ಎಸ್.ಕೋಡಿ.ಸಂಗಮ ಮಹಿಳಾ ಮಂಡಲದ ವಾರ್ಷಿಕೋತ್ಸವ, ಸನ್ಮಾನ

ಎಸ್.ಕೋಡಿಯ ಸಂಗಮ ಮಹಿಳಾ ಮತ್ತು ಯುವತಿ ಮಂಡಲದ 9ನೇ ವಾರ್ಷಿಕೋತ್ಸವ ಶನಿವಾರ ಎಸ್.ಕೋಡಿಯ ಸಂಗಮ ಸಮಾಜ ಭವನದಲ್ಲಿ ನಡೆಯಿತು.

ಪಕ್ಷಿಕೆರೆ ಚರ್ಚ್‌ನ ಸಹಾಯಕ ಧರ್ಮ ಗುರು ರೆ|ಫಾ| ಸುನಿಲ್ ಪ್ರವೀಣ್ ಪಿಂಟೋ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ರೋಟರಿ ಮಾಜಿ ಅಧ್ಯಕ್ಷ ಶರತ್ ಶೆಟ್ಟಿ, ಇನ್ನರ್ ವಿಲ್ ಅಧ್ಯಕ್ಷೆ ಜಾನೆಟ್ ರೊಸಾರಿಯೋ, ಶ್ರೀ ದೇವಿ ಚಿಲ್ಡ್ರನ್ಸ್ ಪ್ಲೇ ಸ್ಕೂಲ್‌ನ ಮಲ್ಲಿಕಾ ಪೂಂಜಾ, ಮಹಿಳಾ ಮಂಡಲದ ಅಧ್ಯಕ್ಷೆ ಜಯಲಕ್ಷ್ಮೀ ರಾವ್, ಕಾರ್ಯದರ್ಶಿ ಪ್ರಮೀಳಾ ಡಿ.ಸುವರ್ಣ, ಕೋಶಾಧಿಕಾರಿ ಶಶಿ ಸುರೇಶ್ ಉಪಸ್ಥಿತಿಯಲ್ಲಿ ವಿಕಲಚೇತನ ಲಕ್ಷ್ಮಣ ಶೆಟ್ಟಿಗಾರರನ್ನು ಸನ್ಮಾನಿಸಲಾಯಿತು. ರಾಜೇಶ್ವರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿ ಆಶಾ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
4ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

Reshma Mangalore ಟೀಮ್ ಮಂಗಳೂರು ಹವ್ಯಾಸಿ ಗಾಳಿಪಟ ತಂಡದ ಆಶ್ರಯದಲ್ಲಿ ಪಣಂಬೂರು ಸಮುದ್ರ ಕಿನಾರೆಯಲ್ಲಿ ನಡೆದ 2ನೇ  ದಿನದ  4ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದ ಛಾಯಾ ಚಿತ್ರಗಳು  

Close