ಪಂಜ ಹರಿಪಾದೆಯಲ್ಲಿ ಧಾರ್ಮಿಕ ಸಭೆ

ಪಂಜ ಹರಿಪಾದೆ ಶ್ರೀ ಧರ್ಮದೈವ ಜಾರಂತಾಯ ದೈವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ, “ಧರ್ಮವನ್ನು ಕಾಯುವುದು ದೈವದ ಕೆಲಸ, ದೈವಗಳಿಗೆ ನೇಮೋತ್ಸವದಂತಃ ಸೇವೆಗಳನ್ನು ನೀಡುವುದು ಭಕ್ತರ ಕೆಲಸ” ಎಂದು ಕಟೀಲಿನ ಹರಿ ನಾರಾಯಣದಾಸ ಆಸ್ರಣ್ಣ ಆಶೀರ್ವಚನ ನೀಡಿದರು.

ಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ಭುಜಂಗ ಎಂ. ಶೆಟ್ಟಿ, ಅಧ್ಯಕ್ಷತೆವಹಿಸಿದ್ದು, ದೈವಸ್ಥಾನದ ಆಡಳಿತ ಮೊಕ್ತೇಸರ ಗುತ್ತಿನಾರ್ ಭೋಜ ಶೆಟ್ಟಿ ನಲ್ಯಗುತ್ತು ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾಗಿ ಹಳೆಯಂಗಡಿ ಶ್ರೀ ಜಾರಂತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಬಾಲಕೃಷ್ಣ ಭಟ್, ಪಾವಂಜೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೋಕ್ತೇಸರ ಶಶೀಂದ್ರ ಕುಮಾರ್, ಪಂಜದ ಗುತ್ತು ವಿಶ್ವನಾಥ ಶೆಟ್ಟಿ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀನಿವಾಸ ಪಾತ್ರಿ, ಬಂಟ್ವಾಳ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಪಚ್ಚಿನಡ್ಕ ಸೇಸಪ್ಪ ಕೋಟ್ಯಾನ್, ಕೊಲ್ಲೂರು ಗುಡ್ಡೆಸಾನ ಕಾಂತಾ ಬಾರೆ ಬೂದಾ ಬಾರೆ ಜನ್ಮಕ್ಷೇತ್ರೆದ ಅಂತಪ್ಪ ನಾಯ್ಗರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
ಹೊಸನಗರ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಿತು.

Comments

comments

Leave a Reply

Read previous post:
ಪಂಜ ಹರಿಪಾದೆಯಲ್ಲಿ ಬ್ರಹ್ಮಕಲಶಾಭಿಶೇಕ

ಪಂಜದ ಶ್ರೀ ಹರಿ ಪಾದೆ ಧರ್ಮದೈವ ಜಾರಂತಾಯ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಶೇಕ ಗುರುವಾರದಂದು ನಡೆಯಿತು. ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀ ಪಾದರ ಆಶೀರ್ವಾದದೊಂದಿಗೆ,...

Close