ಕಿಲೆಂಜೂರು ಮಾಡರ ಮನೆ-ನಾಗಮಂಡಲೋತ್ಸವ

ಅತ್ತೂರು ಮಾಗಣೆಯ ಕಿಲೆಂಜೂರು ಮಾಡರ ಮನೆಯ ನಾಗದೇವರಿಗೆ ಅಷ್ಟಪವಿತ್ರ ನಾಗಮಂಡಲೋತ್ಸವ ಶನಿವಾರ ನಡೆಯಿತು. ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮುಲ್ಕಿ ಸೀಮೆಯ ಅರಸು ದುಗ್ಗಣ್ಣ ಸಾವಂತ ಅರಸರ ಅಧ್ಯಕ್ಷತೆಯಲ್ಲಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಆಶಿರ್ವಚನ ನೀಡಿದರು. ಕಟೀಲಿನ ಶ್ರೀ ಲಕ್ಷ್ಮೀ ನಾರಾಯಣ ಆಸ್ರಣ್ಣರ ಶುಭಾಶಂಸನೆಯೊಂದಿಗೆ ನಾಗಮಂಡಲದ ಯಶಸ್ಸಿಗೆ ಕಾರಣರಾದವರನ್ನು ಸಂಮಾನಿಸಲಾಯಿತು. ಅತ್ತೂರು ಮೂಡುಮನೆ ಜಯರಾಮ ಉಡುಪ, ಸಗ್ರಿ ಗೋಪಾಲ ಕೃಷ್ಣ ಸಾಮಗ, ಮೂಡಬಿದರೆಯ ಡಾ| ಮೋಹನ ಆಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ. ಅಭಯಚಂದ್ರ ಜೈನ್, ಕಟೀಲು ಮೇಳಗಳ ಸಂಚಾಲಕ ದೇವಿಪ್ರಸಾದ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಸಿ.ಎ. ಶಂಕರ ಶೆಟ್ಟಿ, ಮಾಜಿ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮುಂಬಾಯಿ ಕಲಾ ಜಗತ್ತುವಿನ ವಿಜಯಕುಮಾರ್ ಶೆಟ್ಟಿ, ಸುರಗಿರಿ ದೇವಳದ ಆಡಳಿತ ಮೋಕ್ತೇಸರ ಸೀತಾರಾಮ ಶೆಟ್ಟಿ, ಅತ್ತೂರು ಭಂಡಾರಮನೆ ಶಂಭು ಮುಕ್ಕಾಲ್ದಿ, ಡಾ| ಕೆ.ಸಿ ಬಲ್ಲಾಳ್ , ಜಯರಾಮ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಮಾಡರಮನೆಯ ಪದ್ಮನಾಭ ಮಾಡ, ಭವಾನಿಶಂಕರ ಶೆಟ್ಟಿ, ಎಮ್. ನಾರಾಯಣ ಶೆಟ್ಟಿ, ಕೆಮ್ರಾಲ್ ಬಾಳಿಕೆ ಶಂಕರ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಕೆ. ಸುದಾಕರ ಶೆಟ್ಟಿ, ಅಧ್ಯಕ್ಷ ಐಕಳ ಗಣೇಶ್ ಶೆಟ್ಟಿ, ಕಾರ್ಯದರ್ಶಿ ದಾಮೋದರ ಕೆ.ಶೆಟ್ಟಿ ಕೋಶಾಧಿಕಾರಿ ಶೆಖರ ಮಾಡ, ಲೆಕ್ಕ ಪರಿಶೋಧಕ ವಿಶ್ವನಾಥ ಶೆಟ್ಟಿ, ಅಶೋಕ್ ಶೆಟ್ಟ ಜೋಕಟ್ಟೆ, ಐಕಳ ವಿಶ್ವನಾಥ ಶೆಟ್ಟಿ, ಪ್ರಕಾಶ್ ಶೆಟ್ಟಿ ಮತ್ತಿತರರಿದ್ದರು. ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಗ್ರಿ ಗೋಪಾಲ ಕೃಷ್ಣ ಸಾಮಗರ ನೇತೃತ್ವದಲ್ಲಿ ಕೃಷ್ಣಪ್ರಸಾದ ವೈದ್ಯ, ನಟರಾಜ ವೈದ್ಯ, ಬಾಲಕೃಷ್ಣ ವೈದ್ಯ ಬಳಗದಿಂದ ನಾಗಮಂಡಲ ನಡೆಯಿತು.

Comments

comments

Leave a Reply

Read previous post:
ಎಸ್. ಕೋಡಿಯಲ್ಲಿ ಕುಲಾಲ ಭವನ ಉದ್ಘಾಟನೆ.

ತೋಕೂರು ಕುಲಾಲ ಸಮಾಜ ಸೇವಾ ಸಂಘದ ನೂತನ "ಕಟ್ಟಡ ಕುಲಾಲ ಭವನ"ದ ಉದ್ಘಾಟನೆ ರವಿವಾರ ನಡೆಯಿತು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಆರ್ಶೀವಚನದಲ್ಲಿ, ಸಂಸದ ನಳಿನ್ ಕುಮಾರ್...

Close