ಸಂಕಲಕರಿಯದಲ್ಲಿ ವಾರ್ಷಿಕೋತ್ಸವ: ಸನ್ಮಾನ

ಸಂಕಲಕರಿಯದ ವಿಜಯ ಯುವಕ ಸಂಘದ 29ನೇ ಹಾಗೂ ಖುಷಿ ಮಹಿಳಾ ಮಂಡಲದ 6ನೇ ವಾರ್ಷಿಕೋತ್ಸವ ಬುಧವಾರ ನಡೆಯಿತು. ಯುಗಪುರುಷದ ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ ಮುಂಡ್ಕೂರು ದೊಡ್ಡಮನೆ ದಾಸು ನಿವಾಸ ದಿ| ಮೀನಾಕ್ಷಿ ದಾಸು ಶೆಟ್ಟಿ ಸ್ಮರಣಾರ್ಥ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ, ಸಾಧಕರ ಸನ್ಮಾನ ನಡೆಯಿತು.

ಸಾಧಕರ ನೆಲೆಯಲ್ಲಿ ಯುವಕ ಸಂಘದ ನಿರ್ಗಮನಾಧ್ಯಕ್ಷ ಸುಧಾಕರ ಸಾಲ್ಯಾನ್ ಹಾಗೂ ಮಹಿಳಾ ಮಂಡಲದ ನಿರ್ಗಮನಾಧ್ಯಕ್ಷೆ ಹರಿಣಾಕ್ಷಿ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು. ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಾಂತ್ರಾಲ ಗುತ್ತು ವಾದಿರಾಜ ಶೆಟ್ಟಿ, ಕಿನ್ನಿಗೋಳಿ ಇನ್ನರ್ ವಿಲ್ ಅಧ್ಯಕ್ಷೆ ಜಾನೆಟ್ ರೊಸಾರಿಯೋ, ಮುಂಡ್ಕೂರು ದೊಡ್ಡಮನೆ ರೂಪರಾಜ್ ಶೆಟ್ಟಿ, ಸಚ್ಚರಪರಾರಿ ಹರೀಶ್ ಶೆಟ್ಟಿ, ಮುಂಡ್ಕೂರು ದೊಡ್ಡಮನೆ ಸುಶೀಲ ಮಹಾಬಲ ಶೆಟ್ಟಿ, ಮುಖ್ಯ ಅತಿಥಿಗಳಾಗಿದ್ದು ಯುವಕ ಸಂಘದ ಗೌರವಾಧ್ಯಕ್ಷ ಭಾಸ್ಕರ ಶೆಟ್ಟಿ, ಅಧ್ಯಕ್ಷ ವಿಶ್ವಿತ್ ಶೆಟ್ಟಿ, ಕಾರ್ಯದರ್ಶಿ ಪವನ್ ಶೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷೆ ಬೇಬಿ ಕೆ.ಶೆಟ್ಟಿ, ಕಾರ್ಯದರ್ಶಿ ಸರಳ ಕೆ. ಶೆಟ್ಟಿ, ಉಪಸ್ಥಿತರಿದ್ದರು. ಶರತ್ ಶೆಟ್ಟಿ ಸ್ವಾಗತಿಸಿ, ಗೀತಾ ಪ್ರಭು, ಕೃಷ್ಣ ಸಾಲ್ಯಾನ್ ಸನ್ಮಾನ ಪತ್ರ ವಾಚಿಸಿದರು. ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಂದ ನೃತ್ಯ, ಮಹಿಳಾ ಮಂಡಳದವರಿಂದ ಕೃಷ್ಣ ಸಾಲ್ಯಾನ್ ಸಂಕಲಕರಿಯ ಇವರ “ಉಂದು ಆಪಿನಿ ಪೂರಾ ಎಡ್ಡೆಗೆ!”, ವಿಜಯ ಕಲಾವಿದರಿಂದ ತಿಲಕ್ ರಾಜ್ ಕಾಟಿಪಳ್ಳರವರ “ಜನ್ನೆ ಜನ ಎಂಚ?” ತುಳು ನಾಟಕ ನಡೆಯಿತು.

Comments

comments

Leave a Reply

Read previous post:
ಮುಲ್ಕಿ ಗಣರಾಜ್ಯೋತ್ಸವ

Photos by Prakash M Suvarna ಮುಲ್ಕಿ ಗಣರಾಜ್ಯೋತ್ಸವ ಮುಲ್ಕಿ ನಗರ ಪಂಚಾಯತ್ ಆಶ್ರಯದಲ್ಲಿ ನಡೆದ 63ನೇ ಗಣರಾಜ್ಯೋತ್ಸವ ಸಮಾರಂಭವನ್ನು ಸರಕಾರದ ವಿಪಕ್ಷ ಮುಖ್ಯ ಸಚೇತಕ ಕೆ.ಅಭಯಚಂದ್ರ...

Close