಿಗಾರ್ ಪ್ರಸ್ತಾವಿಸಿದರು. ನಿತೀನ್, ಶೈಲೇಶ್, ಹರಿ ಸನ್ಮಾನ ಪತ್ರ ವಾಚಿಸಿದರು, ಮೇಘಶ್ರೀ ಕಾರ್ಯಕ್ರಮ ನಿರೂಪಿಸಿದರು. ಯೋಗ ಮಾಹಿತಿ, ಯೋಗಾಸನ ಪ್ರದರ್ಶನ, ಹಾಸ್ಯ ಸೌರಭ, ಮಿಮಿಕ್ರಿ, ಯಕ್ಷಗಾನ ನಡೆಯಿತು.

Comments

comments

Leave a Reply

Read previous post:
ಎಸ್.ಕೋಡಿ ಯಲ್ಲಿ ಶನಿ ಪೂಜೆ

 ಎಸ್.ಕೋಡಿ ಯ ಸಂಗಮ ಮಹಿಳಾ ಹಾಗೂ ಯುವತಿ ಮಂಡಲ(ರಿ) ಇದರ 9ನೇ ವಾರ್ಷಿಕೋತ್ಸವದ ಅಂಗವಾಗಿ ಸಾರ್ವಜನಿಕ ಶನಿಪೂಜೆ ಶನಿವಾರ ಎಸ್.ಕೋಡಿಯ ಸಂಗಮ ಸಮಾಜಭವನದಲ್ಲಿ ನಡೆಯಿತು. ಮಹಿಳಾ ಮಂಡಲದ...

Close