ಕಟೀಲು ಕಾಲೇಜು ವಿದ್ಯಾರ್ಥಿ ಅಪಘಾತದಲ್ಲಿ ಮೃತ್ಯು

News by Narendra Kerekadu

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿ ಬಜಪೆ ಸುಂಕದಕಟ್ಟೆ ಬೊಮ್ಮನ ಕೋಡಿ ನಿವಾಸಿ ಉಮೇಶ್ ಪೂಜಾರಿಯವರ ಹಿರಿಯ ಮಗ ನಿರಂಜನ್ ಪೂಜಾರಿ(21) ಗುರುವಾರ ಬೆಳಿಗ್ಗೆ ಎಕ್ಕಾರು ಬಳಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾನೆ.
ಕಾಲೇಜಿನಲ್ಲಿ ಗಣರಾಜ್ಯೋತ್ಸವಕ್ಕೆ ಭಾಗವಹಿಸಲು ನಿರಂಜನ್ ತನ್ನ ಸಹಪಾಠಿ ಸ್ನೇಹಿತ ಎಕ್ಕಾರು ದುರ್ಗಾ ನಗರದ ವಿಕ್ರಮ್ ಎನ್ನುವವನೊಂದಿಗೆ ಮೋಟರ್ ಬೈಕ್‌ನಲ್ಲಿ ಬರುತ್ತಿದ್ದಾಗ ಎಕ್ಕಾರು ಕಟೀಲು ದ್ವಾರದ ಬಳಿಯಲ್ಲಿ ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ನಿರಂಜನ್ ಸ್ಥಳದಲ್ಲಿಯೇ ಮೃತಪಟ್ಟನು.
ಹಿಂಬದಿ ಸವಾರ ವಿಕ್ರಮ್‌ನ ತಲೆಗೆ ಗಂಭೀರ ಗಾಯವಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ನಿರಂಜನ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ಆಗಿದ್ದು ಬಾಡಿ ಬಿಲ್ಡಿಂಗ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದು ಸ್ಥಳೀಯವಾಗಿ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದನು.

Comments

comments

Leave a Reply

Read previous post:
ನಿಧನ-ಮುಂಡ್ಕೂರು ಅಗ್ರಸಾಲೆ ದೊಡ್ಡಣ್ಣ ಶೆಟ್ಟಿ

 ಮುಂಡ್ಕೂರು ಅಗ್ರಸಾಲೆ ದೊಡ್ಡಣ್ಣ ಶೆಟ್ಟಿ(72)  ಜ.20 ರಂದು ಕಾಪುವಿನಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ, ಇದ್ದಾರೆ.

Close