ಫೆಬ್ರವರಿ 11ರಂದು ಏಳಿಂಜೆಯಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್

  ಮಂಗಳೂರು ತಾಲೂಕಿನ ನವಚೇತನ ಯುವಕ ಮಂಡಲ ಏಳಿಂಜೆ ಇದರ ರಜತ ವರ್ಷಾಚರಣೆಯ ಅಂಗವಾಗಿ ರಜತವೈಭವ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಹೊನಲುಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ಫೆಬ್ರವರಿ 11ರಂದು ಏಳಿಂಜೆ ಪಟ್ಟೆಕ್ರಾಸ್ ಬಳಿ ಶಾಂಭವೀ ನದೀ ತೀರದ ಏಳಿಂಜೆ ಶ್ರೀ ಲಕ್ಷ್ಮೀಜನಾರ್ದನ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕರ್ನಾಟಕ, ಕೇರಳ, ರಾಜಸ್ತಾನ, ಮಹಾರಾಷ್ಟ್ರ, ತಮಿಳ್ನಾಡು, ರಾಜ್ಯಗಳ ಸ್ಟಾರ್ ಆಟಗಾರರನ್ನೊಳಗೊಂಡ ಆಹ್ವಾನಿತ 16 ತಂಡಗಳನ್ನು ಮುಂಬೈ, ಹೊರನಾಡಿನ, ಹಾಗೂ ಊರಿನ ಪ್ರತಿಷ್ಠಿತ ಗಣ್ಯರು ಪ್ರಾಯೋಜಿಸಲಿದ್ದು, ವಿಜೇತರಿಗೆ 51000ರೂ ನಗದು ಜತೆ ನವಚೇತನ ರಜತವೈಭವ ಟ್ರೋಫಿ ದೊರೆಯಲಿದೆ. ದ್ವಿತೀಯ ಸ್ಥಾನಿಗೆ 25000, ತೃತೀಯ ಸ್ಥಾನಿಗೆ ರೂ. 15000, ಚತುರ್ಥ ಸ್ಥಾನಿಗೆ ರೂ. 10000, ರೂ ಜತೆಗೆ ಟ್ರೋಫಿ ದೊರೆಯಲಿದೆ. ಉತ್ತಮ ಸವ್ಯ ಸಾಚಿ, ಸ್ಮ್ಯಾಶರ್, ಲಿಫ್ಟರ್, ಶಿಸ್ತಿನ ತಂಡಗಳಿಗೂ ನಗದು ಟ್ರೋಫಿ ದೊರೆಯಲಿದೆ.
ಸಂಜೆ 5 ಕ್ಕೆ ,ಮೂಡಬಿದಿರೆ ಯ ಡಾ| ಎಮ್ ಮೋಹನ ಆಳ್ವ, ಬೆಂಗಳೂರಿನ ಶೆಟ್ರಾನ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಏಳಿಂಜೆ ಕೋಂಜಾಲುಗುತ್ತು ದಿವಾಕರ ಶೆಟ್ಟಿ, ಕಾರ್ಕಳ ಪೊಲೀಸ್ ಉಪ ಅಧೀಕ್ಷಕ ಸಂತೋಷ ಕುಮಾರ್, ಮಂಗಳೂರಿನ ಶ್ರೀ ದೇವೀ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಸದಾನಂದ ಶೆಟ್ಟಿ ಪಂದ್ಯಾಟ ಉದ್ಘಾಟಿಸಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಕೆ.ಅಭಯಚಂದ್ರ ಜೈನ್, ಐಕಳ ಹರೀಶ್ ಶೆಟ್ಟಿ, ನಗ್ರಿಗುತ್ತು ವಿವೇಕ್ ಶೆಟ್ಟಿ,ಸುರೆಂದ್ರ ಕುಮಾರ್ ಹೆಗ್ಡೆ, ಬೈಲುಮೇಗಿನ ಮನೆ ನಿತ್ಯಾನಂದ ಶೆಟ್ಟಿ, ಸಖರಾಮ್ ಶೆಟ್ಟಿ, ಮುಂಡ್ಕೂರು ದೊಡ್ಡಮನೆ ರೂಪರಾಜ್ ಶೆಟ್ಟಿ, ಮುಖ್ಯ ಅತಿಥಿಗಳಾಗಲಿದ್ದಾರೆ.
ರಾಷ್ಟ್ರೀಯ ವಾಲಿಬಾಲ್ ತರಬೇತುದಾರ ನಾರಾಯಣ ಆಳ್ವ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಇಂಚರಾ .ಕೆ ಶೆಟ್ಟಿ ಕೊಡೆತ್ತೂರು, ವಿಶ್ವ ಪವರ್ ಲಿಫ್ಟಿಂಗ್ ಚಿನ್ನದ ಪದಕ ವಿಜೇತೆ ಕು|ಅಕ್ಷತಾ ಪೂಜಾರಿ ಬೋಳ, ರಾಷ್ಟ್ರಮಟ್ಟದ ಪ್ರಾಥಮಿಕ ಶಾಲಾ ಅತ್ಲೇಟ್ ಜಯಲಕ್ಷ್ಮಿ ಕಟೀಲು ಇವರಿಗೆ ಸನ್ಮಾನ ನಡೆಯಲಿದೆ,
ಕಿನ್ನಿಗೋಳಿ, ಕಟೀಲು, ಮುಂಡ್ಕೂರು ಪರಿಸರದ ವಿವಿಧ ಸಂಘ-ಸಂಸ್ಥೆಗಳ, ಶೈಕ್ಷಣಿಕ ಸಂಸ್ಥೆಗಳ, ಮುಖ್ಯಸ್ಥರು ವಿಶೇಷ ಆಹ್ವಾನಿತರಾಗಲಿದ್ದು ಪಂದ್ಯದ ಉದ್ಘಾಟನೆ ವರ್ಣರಂಜಿತವಾಗಿ ವಿದ್ಯಾರ್ಥಿಗಳ ಭವ್ಯ ಪೆರೇಡ್, ಸುಡುಮದ್ದು ಪ್ರದರ್ಶನದೊಂದಿಗೆ ನಡೆಯಲಿದೆ. ಆಹ್ವಾನಿತ ಎಲ್ಲಾ ತಂಡಗಳ ಆಟಗಾರರಿಗೆ ಅತಿಥಿಗಳಿಂದ ಗೌರವ ರಕ್ಷೆ ನಡೆಯಲಿದೆ. ಜಿಲ್ಲೆಯ ಖ್ಯಾತ ಕಲಾವಿದರಿಂದ ಸಂಗೀತ, ನ್ರತ್ಯ ವೈಭವ, ರಸಮಂಜರಿ ನಡೆಯಲಿದೆ.
ಉದ್ಘಾಟನಾ ಪಂದ್ಯ ಮಂಗಳೂರು ವಿ.ವಿ.ಮಟ್ಟದ ಅಗ್ರಗಣ್ಯ ಮಹಿಳಾ ತಂಡಗಳ ನಡುವೆ ಆಕರ್ಷಣೀಯವಾಗಿ ನಡೆಯಲಿದ್ದು, ಟೂರ್ನಿಯಲ್ಲಿ ಕೊಚ್ಚಿನ್ ಫೋರ್ಟ್ ಟ್ರಸ್ಟ್ , ಕೆ.ಸಿ.ಬಿ. ಕೇರಳ, ಕೇರಳ ಕಸ್ಟಮ್ಸ್, ಹುಬ್ಬಳ್ಳಿ ರೈಲ್ವೇಸ್, ಆರ್ಮಿ ಬೆಂಗಳೂರು, ಬೆಂಗಳೂರು ಸ್ಪೈಕರ್ಸ್. ಉತ್ತರಕನ್ನಡ, ಹಾಸನ ಫ್ರೆಂಡ್ಸ್,ಬೆಂಗಳೂರು ಸ್ಪೋರ್ಟ್ಸ್ ಹಾಸ್ಟೆಲ್, ಯೂತ್ ಸ್ಪೈಕರ್ ಬೆಂಗಳೂರು, ಮಂಗಳೂರು ಯುನಿವರ್ಸಿಟಿ, ತಮಿಳ್ನಾಡು ಫ್ರಂಡ್ಸ್, (ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ,ಕಿನ್ನಿಗೋಳಿ), ಬಿ ಎಸ್ ಪಿ. ರಾಜಸ್ಥಾನ, ಪಂಚಮಿ ಫ್ರೆಂಡ್ಸ್ ಬಜಾಲ್ ಮಂಗಳೂರು, ಆರ್.ಸಿ ಎಫ್. ಮಹಾರಾಷ್ಟ್ರ. ಕೇರಳ ಫ್ರೆಂಡ್ಸ್(ಉಳೆಪಾಡಿ-ಕಾಪಿಕಾಡು ಫ್ರೆಂಡ್ಸ್) ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಇತರ ತಂಡಗಳಾಗಿವೆ.

Comments

comments

Leave a Reply

Read previous post:
ಪಂಜ ಹರಿಪಾದೆಯಲ್ಲಿ ಉಗ್ರಾಣ ಮುಹೂರ್ತ,ನೂತನ ಗರ್ಭ ಗೃಹ ಉದ್ಘಾಟನೆ.

ಪಂಜ ಶ್ರೀ ಹರಿ ಪಾದೆ ಧರ್ಮ ದೈವ ಜಾರಂತಾಯ ದೈವಸ್ಥಾನದಲ್ಲಿ ಫೆಬ್ರವರಿ 2ರಂದು ಬ್ರಹ್ಮಕಲಶಾಭಿಶೇಕ ನಡೆಯಲಿದ್ದು, ಶುಕ್ರವಾರ ಧಾರ್ಮಿಕ  ಉಗ್ರಾಣ ಮುಹೂರ್ತ ಹಾಗೂ ನೂತನ ಗರ್ಭಗೃಹದ ಉದ್ಘಾಟನೆ ನಡೆಯಿತು....

Close