ಪಂಜ ಹರಿಪಾದೆಯಲ್ಲಿ ಉಗ್ರಾಣ ಮುಹೂರ್ತ,ನೂತನ ಗರ್ಭ ಗೃಹ ಉದ್ಘಾಟನೆ.

ಪಂಜ ಶ್ರೀ ಹರಿ ಪಾದೆ ಧರ್ಮ ದೈವ ಜಾರಂತಾಯ ದೈವಸ್ಥಾನದಲ್ಲಿ ಫೆಬ್ರವರಿ 2ರಂದು ಬ್ರಹ್ಮಕಲಶಾಭಿಶೇಕ ನಡೆಯಲಿದ್ದು, ಶುಕ್ರವಾರ ಧಾರ್ಮಿಕ  ಉಗ್ರಾಣ ಮುಹೂರ್ತ ಹಾಗೂ ನೂತನ ಗರ್ಭಗೃಹದ ಉದ್ಘಾಟನೆ ನಡೆಯಿತು.

ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಉಗ್ರಾಣ ಮುಹೂರ್ತ ನೆರವೇರಿಸಿದರೆ, ಮುಲ್ಕಿ ಸೀಮೆ ಅರಮನೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ನೂತನ ಗರ್ಭಗೃಹದ ಉದ್ಘಾಟನೆಯನ್ನು ನೆರವೇರಿಸಿದರು. ದೈವಸ್ಥಾನದ ಆಡಳಿತ ಮೊಕ್ತೇಸರ ಗುತ್ತಿನಾರ್ ಭೋಜ ಶೆಟ್ಟಿ ನಲ್ಯ ಗುತ್ತು, ಪಂಜದ ಗುತ್ತು ವಿಶ್ವನಾಥ ಶೆಟ್ಟಿ, ಪಂಜದ ಗುತ್ತು ಶಾಂತರಾಮ್ ಶೆಟ್ಟಿ, ಮತ್ತಿತರರಿದ್ದರು.

ಪಂಜ ವಾಸುದೇವ ಭಟ್ ಪ್ರಾರ್ಥಿಸಿ, ಪಂಜ ಭಾಸ್ಕರ ಭಟ್ ಪ್ರಸ್ಥಾವನೆ ಗೈದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಟಿ. ಶೆಟ್ಟಿ ನಲ್ಯ ಗುತ್ತು ಸ್ವಾಗತಿಸಿ, ಉಮೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಶನಿವಾರ ಸಂಜೆ 5.00ಕ್ಕೆ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಸ್ವಾಗತ ಗೋಪುರ ಉದ್ಘಾಟಿಸಲಿದ್ದು, ಆನೆಗೊಂದಿ ಸಂಸ್ಥಾನದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮಿಗಳು ಹಾಗೂ ಕಟೀಲಿನ ಅನಂತ ಆಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ, ಬಳಿಕ ಕಟೀಲಿನ ಶ್ರೀ ದುರ್ಗಾ ಮಕ್ಕಳ ಮೇಳದಿಂದ “ಕುಶ-ಲವ” ಯಕ್ಷಗಾನ-ಬಯಲಾಟ ನಡೆಯಲಿದೆ.

Comments

comments

Leave a Reply

Read previous post:
ಸಂಕಲಕರಿಯದಲ್ಲಿ ವಾರ್ಷಿಕೋತ್ಸವ: ಸನ್ಮಾನ

ಸಂಕಲಕರಿಯದ ವಿಜಯ ಯುವಕ ಸಂಘದ 29ನೇ ಹಾಗೂ ಖುಷಿ ಮಹಿಳಾ ಮಂಡಲದ 6ನೇ ವಾರ್ಷಿಕೋತ್ಸವ ಬುಧವಾರ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ ಮುಂಡ್ಕೂರು ದೊಡ್ಡಮನೆ ದಾಸು ನಿವಾಸ...

Close