ನಾರಾಯಣಗುರು ವಿದ್ಯಾ ಸಂಸ್ಥೆ ವಾರ್ಷಿಕೋತ್ಸವ

 “ಯಾರೂ ದುರ್ಬಲರಲ್ಲ, ಸಬಲರು ಪ್ರಯತ್ನ ಶೀಲತೆಯಿಂದ ಯಶಸ್ಸನ್ನು ಪಡೆಯಬೇಕು” ಎಂದು ಸಾಹಿತಿ ಸುಮುಖನಾಂದ ಜಲವಳ್ಳ್ಳಿ ಕಿನ್ನಿಗೋಳಿ ನಾರಾಯಣಗುರು ವಿದ್ಯಾ ಸಂಸ್ಥೆ ವಾರ್ಷಿಕೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಇದೇ ಸಂದರ್ಭ ಕಾಮನ್‌ವೆಲ್ತ್ ಕ್ರೀಡಾಕೂಟದ ವೆಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ೮ ಚಿನ್ನದ ಪದಕ ಗೆದ್ದ ಅಕ್ಷತಾ ಪೂಜಾರಿಯವರನ್ನು ಸಂಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಿನ್ನಿಗೋಳಿ ಚರ್ಚ್‌ನ ಧರ್ಮಗುರುಗಳಾದ ರೆ| ಫಾ| ಆಲ್ಫ್ರೆಡ್ ಜೆ. ಪಿಂಟೊ, ಯುಗಪುರುಷದ ಭುವನಾಭಿರಾಮ ಉಡುಪ, ಶಾಲಾ ನಾಯಕ ದುರ್ಗಾ ಪ್ರಸಾದ್ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಉಷಾ ಸ್ವಾಗತಿಸಿ, ಪ್ರೀತಿ ಧನ್ಯವಾದವನ್ನಿತ್ತರು. ಶ್ವೇತಾ ಶಾಲಾ ವರದಿ ವಾಚಿಸಿದರು. ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿ ಕಾರ್ಯಕ್ರಮ ಜರಗಿತು.

Comments

comments

Leave a Reply

Read previous post:
ಕಿಲೆಂಜೂರು ಮಾಡರ ಮನೆ-ನಾಗಮಂಡಲೋತ್ಸವ

ಅತ್ತೂರು ಮಾಗಣೆಯ ಕಿಲೆಂಜೂರು ಮಾಡರ ಮನೆಯ ನಾಗದೇವರಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ ಶನಿವಾರ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮುಲ್ಕಿ ಸೀಮೆಯ ಅರಸು ದುಗ್ಗಣ್ಣ ಸಾವಂತ ಅರಸರ...

Close