ಪಂಜ ಹರಿಪಾದೆಯಲ್ಲಿ ಬ್ರಹ್ಮಕಲಶಾಭಿಶೇಕ

ಪಂಜದ ಶ್ರೀ ಹರಿ ಪಾದೆ ಧರ್ಮದೈವ ಜಾರಂತಾಯ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಶೇಕ ಗುರುವಾರದಂದು ನಡೆಯಿತು.

ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಸಾಗರ ತೀರ್ಥ ಶ್ರೀ ಪಾದರ ಆಶೀರ್ವಾದದೊಂದಿಗೆ, ಪಂಜ ವಾಸುದೇವ ಭಟ್ಟರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ, ಪಂಜ ಭಾಸ್ಕರ ಭಟ್ಟರ ಆಚಾರ್ಯತ್ವದಲ್ಲಿ, ಶಿಬರೂರು ವೇದವ್ಯಾಸ ತಂತ್ರಿಗಳ ನೇತ್ರತ್ವದಲ್ಲಿ, ಬ್ರಹ್ಮಕಲಶಾಭಿಶೇಕ ನಡೆಯಿತು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಗುತ್ತಿನಾರ್ ಭೋಜ ಶೆಟ್ಟಿ ನಲ್ಯಗುತ್ತು, ಸಮಿತಿಯ ಗೌರವಾಧ್ಯಕ್ಷ ಪಂಜದ ಗುತ್ತು ವಿಶ್ವನಾಥ ಶೆಟ್ಟಿ, ಪಂಜದ ಗುತ್ತು ಶಾಂತರಾಮ ಶೆಟ್ಟಿ, ಮುಂಬಯಿ ಸಮಿತಿಯ ಗೌರವಾಧ್ಯಕ್ಷ ಬಾಬು.ಎನ್ ಶೆಟ್ಟಿ, ಕಾರ್ಯಾಧ್ಯಕ್ಷ ಭುಜಂಗ ಎಂ. ಶೆಟ್ಟಿ, ಉಪಾಧ್ಯಕ್ಷರಾದ ದಾಮೋದರ ಡಿ.ಶೆಟ್ಟಿ, ಪದ್ಮನಾಭ ಶೆಟ್ಟಿ, ಜಯ ಶೆಟ್ಟಿ, ಊರ ಹಾಗೂ ಮುಂಬಯಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಟಿ. ಶೆಟ್ಟಿ ನಲ್ಯಗುತ್ತು, ಸಮಿತಿಯ ಕೊಯಿಕುಡೆ ಲಕ್ಷ್ಮೀನಾರಾಯಣ ರಾವ್, ಶಂಕರ ಶೆಟ್ಟಿ ನಲ್ಯಗುತ್ತು, ಪದ್ಮನಾಭ ಶೆಟ್ಟಿ ಹರಿನಿವಾಸ ಕೊಯಿಕುಡೆ, ಮುಂಡಪ್ಪ ಪೈಯಡೆ, ಸುಬ್ರಹ್ಮಣ್ಯ ಭಟ್ ಶೈಲ ಕೊಯಿಕುಡೆ, ನವೀನ್ ಕುಮಾರ್ ಹರಿಪಾದೆ ಸಾನದ ಮನೆ, ನವೀನ್ ಟಿ. ಶೆಟ್ಟಿ ನಲ್ಯ ಗುತ್ತು, ಭಾಸ್ಕರ ಟಿ. ಶೆಟ್ಟಿ ಹೊಸಮನೆ ಕೊಯಿಕುಡೆ, ನಾರಾಯಣ ಕೊಟ್ಯಾನ್ ಹರಿಪಾದೆ ಭಂಡಾರ ಮನೆ, ಅಶೋಕ್ ಆಚಾರಿ, ನವೀನ್ ವಿ ಶೆಟ್ಟಿ ನಲ್ಯಗುತ್ತು, ಪದ್ಮನಾಭ ಕೊಟ್ಯಾನ್, ದೇವದಾಸ್ ಕುಲಾಲ್, ಸಮಿತಿಯ ಪದಾಧಿಕಾರಿಗಳು, ಶ್ರೀ ಜಾರಂತಾಯ ಯುವಕ ಮಂಡಲದ ಸದಸ್ಯರು, ಊರ- ಪರವೂರ ಭಕ್ತಾಭಿಮಾನಿಗಳಿದ್ದರು. ಬಳಿಕ ಧ್ವಜಾರೋಹಣ, ತುಲಭಾರ ಸೇವೆಯು ನಡೆಯಿತು.

 

Comments

comments

Leave a Reply

Read previous post:
ಬೀಳ್ಕೊಡುಗೆ

ಕಟೀಲು ವಿಜಯಾ ಬ್ಯಾಂಕಿನಲ್ಲಿ 35 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದ ಅಶೋಕ ಕರ್ಕೇರ ನಿವೃತ್ತರಾದ ಹಿನ್ನಲೆಯಲ್ಲಿ ಕಟೀಲು ವಿಜಯಾ ಬ್ಯಾಂಕ್ ಶಾಖೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಖಾ ಪ್ರಬಂಧಕ...

Close