ಪಂಜ ಹರಿ ಪಾದೆಯಲ್ಲಿ ಧಾರ್ಮಿಕ ಸಭೆ: ಉಪನ್ಯಾಸ

“ತಮ್ಮ ಸ್ವಂತ ಸುಖಕ್ಕಾಗಿ ಇತರರ ಸುಖವನ್ನು ನಾಶ ಪಡಿಸುವುದು ಸರಿಯಲ್ಲ, ಮನುಷ್ಯನಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಅಗತ್ಯವಾಗಿ ಬೇಕಾಗಿದೆ” ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀ ಪಾದರು ಹೇಳಿದರು. ಅವರು ಗುರುವಾರ ಪಂಜ ಶ್ರೀ ಹರಿಪಾದೆ ಧರ್ಮದೈವ ಜಾರಂತಾಯ ದೈವಸ್ಥಾನದ ಬ್ರಹ್ಮಕಲಶೋತ್ಸವಾಂಗ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಮುಂಬಯಿ ಸಮಿತಿಯ ಅಧ್ಯಕ್ಷ ಭುಜಂಗ ಎಂ. ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ಕೃಷ್ಣಾಪುರ ಮಠದ ಶ್ರೀ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀ ಪಾದರು ಶುಭಾಶೀರ್ವಾದ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲು, ಕೆ.ಪಿ ಜಗದೀಶ್ ಅದಿಕಾರಿ, ಜಿ.ಪ.ಸದಸ್ಯ ಈಶ್ವರ ಕಟೀಲು, ದಾಮೋದರ ಶೆಟ್ಟಿ, ಗುತ್ತಿನಾರ್ ಭೋಜ ಶೆಟ್ಟಿ ನಲ್ಯಗುತ್ತು, ಪಂಜದಗುತ್ತು ವಿಶ್ವನಾಥ ಶೆಟ್ಟಿ, ಉಪಸ್ಥಿತರಿದ್ದರು. ಪಂಜ ಭಾಸ್ಕರ ಭಟ್ ಸ್ವಾಗತಿಸಿ, ಪ್ರಸ್ತಾಪಿಸಿದರು. ಪ್ರಕಾಶ್ ಟಿ. ಶೆಟ್ಟಿ ನಲ್ಯಗುತ್ತು ವಂದಿಸಿ, ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಧರ್ಮ ದೈವದ ವಿಶೇಷ ನೇಮೋತ್ಸವ ನಡೆಯಿತು.

Comments

comments

Leave a Reply

Read previous post:
ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉದ್ಯೋಗಾವಕಾಶಗಳು

"ಮನುಷ್ಯನು ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಪ್ರಯತ್ನ ಮತ್ತು ಪರಿಶ್ರಮದಿಂದ ಏನನ್ನೂ ಸಾಧಿಸಲು ಸಾಧ್ಯ. ಇಂದು ಈ ಮನುಷ್ಯನು ಸ್ಪರ್ಧಾತ್ಮಕ ಯುಗದಲ್ಲಿದ್ದು ಅದನ್ನು ಎದುರಿಸಲು ಸದಾ ಸನ್ನದ್ಧನಾಗಿರಬೇಕು" ಎಂದು...

Close