ಜ.28ರಂದು ಕಿನ್ನಿಗೋಳಿಯಲ್ಲಿ ಲಯನ್ಸ್‌ ಪ್ರಾಂತೀಯ ಸಮ್ಮೇಳನ

ಲಯನ್ಸ್ ಜಿಲ್ಲೆ 324-ಡಿ5ರ ಪ್ರಾಂತ್ಯ 6ರ ಪ್ರಾಂತೀಯ ಸಮ್ಮೇಳನ ಜನವರಿ 28 ರಂದು ಸಂಜೆ 4ಕ್ಕೆ ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಸೋಮವಾರ ಯುಗಪುರುಷದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಾಂತ್ಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಈ ವಿಷಯ ತಿಳಿಸಿದರು. ಕಟೀಲಿನ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣರ ಆರ್ಶೀವಚನದೊಂದಿಗೆ ಮೂಡಬಿದಿರೆಯ ಡಾ| ಎಂ.ಮೋಹನ ಆಳ್ವರ ಉಪಸ್ಥಿತಿಯಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಸವಿತಾ ಪಿ.ಶೆಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಐಕಳ ಹರೀಶ್ ಶೆಟ್ಟಿಯವರಿಗೆ ಸನ್ಮಾನ ನಡೆಯಲಿದ್ದು, ಕಿರು ತೆರೆ ಕಲಾವಿದ ರಿಚರ್ಡ್ ಲೂವಿಸ್ ರಿಂದ ಹಾಸ್ಯ ಕಾರ್ಯಕ್ರಮ, ಕಲಾವತಿ ಬಳಗದಿಂದ ಸಂಗೀತ ರಸಮಂಜರಿ ನಡೆಯಲಿದೆ. ಪ್ರಾಂತ್ಯದ 8 ಕ್ಲಬ್‌ಗಳಿಂದ ಹಾಗೂ ಲಿಯೋ ಕ್ಲಬ್‌ಗಳು ಭಾಗವಹಿಸಲಿದ್ದಾರೆಂದು ಲಾರೆನ್ಸ್ ಫೆರ್ನಾಂಡಿಸ್ ತಿಳಿಸಿದರು. ಲಯನ್ಸ್‌ನ ಯೋಗೀಶ್ ರಾವ್ ಕೃಷ್ಣ ಸಾಲ್ಯಾನ್, ರಮೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

Comments

comments

Leave a Reply

Read previous post:
ಜ.25 ಕಟೀಲಿನಲ್ಲಿ ಮುಂಬೈ ಶಾಸಕ ಗಿಲ್ಬರ್ಟ್ ಮೆಂಡೋನ್ಸರ ತುಲಾ-ಭಾರ ಸೇವೆ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಮಹಾರಾಷ್ಟ್ರದ ಎನ್.ಸಿ.ಪಿ. ಮುಖ್ಯಸ್ಥ ಕೇಂದ್ರ ಸಚಿವ ಶರದ್ ಪವಾರ್‌ರ ನಿಕಟವರ್ತಿ ಶಾಸಕ ಗಿಲ್ಬರ್ಟ್ ಮೆಂಡೋನ್ಸರ ಸೇವಾರೂಪದ ತುಲಾ-ಭಾರ ಸೇವೆ ಬುಧವಾರ ಬೆಳಿಗ್ಗೆ 8.15ಕ್ಕೆ...

Close