ಕೊಡೆತ್ತೂರು ಶ್ರೀ ಕೋರ‍್ದಬ್ಬು ದೈವದ ವಾರ್ಷಿಕ- ಉತ್ಸವ

ಆದರ್ಶ ಬಳಗ ಕೊಡೆತ್ತೂರು’ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತಮ್ಮನ್ನು ಗುರುತಿಸುವುದರ ಮೂಲಕ ಆದರ್ಶವಾಗಿ ಮುನ್ನಡೆಯುತ್ತಿದೆ’ ಎಂದು ಸಾಂಸದ ನಳಿನ್ ಕುಮಾರ್ ಕಟೀಲ್‌ರವರು ಹೇಳಿದರು.
ಅವರು ಕೊಡೆತ್ತೂರು ಶ್ರೀ ಕೋರ‍್ದಬ್ಬು ದೈವದ ವಾರ್ಷಿಕ ನೇಮದ ಸಂದರ್ಭದಲ್ಲಿ ಜರಗಿದ ಆದರ್ಶ ಬಳಗ ಕೊಡೆತ್ತೂರು ಇದರ ವಾರ್ಷಿಕ- ಉತ್ಸವ ಮತ್ತು ಸಂಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕೊಡೆತ್ತೂರು ಶ್ರೀ ಅರಸು ಕುಂಜರಾಯ ದೈವಸ್ಥಾನದ ಜಯರಾಮ ಮುಕ್ಕಾಲ್ದಿಯವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಪ್ರತಿಭೆಗಳಾದ ಕ್ರೀಡಾಪಟು ರಿತೇಶ್ ಎಸ್. ಮತ್ತು ವಿದ್ಯಾರ್ಥಿನಿ ಕು| ಅಶ್ವಿತಾ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ‘ಯುಗಪುರುಷ’ದ ಕೊಡೆತ್ತೂರು ಭುವನಾಭಿರಾಮ ಉಡುಪ ವಹಿಸಿದ್ದು, ದೇವಸ್ಯ ಮಠ ಕೊಡೆತ್ತೂರು ಇದರ ಅರ್ಚಕರಾದ ಕೆ. ವೇದವ್ಯಾಸ ಉಡುಪ ಆಶೀವರ್ಚನ ನೀಡಿದರು. ದೇವಸ್ಯ ಕೆ.ವಿ. ಶೆಟ್ಟಿ ಇವರು ಸಂಮಾನಿತರನ್ನು ಅಭಿನಂದಿಸಿದರು. ಕೊಡೆತ್ತೂರು ಗುತ್ತು ಗುತ್ತಿನಾರ್ ಸಂಜೀವ ಶೆಟ್ಟಿ, ಆದರ್ಶ ಬಳಗದ ಅಧ್ಯಕ್ಷ ಶಾಂತಾರಾಮ ಕೋಟ್ಯಾನ್ ಉಪಸ್ಥಿತಿಯಲ್ಲಿ ಹರೀಶ್ ಕೊಡೆತ್ತೂರು ಸಂಮಾನ ಪತ್ರ ವಾಚಿಸಿದರು. ದಾಮೋದರ ಶೆಟ್ಟಿ ಸ್ವಾಗತಿಸಿ, ತಾರಾನಾಥ ಶೆಟ್ಟಿ ವಂದಿಸಿದರು.

Comments

comments

Leave a Reply

Read previous post:
ಪಂಜ ಹರಿಪಾದೆಯಲ್ಲಿ ಧಾರ್ಮಿಕ ಸಭೆ

ಪಂಜ ಹರಿಪಾದೆ ಶ್ರೀ ಧರ್ಮದೈವ ಜಾರಂತಾಯ ದೈವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ, "ಧರ್ಮವನ್ನು ಕಾಯುವುದು ದೈವದ ಕೆಲಸ, ದೈವಗಳಿಗೆ ನೇಮೋತ್ಸವದಂತಃ ಸೇವೆಗಳನ್ನು ನೀಡುವುದು ಭಕ್ತರ ಕೆಲಸ" ಎಂದು...

Close