ಕೆಮ್ರಾಲ್ ಪರಿಸರ ಮಾಹಿತಿ ಕಾರ್ಯಕ್ರಮ

ದಿನಾಂಕ 25 ರಂದು ಸರಕಾರಿ ಪ್ರೌಢ ಶಾಲೆ ಕೆಮ್ರಾಲ್ ಇಲ್ಲಿ ಮಾನಸ ಪರಿಸರ ಸಂಘದ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಅತಿಥಿ ಉಪನ್ಯಾಸಕ್ಕಾಗಿ ಸರಕಾರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಜಗದೀಶ ಬಾಳ ಇವರು ಆಗಮಿಸಿದ್ದರು. ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಬಳಕೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತಾಗಿ ಪವರ್ ಪಾಯಿಂಟ್- ಪ್ರ್ರೆಸೆಂಟೇಶನ್ ಮೂಲಕ ವಿದ್ಯಾರ್ಥಿಗಳಿಗೆ ಹಲವಾರು ಉಪಯುಕ್ತ ಅಂಶಗಳನ್ನು ತಿಳಿಸಿಕೊಟ್ಟರು. ಪರಿಸರ ಸಂಘದ ಸಂಚಾಲಕರಾದ ರಾಮಚಂದ್ರ ಪೆರ್ಮುತ್ತಾಯ ಕೆ.ಎಂ. ಇವರು ಸ್ವಾಗತಿಸಿದರು, ಡೇವಿಡ್ ಧರ್ಮಪಾಲ, ದೈಹಿಕ ಶಿಕ್ಷಕರು ವಂದಿಸಿದರು. ಹಾಗೂ ಶಾಲಾ ಮುಖ್ಯಸ್ಥರು ಪ್ರಾಸ್ತಾಪಿಕ ಮಾತನ್ನಾಡಿದರು.

Comments

comments

Leave a Reply

Read previous post:
ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣ ನಿಧನ

ಮುಲ್ಕಿ ಮುಡಬಿದಿರೆ ಕ್ಷೇತ್ರದ ಮಾಜಿ ಶಾಸಕ ಕಾರ್ನಾಡು ಸೋಮಪ್ಪ ಸುವರ್ಣ (83)ರವರು ಅನಾರೋಗ್ಯದಿಂದ ಶನಿವಾರ ಬೆಳಿಗ್ಗೆ ನಿಧನ ಹೊಂದಿದರು. ಸಮಾಜದಲ್ಲಿ ಅಧ್ಯಾಪಕರಾಗಿ, ಸಮಾಜದ ಸಂಘಟನೆಯ ಮುಲಕ ಸಂಘ ಶಕ್ತಿಯನ್ನು...

Close