ಕಿನ್ನಿಗೋಳಿ ವಲಯ ಒಕ್ಕೂಟಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿನ್ನಿಗೋಳಿ ವಲಯದ ಮೆನ್ನಬೆಟ್ಟು, ಕಿನ್ನಿಗೋಳಿ ವಿಭಾಗದ ಪ್ರಗತಿಬಂಧು ಸ್ವ ಸಹಾಯ ಸಂಘಗಳ ನೂತನ ಒಕ್ಕೂಟದ ಪದಗ್ರಹಣ ರವಿವಾರ ಯುಗಪುರುಷ ಸಭಾಭವನದಲ್ಲಿ ನಡೆಯಿತು.

ಯುಗಪುರುಷದ ಕೆ.ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ,  ಬೆಳ್ತಂಗಡಿ ’ಸಿರಿ’ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಗೀತಾ, ಆಶೀರ್ವಚನದಲ್ಲಿ ಕಿನ್ನಿಗೋಳಿ ಚರ್ಚ್‌ನ ಧರ್ಮಗುರು, ರೆ|ಫಾ| ಆಲ್ಪ್ರೆಡ್ ಪಿಂಟೋ, ಪುನರೂರು ಮಸೀದಿಯ ಧರ್ಮಗುರು ಎಸ್.ಎ.ಹಸನ್ ಸಖಾಫಿ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು, ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷೆ ಶೈಲಾ ಶೆಟ್ಟಿ, ಮುಂಬೈನ ಉದ್ಯಮಿ ಚಂದ್ರಶೇಖರ್, ಮಂಗಳೂರು ಜನ ಜಾಗೃತಿ ವೇದಿಕೆ ಸದಸ್ಯ ತಿಮ್ಮಪ್ಪ ಕೋಟ್ಯಾನ್, ವಲಯ ಮೇಲ್ವಿಚಾರಕಿ ಲತಾ ಅಮೀನ್ ಉಪಸ್ಥಿತರಿದ್ದರು.
ಕಿನ್ನಿಗೋಳೀ ಒಕ್ಕೂಟದ ನಿರ್ಗಮನಾಧ್ಯಕ್ಷ ವಸಂತ ಶೆಟ್ಟಿಗಾರ್, ನೂತನ ಅಧ್ಯಕ್ಷೆ ಯಶೋಧಾ ಎಸ್.ಕೋಡಿ, ಯಶೋಧಾ ರಾವ್, ಶಶಿರಾವ್, ಕೊಂಡೆಮೂಲ, ನಡುಗೋಡಿನ ನಾರಾಯಣ ಬಂಗೇರ, ಸುಜಾತ ಎಸ್, ಮೆನ್ನಬೆಟ್ಟುವಿನ ನವೀನ್, ನಯನ ಪದಪ್ರದಾನ ನಡೆಸಿಕೊಂಡರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಪುನರೂರಿನಲ್ಲಿ ಮೂಲ್ಕಿ ಒಕ್ಕೂಟಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿಲ್ಪಾಡಿ, ಶಿಮಂತೂರು, ಅತಿಕಾರಿ ಬೆಟ್ಟು ಪ್ರಗತಿಬಂಧು ಸ್ವ ಸಹಾಯ ಸಂಘ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರವಿವಾರ ಪುನರೂರಿನ ನಾಗವೀಣಾ...

Close