ಗಾಳಿಪಟ ಉತ್ಸವ ಶಾಂತಿ-ಸೌಹಾರ್ದಕ್ಕೆ ಪೂರಕ

Reshma Mangalore

ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡದ ಆಶ್ರಯದಲ್ಲಿ ಪಣಂಬೂರು ಸಮುದ್ರ ಕಿನಾರೆಯಲ್ಲಿ ಶನಿವಾರ ಆರಂಭಗೊಂಡ ಎರಡು ದಿನಗಳ 4ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ದೇಶ-ವಿದೇಶಗಳ ಗಾಳಿಪಟುಗಳು ಭಾಗವಹಿಸಿದ್ದವು.
ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ, “ಗಾಳಿಪಟ ಉತ್ಸವದಂತಹ ಕಾರ್ಯಕ್ರಮಗಳು ಶಾಂತಿ, ಸೌಹಾರ್ದ, ಒಗ್ಗಟ್ಟಿನ ಪ್ರತೀಕ ಎಂದು ಹೇಳಿದರು”. ಇಲ್ಲಿ ಜಾತಿ-ಮತದ ಭೇದವಿಲ್ಲ, ಗಡಿಯ ಅಂತರವಿಲ್ಲ, ಎಲ್ಲರೂ ಒಟ್ಟಾಗಿ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವುದು ಶಾಂತಿ, ಸೌಹಾರ್ದದ ಸಂದೇಶ ನೀಡಿದಂತೆ ಎಂದು ಅಭಿಪ್ರಾಯ ಪಟ್ಟರು. ಪ್ರವಾಸೋದ್ಯಮ ಅಭಿವೃದ್ಧಿಗೆ ಟೀಮ್ ಮಂಗಳೂರು ನೀಡುತ್ತಿರುವ ಪ್ರೋತ್ಸಾಹ ಶ್ಲಾಘನೀಯ ಎಂದರು. ಪಣಂಬೂರು ಎಸಿಪಿ ಪುಟ್ಟಮಾದಯ್ಯ, ಸರ್ವೇಶ್ ರಾವ್, ನಿತಿನ್ ಕುಮಾರ್, ಗಿರಿಧರ್ ಕಾಮತ್, ಪ್ರಶಾಂತ್, ವೆಲೆಂಟೈನ್ ಡಿ’ಸೋಜಾ ಉಪಸ್ಥಿತರಿದ್ದರು.

ಪಣಂಬೂರು ಕಡಲ ಕಿನಾರೆಯ ನಸು ನೀಲಿ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ, ಸಮುದ್ರ ದಡದಲ್ಲಿ ಇದನ್ನು ವೀಕ್ಷಿಸಲು ಬಂದ ಜನಸಾಗರದ ವೈಭವ. ಕಥಕ್ಕಳಿ, ಯಕ್ಷಗಾನ, ಟೆಡದಡಿಬೇರ್, ಹುಲಿ,ಹಾವು, ಮೀನು ಹೀಗೆ ನೆಲದ ಮೇಲಿರುವ ಪ್ರಾಣಿಗಳಿಗೆ ಆಗಸದಲ್ಲಿ ಹಾರಾಡುವ ಸೌಭಾಗ್ಯ. ಮಾಮೂಲು ಪತಂಗಳ ಜತೆಜತೆಗೆ ವಿದೇಶದಿಂದ ಬಂದ ಗಾಳಿಪಟ ಪಟುಗಳು ವಿವಿಧ ವಿನ್ಯಾಸದ ಗಾಳಿಪಟುಗಳನ್ನು ಹಾರಿಸಿ ನೋಡುಗರ ಮನಸೂರೆಗೊಂಡರು. ಇದರ ಜತೆಗೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜನರನ್ನು ರಂಜಿಸುವಲ್ಲಿ ಯಶಸ್ವಿಯಾದವು.

Comments

comments

Leave a Reply

Read previous post:
M.R.P.L. ನಲ್ಲಿ ಆಕಸ್ಮಿಕ ಸ್ಫೋಟ

ಶನಿವಾರ ಸಂಭವಿಸಿದ ಆಕಸ್ಮಿಕ ಸ್ಫೋಟ ಪ್ರಕರಣದಲ್ಲಿ ಓರ್ವ ಗುತ್ತಿಗೆ ಕಾರ್ಮಿಕ ಸಾವನ್ನಪ್ಪಿದ್ದು, ಇತರ 5ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ. ಕುಳಾಯಿ ಬರ್ಕೆಯ ನಾಗೇಶ್(25) ಸಾವನಪ್ಪಿದವರು. ಕೃಷ್ಣಾಪುರದ ಬಶೀರ್(24) ಮತ್ತು...

Close