ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ಉದ್ಯೋಗಾವಕಾಶಗಳು

“ಮನುಷ್ಯನು ಅತ್ಯಂತ ಬುದ್ಧಿವಂತ ಜೀವಿಯಾಗಿದ್ದು ಪ್ರಯತ್ನ ಮತ್ತು ಪರಿಶ್ರಮದಿಂದ ಏನನ್ನೂ ಸಾಧಿಸಲು ಸಾಧ್ಯ. ಇಂದು ಈ ಮನುಷ್ಯನು ಸ್ಪರ್ಧಾತ್ಮಕ ಯುಗದಲ್ಲಿದ್ದು ಅದನ್ನು ಎದುರಿಸಲು ಸದಾ ಸನ್ನದ್ಧನಾಗಿರಬೇಕು” ಎಂದು ಕಟೀಲು ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಮಂಗಳೂರು ವಿಭಾಗದ ಸಹಾಯಕ ಆಯುಕ್ತರಾದ ಡಾ| ವೆಂಕಟೇಶ್ ಇವರು, ಕಟೀಲು ದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕುರಿತು ನಡೆದ ಚಾಣಕ್ಯ ಎಂಬ ಕಾರ್ಯಾಗಾರದಲ್ಲಿ ಕರೆ ನೀಡಿದರು. ಈ ಬಗ್ಗೆ ವಿದ್ಯಾರ್ಥಿಗಳು ಸತತ ಓದಿನಲ್ಲಿ ತೊಡಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಪಟ್ಟ ಪುಸ್ತಕ ಮತ್ತು ವೃತ್ತಪತ್ರಿಕೆಗಳನ್ನು ಓದುತ್ತಿರಬೇಕೆಂದು ತಿಳಿಸಿದರು. ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ವೈ ಮೋನಪ್ಪ ಶೆಟ್ಟಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ಪ್ರಾಚಾರ್ಯ ಜಯರಾಮ ಪೂಂಜ ಸ್ವಾಗತಿಸಿ ಪ್ರಾಸ್ತವಿಕ ಭಾಷಣ ಮಾಡಿದರು, ಕನ್ನಡ ಉಪನ್ಯಾಸಕಿ ವನಿತಾ ಜೋಶಿ ವಂದಿಸಿದರು.

Comments

comments

Leave a Reply

Read previous post:
ಎಳತ್ತೂರು ಡಾ| ಸದಾನಂದ ಕುಂದರ್‌ಗೆ ಸಮ್ಮಾನ

ಎಳತ್ತೂರು ದೊಡ್ಡಮನೆಯಲ್ಲಿ ನಡೆದ ರೋಟರಿ,ರೋಟರಾಕ್ಟ್, ಎಳತ್ತೂರು ಫ್ರೆಂಡ್ಸ್, ಯಂಗ್ ಫ್ರೆಂಡ್ಸ್, ಸ್ಪೋಟ್ಸ್ ಕ್ಲಬ್ ಗುತ್ತಕಾಡು ಇವರ ಜಂಟಿ ಆಶ್ರಯದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಮ್ಯಾಜಿಶಿಯನ್‌ರಾದ ಡಾ| ಸದಾನಂದ...

Close