ಕಿಲೆಂಜೂರು ನಾಗಮಂಡಲೋತ್ಸವಕ್ಕೆ ತೋರಣಮುಹೂರ್ತ, ನಂದಗೋಕುಲ ಉದ್ಘಾಟನೆ

ಕಿಲೆಂಜೂರು ಮಾಡರ ಮನೆ ಕುಟುಂಬಿಕರ ನಾಗ ದೇವರಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ ಜ.28 ನಡೆಯಲಿದ್ದು ಉಗ್ರಾಣದ ಉದ್ಘಾಟನೆ ಹಾಗೂ ತೋರಣ ಮುಹೂರ್ತ ಬುಧವಾರ ನಡೆಯಿತು. ಅತ್ತೂರು ಬೈಲು ಗಣಪತಿ ಉಡುಪ, ಜಯರಾಮ ಉಡುಪ, ವೆಂಕಟರಾಜು ಉಡುಪ, ಯುಗಪುರುಷದ ಭುವನಾಭಿರಾಮ ಉಡುಪರ ಉಪಸ್ಥಿತಿಯಲ್ಲಿ ಮಾಡರ ಮನೆ ಕುಟುಂಬಿಕರ ಹಾಗೂ ಸಮಿತಿಯ ಪದಾಧಿಕಾರಿಗಳ ಸಮಕ್ಷಮದಲ್ಲಿ ನಡೆಯಿತು.

ಅತಿಥಿ ಗೃಹ ನಂದಗೋಕುಲದ ಉದ್ಘಾಟನೆಯನ್ನು ಕಟೀಲಿನ ಅನಂತ ಪದ್ಮನಾಭ ಆಸ್ರಣ್ಣ ನೆರವೇರಿಸಿದರು. ಕೇಮಾರುವಿನ ’ಸಾಂದೀಪನೀ’ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆ ಉಪ ಕಾರ್ಯದರ್ಶಿ ಕೆ.ಸುಧಾಕರ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಬಜಪೆ ವಿ.ಎಸ್.ಎಸ್. ಬ್ಯಾಂಕ್ ಅಧ್ಯಕ್ಷ ಎಕ್ಕಾರು ಮೋನಪ್ಪ ಶೆಟ್ಟಿ, ಕಿನ್ನಿಗೋಳಿ ವಿ.ಎಸ್.ಎಸ್.ಬ್ಯಾಂಕ್ ಅಧ್ಯಕ್ಷ ಕೆ.ಲವ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಮಾಡರ ಮನೆಯ ಪದ್ಮನಾಭ ಮಾಡ, ಭವಾನಿ ಶಂಕರ ಶೆಟ್ಟಿ, ಸಮಿತಿಯ ಅಧ್ಯಕ್ಷ ಐಕಳ ಗಣೇಶ್ ಶೆಟ್ಟಿ, ಕಾರ್ಯದರ್ಶಿ ದಾಮೋದರ ಕೆ. ಶೆಟ್ಟಿ, ಕೋಶಾಧಿಕಾರಿ ಶೇಖರ ಮಾಡ, ಲೆಕ್ಕಪರಿಶೋಧಕ ವಿಶ್ವನಾಥ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ರಾಜ್ಯ ಮಟ್ಟದ ಕರಾಟೆ ಬಹುಮಾನ ಗಳಿಸಿದ ಸ್ಪರ್ಧಿಗಳು

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಫ್ರೌಡ ಶಾಲೆಯಲ್ಲಿ ಜರಗಿದ ಸಾರ್ವಜನಿಕ ಶಿಕ್ಷಣ ಇಲಾಖಾ ವತಿಯಿಂದ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದ ಗೋಶಿಯನ್ ರಿಯೋ ಸ್ಟೈಲ್ ಅಫ್ ಇಂಡಿಯನ್...

Close