ಕಿನ್ನಿಗೋಳಿ ಯುಗಪುರುಷದಲ್ಲಿ ಮಕ್ಕಳ ನಾಟಕೋತ್ಸವ-2012

ಉಡುಪಿ, ಕಾಸರಗೋಡು ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಮತ್ತು ಯುಗಪುರುಷ ಕಿನ್ನಿಗೋಳಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 04-02-2012ರಂದು ಶನಿವಾರ ಕಿನ್ನಿಗೋಳಿ ಯುಗಪುರುಷ ಸಭಾ
ಭವನದಲ್ಲಿ ಪೂರ್ವಾಹ್ನ ಗಂಟೆ 9.30ರಿಂದ ಸಂಜೆ 4.00 ಗಂಟೆವರೆಗೆ ಮಕ್ಕಳ ನಾಟಕೋತ್ಸವ 2012 ಜರಗ
ಲಿರುವುದು. ಈ ಸಮಾರಂಭವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಕಟೀಲಿನ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಇವರು ಉದ್ಘಾಟಿಸಲಿದ್ದಾರೆ. ನಾಟಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿತ್ತಿರುವ ಶ್ರೀ ಉದ್ಯಾವರ ಮಾಧವ ಆಚಾರ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಉಡುಪಿ ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಆಯ್ದ ಎಂಟು ಶಾಲಾ ತಂಡಗಳು ವಿವಿಧ ನಾಟಕಗಳನ್ನು ಪ್ರದರ್ಶಿಸಲಿದ್ದಾರೆ. ಬೆಳಿಗ್ಗೆ1 0.00 ರಿಂದ 10.30ರತನಕ ಪೊಂಪೈ ಪ್ರೌಢ ಶಾಲೆ, ಉರ್ವ, ಮಂಗಳೂರು ಇವರಿಂದ ಶ್ರೀಮತಿ ಕೆ.ಸಾವಿತ್ರಿ ಭಟ್.ಎಸ್.ಜೆ. ಇವರ ನಿರ್ದೇಶನದ ಖಾಲಿ ಕೊಡ, ಬೆಳಿಗ್ಗೆ 10.35-ರಿಂದ 11.05ರತನಕ ಅಶೋಕ ವಿದ್ಯಾಲಯ ಆಂಗ್ಲಮಾಧ್ಯಮ ಪ್ರೌಢಶಾಲೆ, ಮಂಗಳೂರು ಇವರಿಂದ ಶ್ರೀಮತಿ ಮಾಲಾ ಎಸ್.ಶಿವಪುರ ನಿರ್ದೇಶನದ ಕತ್ತಲನಗರ ಮೂರ್ಖರಾಜ, ಬೆಳಿಗ್ಗೆ 11.10ರಿಂದ 11.40 ರತನಕ ಸ
ರಕಾರಿ ಮಾದರಿ ಹಿ.ಪ್ರಾ ಶಾಲೆ, ಹಂಗಾರಕಟ್ಟೆ, ಕುಂದಾಪುರ ಇವರಿಂದ ಶ್ರೀ ಪಾರಂಪಳ್ಳಿ ನರಸಿಂಹ ಐತಾಳ ನಿರ್ದೇಶನದ ವರ ಪರೀಕ್ಷೆ, ಬೆಳಿಗ್ಗೆ 11.45ರಿಂದ 12.15 ರತನಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪೈವಳಿಕೆ, ಕಾಸರಗೋಡು ಇವರಿಂದ ಶ್ರೀ ಸತೀಶ್ ಕುಮಾರ್ ನಿರ್ದೇಶನದ ವಿಷ ಪರ್ವ, ಅಪರಾಹ್ನ 12.20ರಿಂದ 12.50ರತನಕ ವಿಠಲ ಪ.ಪೂ.ಮಹಾವಿದ್ಯಾಲಯ ಪ್ರೌಢಶಾಲಾ ವಿಭಾಗ, ವಿಟ್ಲ ಇವರಿಂದ ಶ್ರೀ ಉದಯ ವಿಟ ನಿರ್ದೇಶನದ ಟೋಪಿ ವಾಲ, ಅಪರಾಹ್ನ 1.45ರಿಂದ 2.15ರತನಕ ಶಾಂಭವಿ ಹಿ.ಪ್ರಾ.ಶಾಲೆ, ಗಿಳಿಯಾರು ಕೋಟ ಇವರಿಂದ ಶ್ರೀ ಪಾರಂಪಳ್ಳಿ ನರಸಿಂಹ ಐತಾಳ ನಿರ್ದೇಶನದ ವಿಚಾರಣೆ ನಾಟಕ, ಅಪರಾಹ್ನ 2.20ರಿಂದ 2.50ರತನಕ ಸರಕಾರಿ ಹಿರಿಯ ಬುನಾದಿ ಶಾಲೆ, ಸೂರಂಬೈಲು,ಯಡನಾಡು ಇವರಿಂದ ಶ್ರೀ ಪ್ರಮೋದ್ ಕುಮಾರ್, ಅನಂತಪುರ ನಿರ್ದೇಶನದ ಮರವೇ ವರ, ಅಪರಾಹ್ನ 2.55ರಿಂದ 3.25ರತನಕ ಅಶೋಕನಗರ ಹಿ.ಪ್ರಾ.ಶಾಲೆ, ಅಶೋಕನಗರ,ಮಂಗಳೂರು ಇವರಿಂದ ಶ್ರೀ ಬಿ.ಶ್ರೀನಿವಾಸ ರಾವ್ ನಿರ್ದೇಶನದ ಸತ್ತವರು ಯಾರು? ಹೀಗೆ ಎಂಟು ನಾಟಕಗಳು ಪ್ರದರ್ಶನಗೊಳ್ಳಲಿದೆ.
ಸಮಾರೋಪ ಸಮಾರಂಭವು ಅಪರಾಹ್ನ ಗಂಟೆ 3.30ಕ್ಕೆ ಸರಿಯಾಗಿ ಯುಗಪುರುಷದ ಕೊಡೆತ್ತೂರು ಶ್ರೀ ಭುವನಾಭಿರಾಮ ಉಡುಪರ ಅಧ್ಯಕ್ಷತೆಯಲ್ಲಿ ಜರಗಲಿರುವುದು. ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಪ್ರದೀಪಕುಮಾರ ಕಲ್ಕೂರರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಾಹಿತ್ಯ ಪ್ರಕಾರಗಳಲ್ಲಿ ಅತ್ಯಂತ ರಮ್ಯವಾದ ನಾಟಕದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸಿ, ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ನಾಟಕೋತ್ಸವದ ಉದ್ದೇಶ. ಇದರಲ್ಲಿ ಭಾಗವಹಿಸುವ ಮಕ್ಕಳಿಗೆ ಊಟ, ಉಪಾಹಾರವನ್ನು ಉಚಿತವಾಗಿ ನೀಡುವುದಲ್ಲದೆ ಪ್ರತಿಯೊಂದು ತಂಡಕ್ಕೆ ರೂ.1500/-ಪ್ರೋತ್ಸಾಹ ಧನ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಗುವುದು. ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಒಂದು ನಾಟಕವನ್ನು ವೀಕ್ಷಿಸಿ ಮಕ್ಕಳನ್ನು ಹಾಗೂ ನಾಟಕ ಕಲೆಯನ್ನು ಪ್ರೋತ್ಸಾಹಿಸಬೇಕಾಗಿ ಕೋರಲಾಗಿದೆ.ಯುಗಪುರುಷ ಸಭಾಭವನದಲ್ಲಿ ಜರಗಿದಪತ್ರಿಕಾಗೋಷ್ಠಿಯಲ್ಲಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ದ.ಕ.ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಪ್ರೊ.ಅನಂತ ಪದ್ಮನಾಭ ರಾವ್, ಕಾರ್ಯದರ್ಶಿ ಬಿ.ಶ್ರೀನಿವಾಸ ರಾವ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀಮತಿ ಸಾವಿತ್ರಿ ಎಸ್.ರಾವ್, ಜಯರಾಮ ಪೂಂಜ, ಜಯರಾಮ ಆಳ್ವ, ಉಮೇಶ್ ರಾವ್ ಎಕ್ಕಾರು ಇವರುಗಳು ಉಪಸ್ಥಿತರಿದ್ದರು.

Comments

comments

Leave a Reply

Read previous post:
ಫೆಬ್ರವರಿ 4 ಐಕಳ ಕಂಬಳ

ಅನಾದಿ ಕಾಲದಿಂದ ಮತ್ತು ಜೋಡುಕರೆಯಾಗಿ 35 ವರ್ಷಗಳಿಂದ, ಇತಿಹಾಸ ಪ್ರಸಿದ್ಧ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬರುತ್ತಿರುವ ಕಾರಣೀಕದ ಐಕಳ ಕಾಂತಾಬಾರೆ - ಬೂದಾಬಾರೆ ಕಂಬಳ ಫೆಬ್ರವರಿ 4ರ ಶನಿವಾರ ಬೆಳಿಗ್ಗೆ...

Close