ಅಂತರ್ ಜಿಲ್ಲಾ, ಅಂತರ್ ಶಾಲಾ ನಾಟಕೋತ್ಸವ ಸಮಾರೋಪ

“ಮಕ್ಕಳ ಪ್ರತಿಭಾ ವಿಕಸನಕ್ಕೆ ನಾಟಕದಂತಹ ಸಾಂಸ್ಕೃತಿಕ ವೇದಿಕೆಗಳು ಪೂರಕ” ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಉಡುಪಿ, ಕಾಸರಗೋಡು,ಜಿಲ್ಲಾಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನ ಮತ್ತು ಯುಗಪುರುಷದ ಆಶ್ರಯದಲ್ಲಿ ನಡೆದ ಅಂತರ್ ಜಿಲ್ಲಾ, ಅಂತರ್ ಶಾಲಾ ನಾಟಕೋತ್ಸವದ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದ.ಕ.ಜಿಲ್ಲಾ ಕ.ಸಾ.ಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸಾಹಿತಿ ಕೆ.ಜಿ ಮಲ್ಯ, ಸಂಗಮದ ಅಧ್ಯಕ್ಷ ಪ್ರೋ. ಅನಂತ ಪದ್ಮನಾಭ ರಾವ್, ಕಾರ್ಯದರ್ಶಿ ಬಿ. ಶ್ರೀನಿವಾಸ ರಾವ್, ಸಾವಿತ್ರಿ ರಾವ್, ಮತ್ತಿತರರಿದ್ದರು. ವಾಮನ ಇಡ್ಯ ಕಾರ್ಯಕ್ರಮ ನಿರೂಪಿಸಿದರು.

Comments

comments

Leave a Reply

Read previous post:
ನಿಡ್ಡೋಡಿಯಲ್ಲಿ ಗ್ರಾಮೋತ್ಸವ

ಕಟೀಲು ಬಳಿಯ ನಿಡ್ಡೋಡಿಯ ಶ್ರೀ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಗ್ರಾಮೋತ್ಸವ-3 ಶನಿವಾರ ನಿಡ್ಡೋಡಿ ಶುಂಠಿಲಪದವು ರತ್ನಗಿರಿಯಲ್ಲಿ ನಡೆಯಿತು. ಇದೇ ಸಂದರ್ಭ ಶ್ರೀ...

Close