ಪುನರೂರಿನಲ್ಲಿ ಮೂಲ್ಕಿ ಒಕ್ಕೂಟಗಳ ಪದಗ್ರಹಣ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಿಲ್ಪಾಡಿ, ಶಿಮಂತೂರು, ಅತಿಕಾರಿ ಬೆಟ್ಟು ಪ್ರಗತಿಬಂಧು ಸ್ವ ಸಹಾಯ ಸಂಘ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರವಿವಾರ ಪುನರೂರಿನ ನಾಗವೀಣಾ ಸಭಾಗೃಹದಲ್ಲಿ ನಡೆಯಿತು.

ಮೂಲ್ಕಿ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಧನಂಜಯ ಕೋಟ್ಯಾನ್‌ರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ಮಂಗಳೂರು ತಾಲೂಕಿನ  ಪ್ರಬಂಧಕ ದೇವಪ್ಪ ಕಾರ್ಯಕ್ರಮ ಉದ್ಘಾಟಿಸಿದರು,. ಕಿಲ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು, ಮೂಲ್ಕಿ ವಿಜಯಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಫಮೀದಾ ಬೇಗಂ, ಅತಿಕಾರಿ ಬೆಟ್ಟು ಒಕ್ಕೂಟದ ನಿರ್ಗಮನ ಅಧ್ಯಕ್ಷೆ ಸುಕಲ.ಎ.ಶೆಟ್ಟಿ, ನೂತನ ಅಧ್ಯಕ್ಷೆ ಶಾರದಾ ವಸಂತ, ಕಿಲ್ಪಾಡಿಯ ನಿರ್ಗಮನ ಅಧ್ಯಕ್ಷೆ ಪ್ರತಿಮಾ, ನೂತನ ಅಧ್ಯಕ್ಷೆ ರಮಾ.ಎಸ್.ದೇವಾಡಿಗ, ಮೂಲ್ಕಿ ವಲಯ ಮೇಲ್ವಿಚಾರಕ ಕೊರಗಪ್ಪ ಗೌಡ ಉಪಸ್ಥಿತರಿದ್ದರು. ಪ್ರತಿಮಾ ಸ್ವಾಗತಿಸಿ, ಸೇವಾನಿರತ ಪ್ರಸಾದ್ ವರದಿ ನೀಡಿ, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ಎಸ್.ಕೋಡಿ.ಸಂಗಮ ಮಹಿಳಾ ಮಂಡಲದ ವಾರ್ಷಿಕೋತ್ಸವ, ಸನ್ಮಾನ

ಎಸ್.ಕೋಡಿಯ ಸಂಗಮ ಮಹಿಳಾ ಮತ್ತು ಯುವತಿ ಮಂಡಲದ 9ನೇ ವಾರ್ಷಿಕೋತ್ಸವ ಶನಿವಾರ ಎಸ್.ಕೋಡಿಯ ಸಂಗಮ ಸಮಾಜ ಭವನದಲ್ಲಿ ನಡೆಯಿತು. ಪಕ್ಷಿಕೆರೆ ಚರ್ಚ್‌ನ ಸಹಾಯಕ ಧರ್ಮ ಗುರು ರೆ|ಫಾ|...

Close