ಕಿನ್ನಿಗೋಳಿಯ ಯುಗಪುರುಷದಲ್ಲಿ ಅಂತರ್ (ಜಿಲ್ಲಾ)-ಶಾಲಾ ನಾಟಕೋತ್ಸವ

“ಮಕ್ಕಳ ಸುಪ್ತ ಪ್ರತಿಭೆ ಪ್ರಕಾಶಕ್ಕೆ ಬರಲು ಇಂತಹ ನಾಟಕೋತ್ಸವ ಪೂರಕವಾಗಿದ್ದು, ವಿದ್ಯಾರ್ಥಿಗಳಿಗೆ ನಾಟಕದ ಕುರಿತು ಆಸಕ್ತಿ ಮೂಡಿಸಬೇಕೆಂದು” ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ ಹೇಳಿದರು.

ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಉಡುಪಿ, ಕಾಸರಗೋಡು, ದ.ಕ.ಜಿಲ್ಲಾ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಹಾಗೂ ಯುಗಪುರುಷ ಕಿನ್ನಿಗೋಳಿ ಇದರ ಸಹಭಾಗಿತ್ವದಲ್ಲಿ ನಡೆದ ಅಂತರ್ ಜಿಲ್ಲಾ, ಅಂತರ್ ಶಾಲಾ ನಾಟಕತ್ಸವ-2012 ನ್ನು ಉದ್ಘಾಟಿಸಿ ಮಾತಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಅಧ್ಯಕ್ಷತೆಯನ್ನು ವಹಿಸಿದ್ದು ನಾಟಕಕಾರ ಪ್ರೊ.ಉದ್ಯಾವರ ಮಾಧವ ಆಚಾರ್ಯ, ಕಿನ್ನಿಗೋಳಿ ಪಂಚಾಯತ್ ಅಧ್ಯಕ್ಷ ದೇವಪ್ರಸಾದ್ ಪುನರೂರು, ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಪ್ರೊ.ಅನಂತಪದ್ಮನಾಭ ರಾವ್, ಕಾರ್ಯದರ್ಶಿ  ಬಿ.ಶ್ರೀನಿವಾಸ ರಾವ್, ಕಾರ್ಯಕಾರಿ ಸಮಿತಿ ಸದಸ್ಯೆ ಸಾವಿತ್ರಿ ಎಸ್.ರಾವ್ ಉಪಸ್ಥಿತರಿದ್ದರು. ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪರು ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಜಯರಾಮ ಪೂಂಜ ಕಾರ್ಯಕ್ರಮ ನಿರೂಪಿಸಿದರು. ಎಂಟು ಶಾಲಾ ಮಕ್ಕಳ ತಂಡದಿಂದ ನಾಟಕಗಳು ನಡೆದವು.

Comments

comments

Leave a Reply

Read previous post:
ಪಂಜ ಹರಿ ಪಾದೆಯಲ್ಲಿ ಧಾರ್ಮಿಕ ಸಭೆ: ಉಪನ್ಯಾಸ

"ತಮ್ಮ ಸ್ವಂತ ಸುಖಕ್ಕಾಗಿ ಇತರರ ಸುಖವನ್ನು ನಾಶ ಪಡಿಸುವುದು ಸರಿಯಲ್ಲ, ಮನುಷ್ಯನಲ್ಲಿ ಧಾರ್ಮಿಕ, ಸಾಮಾಜಿಕ ಪ್ರಜ್ಞೆ ಅಗತ್ಯವಾಗಿ ಬೇಕಾಗಿದೆ" ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ...

Close