ರಂಗ ಮಂಟಪ ಉದ್ಘಾಟನೆ

 ಉಲ್ಲಂಜೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು 3.5ಲಕ್ಷರೂ.ನಲ್ಲಿ ನಿರ್ಮಾಣವಾದ ನೂತನ ಕೊಠಡಿ ಹಾಗೂ ತಾಲೂಕು ಪಂಚಾಯತ್ ಅನುದಾನದಲ್ಲಿ ರೂ.1.50ಲಕ್ಷದಲ್ಲಿ ನಿರ್ಮಾಣವಾದ ರಂಗಮಂಟಪದ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ್ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷೆ ಭವ್ಯಾ ಗಂಗಾಧರ್ ಶಾಲಾ ವಾರ್ಷಿಕೋತ್ಸವದಂದು ನೆರವೇರಿಸಿದರು. ಲಕ್ಷ್ಮೀನಾರಾಯಣ ಆಸ್ರಣ್ಣ, ಮೆನ್ನಬೆಟ್ಟು ಗ್ರಾಮ ಪಂಚಾಯತ್‌ನ ಶೈಲಾ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಕೋಟ್ಯಾನ್, ಶಿಕ್ಷಣ ಇಲಾಖೆಯ ದಿನೇಶ್, ರೋಟರ‍್ಯಾಕ್ಟ್‌ನ ಗಣೇಶ್ ಕಾಮತ್, ಭುವನಾಭಿರಾಮ ಉಡುಪ, ಮುಖ್ಯ ಶಿಕ್ಷಕಿ ಮಂಗಳಾ ಎಸ್. ಭಟ್, ಶಾಲಾಭಿವೃದ್ಧಿ ಸಮಿತಿಯ ದಯಾನಂದ್, ಶಿಕ್ಷಕಿ ಗಾಯತ್ರೀ ಎಸ್. ಉಡುಪ, ದೇವೀಪ್ರಸಾದ ಶೆಟ್ಟಿ, ಕೃಷ್ಣ ಶೆಟ್ಟಿ, ಹರಿಶ್ಚಂದ್ರ ಶೆಟ್ಟಿ ಮತ್ತಿತರರಿದ್ದರು.

Comments

comments

Leave a Reply

Read previous post:
ಫೆಬ್ರವರಿ 11ರಂದು ಏಳಿಂಜೆಯಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪುರುಷರ ವಾಲಿಬಾಲ್

  ಮಂಗಳೂರು ತಾಲೂಕಿನ ನವಚೇತನ ಯುವಕ ಮಂಡಲ ಏಳಿಂಜೆ ಇದರ ರಜತ ವರ್ಷಾಚರಣೆಯ ಅಂಗವಾಗಿ ರಜತವೈಭವ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಹೊನಲುಬೆಳಕಿನ ಪುರುಷರ ವಾಲಿಬಾಲ್ ಪಂದ್ಯಾಟ ಫೆಬ್ರವರಿ...

Close