ಮೂಲ್ಕಿ ರೈಲಿನಡಿಗೆ ಬಿದ್ದು ಸಾವು

ಬೆಂಗಳೂರಿನಿಂದ ಬರುತ್ತಿದ್ದ ಯಶವಂತಪುರ – ಕಾರವಾರ ರೈಲಿನಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ಮೂಲ್ಕಿ ರೈಲು ನಿಲ್ದಾಣ ಬಳಿ ಸಂಭವಿಸಿದೆ. ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೋರ್ವರು ಮುಂಜಾನೆ ಕಾರ್ನಾಡು ಕುದ್ಕ ಪಲ್ಲದ ಮಾತಾ ಅಮೃತಾನಂದಮಯಿ ನಗರದ ಕನ್ನಮ್ಮ(80) ಮೃತಪಟ್ಟವರು. ಮಾತಾ ಅಮೃತಾನಂದಮಯಿ ನಗರದಲ್ಲಿರುವ ಮಗನ ಮನೆಯಿಂದ ಕಿಲ್ಪಾಡಿಯಲ್ಲಿರುವ ಮತ್ತೋರ್ವ ಪುತ್ರನ ಮನೆಗೆ ಒಳರಸ್ತೆಗಾಗಿ ಹಳಿಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಮಹಿಳೆಯ ದೀಹ ಛಿದ್ರವಾಗಿ ಗುರುತ್ತಿಸಲಾರದಂತಿತ್ತು, ಆದರೆ ದೇಹದಲ್ಲಿ ಕಾರ್ನಾಡಿನ ನರ್ಸಿಂಗ್ ಹೋಮ್ ಒಂದರ ಚಿಕಿತ್ಸೆಯ ಚೀಟಿ ಇದ್ದುದರಿಂದ ಪೊಲೀಸರಿಗೆ ಮಹಿಳೆಯ ಗುರುತು ಹಿಡಿಯುವಲ್ಲಿ ಸಹಕಾರಿಯಾಯಿತು.

Comments

comments

Leave a Reply

Read previous post:
ಕಿನ್ನಿಗೋಳಿಯಲ್ಲಿ ಯೋಗಾಂಜಲಿ – 2012

 ಸ್ವಸ್ಥ ಸಮಾಜಕ್ಕೆ ಯೋಗ ಪರಮೌಷಧ, ಯೋಗದಿಂದ ರೋಗ ದೂರ ಮಾಡಲು ಸಾಧ್ಯ ಎಂದು ಕಟೀಲಿನ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಯುಗಪುರುಷ, "ಶ್ರೀ...

Close