ಸಹಭಾಗಿತ್ವದಲ್ಲಿ ಸಹ ಪಠ್ಯ ಚಟುವಟಿಕೆ ಅಣಕು ಸಂಸ್ಥೆ ಕಾರ್ಯಕ್ರಮ

ಸೈಂಟ್ ಮೇರಿಸ್ ಹಿ.ಪ್ರಾ.ಶಾಲೆ ಕಿನ್ನಿಗೋಳಿಯಲ್ಲಿ ಉಲ್ಲಂಜೆ ಹಾಗೂ ಪದ್ಮನೂರು ಕ್ಲಸ್ಟರಿನ ಸಹಭಾಗಿತ್ವದಲ್ಲಿ ಸಹ ಪಠ್ಯ ಚಟುವಟಿಕೆ ಅಣಕು ಸಂಸ್ಥೆ ಕಾರ್ಯಕ್ರಮ ನಡೆಯಿತು. ಉಭಯ ಕ್ಲಸ್ಟರಿನ ಎಲ್ಲಾ 17 ಶಾಲೆಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ಸುಮಾರು 200ರಷ್ಟು ಮಕ್ಕಳು ಹಾಗೂ ಉಪಾಧ್ಯಾಯರು ಭಾಗವಹಿಸಿದ್ದರು.  ಶಾಲಾ ಸಂಚಾಲಕರಾದ ರೆ|ಫಾ|ಆಲ್ಫ್ರೆಡ್ ಜೆ.ಪಿಂಟೋ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮೂಲ್ಕಿ ಹೋಬಳಿ ಮಟ್ಟದ ಶಿಕ್ಷಣ ಸಂಯೋಜಕರಾದ ಶ್ರೀ. ದಿನೇಶ್ ಕೆ., ಉಲ್ಲಂಜೆ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀ ಜಗದೀಶ್ ನಾವಡ, ಸ್ಥಳೀಯ ಚರ್ಚ್ ಪಾಲನಾ ಮಂಡಳೀಯ ಉಪಾಧ್ಯಕ್ಷರಾಗಿರುವ ಶ್ರೀ ಲಾನಲ್ ಪಿಂಟೋ ಹಾಗೂ ಬಳಕುಂಜ ಹಿ.ಪ್ರಾ.ಶಾಲೆಯ ಶ್ರೀ ಸುಕುಮಾರವರು ಉಪಸ್ಥಿತರಿದ್ದರು.ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅನೆಟ್ ಸ್ವಾಗತಿಸಿದರು, ಸಹಶಿಕ್ಷಕಿ ಜಸಿಂತ ಡಿ’ಸೋಜರವರು ಕಾರ್ಯಕ್ರಮ ನಿರ್ವಹಿಸಿದರು. ಗೌರವ ಶಿಕ್ಷಕಿ ಶ್ರೀಮತಿ ಗೀತಾ ವೈ. ಇವರು ವಂದನಾರ್ಪಣೆಗೈದರು.

Comments

comments

Leave a Reply

Read previous post:
ತೋಕೂರು ಕುಲಾಲ ಸಮಾಜ -ನೂತನ ಕಟ್ಟಡ ಉದ್ಘಾಟನೆ

ತೋಕೂರು ಕುಲಾಲ ಸಮಾಜ ಸಂಘದ ನೂತನ ಕಟ್ಟಡ ಜನವರಿ 29ರಂದು ಪೂರ್ವಾಹ್ನ 10ಕ್ಕೆ ನಡೆಯಲಿದೆ. ಸಂಸದ ನಳಿನ್ ಕುಮಾರ್ ಕಟೀಲು ನೂತನ ಕಟ್ಟಡ ಉದ್ಘಾಟಿಸಲಿದ್ದು, ವಿಪಕ್ಷ ಮುಖ್ಯ...

Close