ತೋಕೂರು ಕುಲಾಲ ಸಮಾಜ -ನೂತನ ಕಟ್ಟಡ ಉದ್ಘಾಟನೆ

ತೋಕೂರು ಕುಲಾಲ ಸಮಾಜ ಸಂಘದ ನೂತನ ಕಟ್ಟಡ ಜನವರಿ 29ರಂದು ಪೂರ್ವಾಹ್ನ 10ಕ್ಕೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲು ನೂತನ ಕಟ್ಟಡ ಉದ್ಘಾಟಿಸಲಿದ್ದು, ವಿಪಕ್ಷ ಮುಖ್ಯ ಸಚೇತಕ ಅಭಯ ಚಂದ್ರ ಜೈನ್ ಸಮಾರಂಭದ ಉದ್ಘಾಟನೆಯನ್ನು ನೆರೆವೇರಿಸಲಿದ್ದಾರೆಂದು ಸಂಘದ ಅಧ್ಯಕ್ಷ ಶ್ರೀಧರ್ ಬಂಗೇರ ತಿಳಿಸಿದ್ದಾರೆ. ಸೋಮವಾರ ಯುಗಪುರುಷದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ಸಮಾಜ ಭಾಂದವರು ಹಾಗು ದಾನಿಗಳ ಸಹಕಾರದಿಂದ ನಿರ್ಮಾಣಗೊಂಡ ಈ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ಕಂಬಾರರ ಸಂಘದ ರಾಜ್ಯಾಧ್ಯಕ್ಷರು ಶಿವಕುಮಾರ್ ಚೌಡ ಸೆಟ್ಟಿ ವಹಿಸಲಿದ್ದು, ಶ್ರೀ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆರ್ಶೀವಚನ ಗೈಯಲಿದ್ದಾರೆಂದರು. ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದು, ಸಮಾಜದ ವಿವಧ ಗಣ್ಯರು ಪಾಲುಗೊಳ್ಳಲಿದ್ದಾರೆ.
1951ರಲ್ಲಿ 10ನೇ ತೋಕೂರು ವಲಯದ ಸಮುದಾಯದವರು ’ಕುಲಾಲ ಸುಧಾರಕ ಸಂಘವನ್ನು’ ಆರಂಭಿಸಿದ್ದು. 1993ರಲ್ಲಿ ಪರಿಸರದ 13 ಗ್ರಾಮಗಳನ್ನು ಸೇರಿಸಿ ಕುಲಾಲ ಸಮಾಜ ಸೇವಾ ಸಂಘ ಎಂದು ಪುನರ್ ನಾಮಕರಣ ಮಾಡಲಾಗಿದ್ದು 1998ರಲ್ಲಿ ಎಸ್.ಕೋಡಿಯಲ್ಲಿ 10ಸೆಂಟ್ಸ್ ಜಾಗ ಖರೀದಿಸಿ ಕುಲಾಲ ಭವನ ನಿರ್ಮಿಸುವ ಉದ್ದೇಶ ಹೊಂದಲಾಯಿತು, 2005ರಲ್ಲಿ ಕುಲಾಲ ಮಹಿಳಾ ಸಂಘ ಪ್ರಾರಂಭಗೊಂಡು ಎರಡೂ ಸಂಘಗಳು ಜೊತೆಯಾಗಿ ಪ್ರತಿ ವರ್ಷ ವರಮಹಾಲಕ್ಷ್ಮೀ ಪೂಜೆ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಒಂದು ದಿನ ಬಲಿ ಉತ್ಸವ, ಸ್ವ-ಉದ್ಯೋಗ ತರಬೇತಿ ಮುಂತಾದ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ ಎಂದು ಸಂಘದ ಕಾರ್ಯದರ್ಶಿ ಜಿನರಾಜ್ ಜೆ.ಬಂಗೇರ ತಿಳಿಸಿದರು. ಮಹಿಳಾ ಸಂಘದ ಸದಸ್ಯೆ ಯರಿಂದ ’ದುಶ್ಯಂತ ಶಕುಂತಳೆ’ ನಾಟಕ ನಡೆಯಲಿದೆ ಎಂದು ಮಹಿಳಾ ಸಂಘದ ಅಧ್ಯಕ್ಷೆ ಶಾರದಾ ಜಿ. ಬಂಗೇರ ತಿಳಿಸಿದರು. ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷ ವೈ. ಕೃಷ್ಣ ಸಾಲ್ಯಾನ್, ಯೋಗೀಶ್ ಮೂಲ್ಯ ಸುದ್ದಿಗೋಷ್ಠಿಯಲ್ಲಿದ್ದರು.

Comments

comments

Leave a Reply

Read previous post:
ಜ.28ರಂದು ಕಿನ್ನಿಗೋಳಿಯಲ್ಲಿ ಲಯನ್ಸ್‌ ಪ್ರಾಂತೀಯ ಸಮ್ಮೇಳನ

ಲಯನ್ಸ್ ಜಿಲ್ಲೆ 324-ಡಿ5ರ ಪ್ರಾಂತ್ಯ 6ರ ಪ್ರಾಂತೀಯ ಸಮ್ಮೇಳನ ಜನವರಿ 28 ರಂದು ಸಂಜೆ 4ಕ್ಕೆ ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ. ಸೋಮವಾರ ಯುಗಪುರುಷದಲ್ಲಿ ನಡೆದ...

Close