ಕಟೀಲು-ಮಹಾರಾಷ್ಟ್ರ ಶಾಸಕ ಗಿಲ್ಬರ್ಟ್ ಮೆಂಡೋನ್ಸಾ ತುಲಾಭಾರ ಸೇವೆ

ಮಹಾರಾಷ್ಟ್ರದ ಮೀರಾ ಬೈಂದರ್ ಕ್ಷೇತ್ರದ ಶಾಸಕ ಗಿಲ್ಬರ್ಟ್ ಮೆಂಡೋನ್ಸಾರವರ ತುಲಾಭಾರ ಸೇವೆ ಶ್ರೀ ಕ್ಷೇತ್ರ ಕಟೀಲಿನಲ್ಲಿ ಬುಧವಾರ ನಡೆಯಿತು. ಎನ್.ಸಿ.ಪಿ. ಮುಖ್ಯಸ್ಥ ಶರದ್ ಪವರ್ ಬಣದ ಶಾಸಕರಾಗಿರುವ ಮೆಂಡೋನ್ಸಾರವರ ಅಭಿಮಾನಿ ಬಳಗ ಮತ್ತು ಕಾರ್ಯಕರ್ತರು ತುಲಾಭಾರ ಸೇವೆ ನಡೆಸಿದರು. ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣ ಆಸ್ರಣ್ಣ ವಿಶೇಷ ಪೂಜೆ ನಡೆಸಿ ಪ್ರಸಾದ ನೀಡಿದರು. ಎನ್.ಸಿ.ಪಿ. ಮೀರಾ ಬೈಂದರ್ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಸಿ. ಸಾಲ್ಯಾನ್, ಮೀರಾ ಬೈಂದರ್ ಹೋಟೆಲ್ ಎಸೋಸಿಯೇಶನ್‌ನ ಅಧ್ಯಕ್ಷ ಬಾಲಕೃಷ್ಣ ಸಾಮಾನಿ, ಉಪಾಧ್ಯಕ್ಷ ಜಯ ಪ್ರಕಾಶ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ತಾಳಿಪಾಡಿಗುತ್ತು ರತ್ನಾಕರ ಶೆಟ್ಟಿ, ಮೀರಾ ಬೈಂದರ್ ಬಂಟ್ಸ್ ಫಾರಂ ಸಲಹೆಗಾರ ಮಧುಕರ ಶೆಟಿ, ಪ್ರಧಾನ ಕಾರ್ಯದರ್ಶಿ ಮನ್ಮಥ ಕಡಂಬ, ದೀಪಕ್ ಆಸ್ಪತ್ರೆಯ ಮಾಲಕ ಡಾ| ಭಾಸ್ಕರ ಶೆಟ್ಟಿ, ಮುಲ್ಕಿ ಬಿಲ್ಲವ ಎಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಗೋಪಿನಾಥ ಪಡಂಗ, ಮುಂಬೈಯ ಹೋಟೆಲ್ ಉದ್ಯಮಿ ಮಾಕ್ಸಿಂ ಮಥಾಯಸ್, ಮುಲ್ಕಿ ಬಿಲ್ಲವ ಎಸೋಸಿಯೇಶನ್ ಸೇವಾದಳದ ರಾಜಣ್ಣ, ಪಡು ಮಾರ್ನಾಡು ಪಂಚಾಯತ್ ಅಧ್ಯಕ್ಷ ರಮೇಶ್ ಶೆಟ್ಟಿ ಹಾಗೂ ರಮೇಶ್ ಶೆಟ್ಟಿ ಪಡು ಮಾರ್ನಾಡು ಮತ್ತಿತರಿದ್ದರು.

 

Comments

comments

Leave a Reply

Read previous post:
ಬೈಕ್ ಡಿಕ್ಕಿ ಪಾದಾಚಾರಿ ಸಾವು

ಕಿನ್ನಿಗೋಳಿಯ ರಾಮಮಂದಿರ ಬಳಿಯ ಗ್ರಾಮಕರಣಿಕರ ಕಛೇರಿ ಬಳಿಯಲ್ಲಿ ನಿನ್ನೆ ಸಂಜೆ ಬೈಕ್ ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದುದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಪಾದಾಚಾರಿ ಮಹಿಳೆಯನ್ನು...

Close