ಮುಲ್ಕಿ ಗಣರಾಜ್ಯೋತ್ಸವ

Photos by Prakash M Suvarna

ಮುಲ್ಕಿ ಗಣರಾಜ್ಯೋತ್ಸವ

ಮುಲ್ಕಿ ನಗರ ಪಂಚಾಯತ್ ಆಶ್ರಯದಲ್ಲಿ ನಡೆದ 63ನೇ ಗಣರಾಜ್ಯೋತ್ಸವ ಸಮಾರಂಭವನ್ನು ಸರಕಾರದ ವಿಪಕ್ಷ ಮುಖ್ಯ ಸಚೇತಕ ಕೆ.ಅಭಯಚಂದ್ರ ಜೈ ದ್ವಜರೋಹಣವನ್ನು ಗೈದು  “ನಮ್ಮ ದೇಶದ ಉಜ್ವಲ ಭವಿಷ್ಯಕ್ಕಾಗಿ ಒಟ್ಟಾಗಿ ದುಡಿಯುವ” ಎಂದು ಹೇಳಿದರು . ಮುಲ್ಕಿ ನಗರ ಪಂಚಾಯತ್‌ನ ಅಧ್ಯಕ್ಷ ಶಶಿಕಾಂತ ಶೆಟ್ಟಿ ಸಾಂದರ್ಭಿಕವಾಗಿ ಮಾತಾನಾಡಿ, ಮುಲ್ಕಿ ಎ.ಎಸ್.ಐ ರಾಘವ ಅವರ ನೇತೃತ್ವದಲ್ಲಿ ನಡೆದ ಪಥಸಂಚಲನದ ಕಾರ್ಯಕ್ರಮದಲ್ಲಿ ಮುಲ್ಕಿ ಗೃಹರಕ್ಷಕ ದಳದ ಮುಖ್ಯಸ್ಥ ಎಚ್. ಮನ್ಸೂರ್ ಸಹಕರಿಸಿದ್ದರು. ಪೊಲೀಸ್, ಗೃಹ ರಕ್ಷಕ ದಳ, ವಿಜಯ ಕಾಲೇಜು ಮತ್ತು ಮುಲ್ಕಿನಾರಾಯಣ ಗುರು ಅಂಯುಕ್ತ ಕಾಲೇಜಿನ ಎನ್.ಸಿ.ಸಿ ಪಡೆಯ ಆರ್ಮಿ, ನೇವಿ, ಸ್ಕೌಟ್ – ಎಂಡ್ ಗೈಡ್ಸ್ ಹಾಗೂ ಭಾರತ್ ಸೇವಾ ದಳದ ಅರುಣೋದಯ ಶಾಖೆ ಮತ್ತಿತರ ವಿದ್ಯಾರ್ಥಿಗಳು ಪಥ ಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸ್ವಾತಂತ್ರ್ಯ ಹೋರಾಟಗಾರ ಮುಲ್ಕಿ ದಿ| ವಿ.ಸಂಜೀವ ಕಾಮತ್ ಅವರ ಪತ್ನಿ ಶಾಂತಾ ಬಾಯಿ ಅವರನ್ನು ಸನ್ಮಾನಿಸಲಾಯಿತು. ಪೊಲೀಸ್ ಇಲಾಖೆಯಿಂದ ನಿವೃತ್ತರಾಗಲಿರುವ ಎ.ಎಸ್.ಐ ರಾಘವ, ನಗರ ಪಂಚಾಯತ್ ಕಂದಾಯ ಅಧಿಕಾರಿ ಹೂವಯ್ಯ ಶೆಟ್ಟಿ, ವಿಜಯಾ ಕಾಲೇಜಿನ ಎನ್.ಸಿ.ಸಿ. ಕೆಡೆಟ್‌ಗಳಾದ ರೋಹಿತ್, ಕೆವಿನ್ ಪೀಟರ್, ದೇಹದಾರ್ಡ್ಯ ಪಟು ಪ್ರಸನ್ನಜಿತ್ ಶೆಟ್ಟಿ ಮುಂತಾದವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಕಾಲೇಜುಗಳ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನಾಕರ್ಷಣೆ ಪಡೆಯಿತು.  ಮುಲ್ಕಿ ನಗರ ಪಂಚಾಯತ್ ಮುಖ್ಯಾಧಿಕಾರಿ ಹರಿಶ್ಚಂದ್ರ ಪಿ. ಸಲ್ಯಾನ್ ವಂದಿಸಿದರು, ಉಪಾಧ್ಯಾಕ್ಷ ಯೋಗೀಶ್ ಕೋಟ್ಯಾನ್, ಸ್ಥಾಯೀ ಸಮಿತಿ ಅಧ್ಯಕ್ಷೆ ವಿಮಲಾ ಪೂಜಾರಿ ಮತ್ತಿತರರಿದ್ದರು.

Comments

comments

Leave a Reply

Read previous post:
ಕಟೀಲು ಕಾಲೇಜು ವಿದ್ಯಾರ್ಥಿ ಅಪಘಾತದಲ್ಲಿ ಮೃತ್ಯು

News by Narendra Kerekadu ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿ.ಎ. ವಿದ್ಯಾರ್ಥಿ ಬಜಪೆ ಸುಂಕದಕಟ್ಟೆ ಬೊಮ್ಮನ ಕೋಡಿ ನಿವಾಸಿ ಉಮೇಶ್ ಪೂಜಾರಿಯವರ...

Close