ಎಸ್. ಕೋಡಿಯಲ್ಲಿ ಕುಲಾಲ ಭವನ ಉದ್ಘಾಟನೆ.

ತೋಕೂರು ಕುಲಾಲ ಸಮಾಜ ಸೇವಾ ಸಂಘದ ನೂತನ “ಕಟ್ಟಡ ಕುಲಾಲ ಭವನ”ದ ಉದ್ಘಾಟನೆ ರವಿವಾರ ನಡೆಯಿತು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಆರ್ಶೀವಚನದಲ್ಲಿ, ಸಂಸದ ನಳಿನ್ ಕುಮಾರ್ ಕಟೀಲು ನೂತನ ಕಟ್ಟಡ ಉದ್ಘಾಟಿಸಿದರು. ರಾಜ್ಯ ಕಂಬಾರರ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಚೌಡ ಸೆಟ್ಟಿ ಯವರ ಅಧ್ಯಕ್ಷತೆಯಲ್ಲಿ ವಿಪಕ್ಷ ಮುಖ್ಯ ಸಚೇತಕ ಅಭಯ ಚಂದ್ರ ಜೈನ್ ಸಮಾರಂಭದ ಉದ್ಘಾಟನೆಯನ್ನು ನೆರೆವೇರಿಸಿದರು.

ಕಟೀಲಿನ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ ಪುನರೂರು, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಕೃಷ್ಣ ಸಾಲ್ಯಾನ್, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ತೋಕೂರು ಅಧ್ಯಕ್ಷರಾದ ಎಲ್ ಕೆ ಸಾಲ್ಯಾನ್ ರಾಜ್ಯ ಕಂಬಾರರ ಮಹಾ ಸಂಘದ ಕಾರ್ಯಾಧ್ಯಕ್ಷ ಡಾ| ಅಣ್ಣಯ್ಯ ಕುಲಾಲ್ , ದ.ಕ. ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಲಕ್ಷ್ಮಣ ಕುಂದರ್ , ರಾಜ್ಯ ಕಂಬಾರರ ಮಹಾ ಸಂಘ ಮಹಿಳಾ ಘಟಕದ ಗೌರವಾಧ್ಯಕ್ಷೆ ಪುಷ್ಪ ಸದಾನಂದ ರಾಜ್ಯ ಕಂಬಾರರ ಮಹಾ ಸಂಘ ಮಹಿಳಾ ಕರಾವಳಿ ಘಟಕದ ಅಧ್ಯಕ್ಷೆ ರತ್ನಾವತಿ ನಾರಾಯಣ, ತೋಕೂರಿನ ಲೀಲಾವತಿ ಸಾಲ್ಯಾನ್, ತೋಕೂರು ಕುಲಾಲ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಶೇಖರ ಕುಲಾಲ್, ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಾಂಚ ಸಾಲ್ಯಾನ್, ಕಾರ್ಯದರ್ಶಿ ಹೊನ್ನಯ್ಯ ಎಂ. ಬಂಗೇರ, ಕೋಶಾಧಿಕಾರಿ ಕೇಶವ ಸಾಲ್ಯಾನ್ ಕುಲಾಲ ಮಹಿಳಾ ಸಂಘ ಅಧ್ಯಕ್ಷೆ ಶಾರದಾ ಜಿ. ಬಂಗೇರ, ಕಾರ್ಯದರ್ಶಿ ಹರಿಣಾಕ್ಷಿ , ಕೋಶಾಧಿಕರಿ ಸರೋಜಿನಿ ಕುಲಾಲ ಯುವವೇದಿಕೆ ಅಧ್ಯಕ್ಷ ಉದಯಕುಮಾರ್, ಕಾರ್ಯದರ್ಶಿ ಭಾಸ್ಕರ, ಕೋಶಾಧಿಕಾರಿ ಸುಕುಮಾರ್ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಸುಂದರ್ ಸಾಲ್ಯಾನ್ ಸ್ವಾಗತಿಸಿ ಕಾರ್ಯದರ್ಶಿ ಕಾರ್ಯದರ್ಶಿ ಜಿನರಾಜ್ ಜೆ.ಬಂಗೇರ ವಂದಿಸಿದರು. ಗುರು, ಕಸ್ತೂರಿ ಪಂಜ ಹಾಗೂ ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು

 

Comments

comments

Leave a Reply

Read previous post:
ಕಿನ್ನಿಗೋಳಿ-ಲಯನ್ಸ್ ಪ್ರಾಂತೀಯ ಸಮ್ಮೇಳನ “ಸಂತೃಪ್ತಿ”

ಲಯನ್ ಜಿಲ್ಲೆ 324 D5ರ ವಲಯ 6 ರ ಲಯನ್ಸ್ ಪ್ರಾಂತೀಯ ಸಮ್ಮೇಳನ "ಸಂತೃಪ್ತಿ" ಶನಿವಾರ ಲಿಟ್ಲ್ ಪ್ಲವರ್ ಹೈಸ್ಕೂಲು ಮೈದಾನದಲ್ಲಿ ನಡಯಿತು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರ...

Close