ಫೆಬ್ರವರಿ 6 ರಸ್ತೆ ಬಂದ್

ಚಿತ್ರ: ನರೇಂದ್ರ ಕೆರೆಕಾಡು
ಕಾಪಾಡಿ…? ಅಸ್ಥಿ ಪಂಜರದ.. ಪಕ್ಷಿಕೆರೆ ರಸ್ತೆ ಅಳುತ್ತಿದೆ…………

ಕುಣಿದು ..ಕುಣಿದು… ಬಾರೆ ಎನ್ನುತ್ತಾ ಬಸ್ಸುಗಳು ಈ ರಸ್ತೆಯಲ್ಲಿ ಸಂಚರಿಸುವಾಗ ಪ್ರಯಾಣಿಕರು ಸಹ ಈ ರಸ್ತೆಗೆ ಹಿಡಿಶಾಪ ಹಾಕುತ್ತಿರುವಾಗ ಯಾವೊಬ್ಬ ಜನಪ್ರತಿನಿಧಿಗಳು ಗಮನ ಹರಿಸದೇ ನಿರ್ಲಕ್ಷದ ಭಾವನೆ ತೋರಿರುವ ವಿರುದ್ಧ ಸ್ಥಳೀಯರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಇದು ಕಿನ್ನಿಗೋಳಿಯಿಂದ – ಹಳೆಯಂಗಡಿಯನ್ನು ಸಂಪರ್ಕಿಸುವ ಪಕ್ಷಿಕೆರೆ ರಸ್ತೆಯ ದುರವಸ್ಥೆ, ಎಸ್.ಕೋಡಿಯಿಂದ ಪ್ರಾರಂಭವಾಗುವ ಈ ರಸ್ತೆಯಲ್ಲಿ ಡಾಮರು ಎದ್ದು ಅಸ್ಥಿಪಂಜರದ ಜಲ್ಲಿ ಕಲ್ಲುಗಳು ಮಾತ್ರ ಉಳಿದಿದೆ. ಐಟಿಐ ಬಳಿ, ಕಾಫಿಕಾಡು ತಿರುವು, ಪಕ್ಷಿಕೆರೆ ಮುಖ್ಯ ಪೇಟೆ, ಚರ್ಚ್‌ನ ಬಳಿ, ಸುಬ್ರಹ್ಮಣ್ಯ ಶಾಲೆ, ಲೈಟ್ ಹೌಸ್, ಇಂದಿರಾನಗರ, ರೈಲ್ವೇ ಗೇಟ್ ಬಳಿ, ಹಳೆಯಂಗಡಿ ತಿರುವಿನ ಬಳಿ ಹೀಗೆ ಸರಣಿಯಂತೆ ರಸ್ತೆಯುದ್ದಕ್ಕೂ ಡಾಮರು ಕಿತ್ತು ಹೋಗಿದ್ದು ವಾಹನ ಚಾಲಕರಿಗೆ ಗುಂಡಿಗಳನ್ನು ತಪ್ಪಿಸುವುದೇ ಒಂದು ಸಾಹಸ ಆಗಿದೆ.

ಸುಮಾರು ಎಂಟು ಕಿಲೋಮೀಟರ್ ರಸ್ತೆಯಲ್ಲಿ ಡಾಮರು ಕಾಣುವುದೇ ಬಹು ಅಪರೂಪ ಅಂತಹ ನರಕ ಸದೃಶ ರಸ್ತೆಗೆ ಕಾಲ ಕಾಲಕ್ಕೆ ಡಾಮರು ಹಾಕಿ ರಸ್ತೆಯನ್ನು ಸುಸ್ಥಿತಿಯಲ್ಲಿ ಇಡುವ ಕೆಲಸ ಲೊಕೋಪಯೋಗಿ ಇಲಾಖೆ ಮಾಡುವದೇ ಇಲ್ಲ ಎಂದು ದೂರುತ್ತಾರೆ ಪಕ್ಷಿಕೆರೆಯ ರಿಕ್ಷಾ ಚಾಲಕರು.
ಆದುದರಿಂದ ಇದೆಲ್ಲದರ ನಿರ್ಲಕ್ಷಕ್ಕೆ ರಸ್ತೆಯನ್ನೇ ಬಂದ್ ಮಾಡಿ ಬಿಸಿ ಮುಟ್ಟಿಸುವ ಚಿಂತನೆಯಿಂದ ಫೆಬ್ರವರಿ 6 ರಂದು ಸೋಮವಾರ ಬೆಳಿಗ್ಗೆಯಿಂದ ಸಂಜೆಯ ತನಕ ವಾಹನಗಳನ್ನು ನಿರ್ಭಂದಿಸಿ ಹೋರಾಟದ ಧ್ವನಿಯನ್ನು ಜನಪ್ರತಿನಿಧಿಗಳಿಗೆ ಮುಟ್ಟಿಸಲು ರಾಜಕೀಯ ರಹಿತ ಸಮಿತಿಯೊಂದನ್ನು ರಚಿಸಿಕೊಂಡು ಈಗಾಗಲೇ ಪೊಲೀಸ್ ಇಲಾಖೆಯಿಂಡ ಅನುಮತಿಯನ್ನು ಸಹ ಪಡೆದಿದ್ದಾರೆ.
ಸೋಮವಾರ ನಡೆಯುವ ಪ್ರತಿಭಟನೆಯಲ್ಲಿ ಈ ಭಾಗದ ಶಾಲೆಗಳಿಗೆ ರಜೆಯನ್ನು ನೀಡಲು ಮನವಿ ಮಾಡಲಾಗಿದೆ, ಈ ರಸ್ತೆ ಬಂದ್ ಕೇವಲ ಸಾಂಕೇತಿಕವಾಗಿದ್ದು ಇದರಿಂದ ಇಲಾಖೆಯು ಜನಪ್ರತಿನಿಧಿಗಳ ಎಚ್ಚರಗೊಳ್ಳದಿದ್ದಲ್ಲಿ ಅನಿವಾರ್ಯವಾಗಿ ಅನಿರ್ದಿಷ್ಟ ಅವಧಿಗೆ ರಸ್ತೆಯನ್ನು ಬಂದ್ ಮಾಡಿ ಸತ್ಯಾಗ್ರಹ ನಡೆಸುವ ಎಚ್ಚರಿಕೆಯನ್ನು ನೀಡಲಾಗುವುದು ಎಂದು ತಿಳಿದು ಬಂದಿದೆ.
ಹಳೆಯಂಗಡಿ ಲೈಟ್‌ಹೌಸ್‌ನ ಫೇಮಸ್ ಯೂತ್ ಕ್ಲಬ್‌ನ ಅಧ್ಯಕ್ಷ ನವೀನ್‌ಕುಮಾರ್ ಇತ್ತೀಚೆಗೆ ಕಿನ್ನಿಗೋಳಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರಿಗೆ ಸ್ವತಹ ಮನವಿ ಮಾಡಿ ರಸ್ತೆಯ ದುರವಸ್ಥೆಯನ್ನು ಹಮನಕ್ಕೆ ತಂದಿದ್ದರು ಪ್ರಯೋಜನಕ್ಕೆ ಬಂದಿಲ್ಲ ಎನ್ನಲಾಗಿದೆ.
ದ್ವಿಚಕ್ರ, ರಿಕ್ಷಾ, ಕಾರು,ಟೆಂಪೋ, ಲಾರಿಗಳ ನಿರಂತರ ಸಂಚಾರದ ಈ ರಸ್ತೆಯನ್ನು ಜನರ ಆಕ್ರೋಶವನ್ನು ಶಮನ ಮಾಡಲು ಈ ರಸ್ತೆಗೆ ಪ್ಯಾಚ್ ಮಾಡಲು ಇಲಾಖೆ ನಿರ್ಧರಿಸಿದ್ದು ಅದಕ್ಕೂ ವಿರೊಧ ವ್ಯಕ್ತವಾಗಿದ್ದು ಸಂಪೂರ್ಣ ಫೇವರ್ ಫಿನಿಶ್ ಡಾಮರೀಕರಣ ನಡೆಯಬೇಕು ಎಂದು ಆಗ್ರಹಿಸಲಾಗಿದೆ.

Comments

comments

Leave a Reply

Read previous post:
ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಜಾತ್ರೆ

ತುಳುನಾಡಿನ ಕಾರಣಿಕ ಪುರುಷರಾದ ಕೊಲ್ಲೂರು ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ಜಾತ್ರೆ ನಡೆಯಿತು. ಸಾಮುಹಿಕ ಆಶ್ಲೇಷ ಬಲಿ, ಜಾರಂದಾಯ ಗುಡ್ಡೆ ಧೂಮಾವತಿ ಬಂಟ ದೈವಗಳು, ಸರಳ ಧೂಮಾವತಿ ಬಂಟ...

Close