ಕಿನ್ನಿಗೋಳಿ-ಲಯನ್ಸ್ ಪ್ರಾಂತೀಯ ಸಮ್ಮೇಳನ “ಸಂತೃಪ್ತಿ”

ಲಯನ್ ಜಿಲ್ಲೆ 324 D5ರ ವಲಯ 6 ರ ಲಯನ್ಸ್ ಪ್ರಾಂತೀಯ ಸಮ್ಮೇಳನ “ಸಂತೃಪ್ತಿ” ಶನಿವಾರ ಲಿಟ್ಲ್ ಪ್ಲವರ್ ಹೈಸ್ಕೂಲು ಮೈದಾನದಲ್ಲಿ ನಡಯಿತು. ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣರ ಆಶೀರ್ವಚನದಲ್ಲಿ ಪ್ರಾಂತ್ಯದ ಪ್ರಥಮ ಮಹಿಳೆ ಸವಿತಾ ಪಿ. ಶೆಟ್ಟಿ ಸಮ್ಮೇಳನ ಉದ್ಘಾಟಿಸಿದರು. ಮೂಡಬಿದ್ರೆಯ ಡಾ| ಮೋಹನ ಆಳ್ವ, ದೂರದರ್ಶನದ ಹಾಸ್ಯ ಕಲಾವಿದ ರಿಚರ್ಡ್ ಲೂಯಿಸ್‌ರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಐಕಳ ಹರೀಶ್ ಶೆಟ್ಟರನ್ನು ಸಂಮಾನಿಸಲಾಯಿತು. ಪ್ರಾಂತೀಯ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಲಯನ್ಸ್ ನ ಚಂದ್ರಶೇಖರ ಸನಿಲ್, ಸಮ್ಮೇಳನ ಸಮಿತಿ ಸಭಾಪತಿ ಪ್ರೊ| ಜಗದೀಶ್ ಹೋಳ್ಳ, ಕಾರ್ಯದರ್ಶಿ ಲಾರೆನ್ಸ್ ಪೆರ್ನಾಂಡೀಸ್, ಕೋಶಾಧಿಕಾರಿ ಕೆ. ರಮೇಶ್ ಕಿನ್ನಿಗೋಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಮೆಲ್ವಿನ್ ಡಿ’ಸೋಜ, ಕಾರ್ಯದರ್ಶಿ ಪ್ರ್ರಾನ್ಸಿಸ್ ಸೆರಾವೊ, ಕೋಶಾಧಿಕಾರಿ ಇಗ್ನೇಶಿಯಸ್ ಮೆಂಡೊನ್ಸಾ ಮತ್ತಿತರರಿದ್ದರು. ಬಳಿಕ ಕಲಾವತಿ ಬಳಗದವರಿಂದ ಸಂಗೀತ ರಸಸಂಜೆ ನಡೆಯಿತು.

Comments

comments

Leave a Reply

Read previous post:
ಕೆಮ್ರಾಲ್ ಪರಿಸರ ಮಾಹಿತಿ ಕಾರ್ಯಕ್ರಮ

ದಿನಾಂಕ 25 ರಂದು ಸರಕಾರಿ ಪ್ರೌಢ ಶಾಲೆ ಕೆಮ್ರಾಲ್ ಇಲ್ಲಿ ಮಾನಸ ಪರಿಸರ ಸಂಘದ ವತಿಯಿಂದ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಅತಿಥಿ ಉಪನ್ಯಾಸಕ್ಕಾಗಿ ಸರಕಾರ ಪ್ರಥಮ...

Close