ಹಳೆಯಂಗಡಿ; “ಹೆಬ್ರಾನ್’ ವಿರುದ್ಧ ಬೃಹತ್ ಪ್ರತಿಭಟನೆ

Narendra Kerekadu

ಅಸಹಾಯಕರ, ದಲಿತರ, ಅಸಹಾಯಕತೆಯನ್ನು ಬಳಸಿಕೊಂಡು ಮತಾಂತರದಂತಹ ದೌರ್ಜನ್ಯ ಮಾಡುತ್ತಿರುವ ಹಳೆಯಂಗಡಿಯಲ್ಲಿ ವಿವಾದಾತ್ಮಕ ಕೇಂದ್ರವಾಗಿರುವ ಹೆಬ್ರಾನ್ ಅಸೆಂಬ್ಲಿ ವಿರುದ್ಧ ಮತಾಂತರ ಕೇಂದ್ರ ಮತ್ತು ಅನಧಿಕೃತ ಪ್ರಾರ್ಥನಾ ಮಂದಿರ ಎಂದು ಆರೋಪಿಸಿ ಭಾನುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೃಹತ್ ಸಾರ್ವಜನಿಕರ ಸಭೆಯಲ್ಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೋ ಆರೋಪಿಸಿ ಭಾನುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಬೃಹತ್ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದರು.
ಎಸ್.ಎಸ್.ಸತೀಶ್ ಭಟ್ ಮಾತನಾಡಿ ಮುಲ್ಕ್ಕಿ ಮಹಿಳೆಯ ಕೊಲೆ, ಹಳೆಯಂಗಡಿ, ಕಿನ್ನಿಗೋಳಿ, ಸರಣಿ ಕಳ್ಳತನದ ತನಿಖೆ ಬಿಟ್ಟು ಪ್ರಾರ್ಥನಾ ಮಂದಿರದ ಪರವಾಗಿ ಅಮಾಯಕರನ್ನು ಬಂಧಿಸಿ ಸುಳ್ಳು ದಾಖಲೆ ಸೃಷ್ಠಿಸುವ ಹೀನ ಕೆಲಸಕ್ಕೆ ತಕ್ಕ ಉತ್ತರ ಸಿಗಲಿದೆ ಎಂದು ಹೇಳಿದರು.
ರಾಮಚಂದ್ರ ಶೆಣೈ, ವಿನೋದ್ ಬೊಳ್ಳೂರು, ಸತೀಶ್ ಮುಂಚೂರು, ಈಶ್ವರ ಕಟೀಲು, ಕಸ್ತೂರಿ ಪಂಜ, ಸತೀಶ್ ಅಂಚನ್ ಮುಲ್ಕಿ, ವಿನೋದ್ ಎಸ್,.ಸಾಲ್ಯಾನ್, ದೇವಪ್ರಸಾದ ಪುನರೂರು, ಮಹಾಬಲ ಸಾಲ್ಯಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಇನ್ನಿತರರು ಸಭೆಯಲ್ಲಿ ನೇತೃತ್ವ ವಹಿಸಿದ್ದರು.
ಸಭೆಯ ಆರಂಭದಲ್ಲಿ ಪಾವಂಜೆ ದೇವಸ್ಥಾನದಿಂದ ಹಳೆಯಂಗಡಿ ಒಳಪೇಟೆಯಾಗಿ ಮುಖ್ಯ ರಸ್ತೆಯ ಮೂಲಕ ಪಡುಪಣಂಬೂರುವಿನಿಂದ ರಾಷ್ಟ್ರೀಯ ಹೆದ್ದಾರಿ ಬಳಿಯವರಗೆ ನಡೆದ ಬೃಹತ್ ಮೆರವಣಿಗೆಯಲ್ಲಿ ಸುಮಾರು ಒಂದು ಸಾವಿರ ಸಾರ್ವಜನಿಕರು ಕಪ್ಪು ಪಟ್ಟಿ ಧರಿಸಿ, ಮೌನ ಮೆರವಣಿಗೆ ನಡೆಸಿದರು ಅಲ್ಲದೇ ಮಹಿಳೆಯರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಪೊಲೀಸ್ ಅಧಿಕಾರಿಗಳಾದ ಪುಟ್ಟಮಾದಯ್ಯ, ಬೆಳ್ಳಿಯಪ್ಪ, ವೆಲೆಂಟನ್ ಡಿಸೋಜಾ, ಬಶೀರ್ ಅಹ್ಮದ್, ಸುನಿಲ್ ಪಾಟಿಲ್ ಇನ್ನಿತರರು ಭಿಗಿ ಬಂದೋಬಸ್ತನ್ನು ನೀಡಿದ್ದರು.

ಶೂಟಿಂಗ್ ಆಕ್ಷೇಪ
ಮೆರವಣಿಗೆ ಪ್ರಾರ್ಥನಾ ಮಂದಿರದ ಬಳಿ ಬರುತ್ತಿದ್ದಾಗ ಒಳಗೆ ನಡೆಸುತ್ತಿದ್ದ ಪ್ರಾರ್ಥನೆಯ ಧ್ವನಿವರ್ಧಕದ ಶಬ್ದವನ್ನು ಜೋರಾಗಿಸಿದ್ದು ಮತ್ತು ತೆರೆಮರೆಯಲ್ಲಿ ಮರವಣಿಗೆಯ ಶೂಟಿಂಗ್ ನಡೆಸುತ್ತಿದ್ದ ಮಂದಿರದವರನ್ನು ಮುಲ್ಕಿ ಸಬ್‌ಇನ್ಸ್‌ಪೆಕ್ಟರ್ ಸುನಿಲ್ ಪಾಟಿಲ್ ತರಾಟೆಗೆ ತೆಗೆದುಕೊಂಡರು ಈ ನಡುವೆ ಫ್ರಾಂಕ್ಲಿನ್ ಮೊಂತೆರೋ ಸಹಿತ ಪೊಲೀಸರು, ಮಾಧ್ಯಮವರು ಮಂದಿರವನ್ನು ಒಳಪ್ರವೇಶಿಸಿದಾಗ ಅಲ್ಲಿನವರು ಆಕ್ಷೇಪ ವ್ಯಕ್ತ್ತಪಡಿಸಿದರು. ಆಗ ಪ್ರತಿಭಟನಾಕಾರರ ಮತ್ತು ಪೊಲೀಸರ ನಡುವೆ ಹೊರಗೆ ಮಾತಿನ ಚಕಮಕಿ ನಡೆದಾಗ ಬಿಗಿ ವಾತಾವರಣ ನಿರ್ಮಾಣ ಆಯಿತು ತತ್‌ಕ್ಷಣ ಸಭೆಯ ನೇತೃತ್ವ ವಹಿಸಿದ್ದ ಸತೀಶ್ ಭಟ್ ಸಹಿತ ಇತರರು ಸಮಾಧಾನಿಸಿ ಸಭೆಗೆ ಕಾರ್ಯಕರ್ತರನ್ನು ಕರೆತಂದಾಗ ಪೊಲೀಸರೆ ನಿಟ್ಟುಸಿರು ಬಿಟ್ಟರು.

 

Comments

comments

Leave a Reply

Read previous post:
ಏಳಿಂಜೆಯ “ನವಚೇತನ”ಕ್ಕೆ ರಜತ ಸಂಭ್ರಮ

Narendra Kerekadu ಒಂದು ಕಡೆ ಶಾಂಭವಿ ನದಿಯ ತಟ, ನದಿಯ ಅಕ್ಕ ಪಕ್ಕ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ಗಡಿ ಪ್ರದೇಶ. ಸುತ್ತಲೂ ಹಸಿರು...

Close