ನಿಡ್ಡೋಡಿಯಲ್ಲಿ ಗ್ರಾಮೋತ್ಸವ

ಕಟೀಲು ಬಳಿಯ ನಿಡ್ಡೋಡಿಯ ಶ್ರೀ ಜ್ಞಾನರತ್ನ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್(ರಿ) ಇದರ ಆಶ್ರಯದಲ್ಲಿ ಗ್ರಾಮೋತ್ಸವ-3 ಶನಿವಾರ ನಿಡ್ಡೋಡಿ ಶುಂಠಿಲಪದವು ರತ್ನಗಿರಿಯಲ್ಲಿ ನಡೆಯಿತು. ಇದೇ ಸಂದರ್ಭ ಶ್ರೀ ದುರ್ಗಾದೇವಿ ಕೈಗಾರಿಕಾ ತರಬೇತಿ ಸಂಸ್ಥೆ, ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ರತ್ನಗಿರಿ ಶಿಶು ವಿಹಾರದ ವಾರ್ಷಿಕೋತ್ಸವ ನಡೆಯಿತು. ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿದ್ದು, ಚಿಕ್ಕಮಗಳೂರು ರಾಂಪುರ ವೇದವಿಜ್ಞಾನ ಮಂದಿರದ ಬ್ರಹ್ಮರ್ಷಿ ಕೆ.ಎಸ್. ನಿತ್ಯಾನಂದರು ಗ್ರಾಮೋತ್ಸವದ ಪರಿಕಲ್ಪನೆ ನೆರೆವೇರಿಸಿದರು. ಸಾವಯವ ಕೃಷಿಕರಾದ ರಾಜೇಶ್ ನಾಯಕ್ ಉಳಿಪಾಡಿ ಗ್ರಾಮೋತ್ಸವವನ್ನು ಉದ್ಘಾಟಿಸಿದರು. ಶ್ರೀ ಶ್ರೀ ಧರ್ಮ ಪಾಲನನಾಥ ಸ್ವಾಮೀಜಿಯವರ ಆಶೀರ್ವಚನದಲ್ಲಿ ಧಾರ್ಮಿಕ ಪರಿಷತ್ ಸದಸ್ಯ ಕೆ.ಟಿ.ಸುವರ್ಣ ಗ್ರಾಮೋತ್ಸವದ ಲಾಂಛನ ಬಿಡುಗಡೆಗೊಳಿಸಿದರು. ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿ.ಪಂ. ಸದಸ್ಯ ಈಶ್ವರ ಕಟೀಲು, ಮಂಗಳೂರು ತಾ.ಪಂ.ಅಧ್ಯಕ್ಷೆ ಭವ್ಯ ಗಂಗಾಧರ್, ಸಂಗೀತ ಭಾಸ್ಕರ್, ರಾಮಣ್ಣ ಗೌಡ, ಎಂ.ಪಿ ಉಮೇಶ್, ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಭಾಸ್ಕರ ಗೌಡ ಸ್ವಾಗತಿಸಿದರು, ಸ್ವಾತಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.

 

Comments

comments

Leave a Reply

Read previous post:
ಫೆ.7ರಂದು ಕಟೀಲಿನಲ್ಲಿ ನಂದಿನಿ ಅವತರಣ ದಿನ, ಬ್ರಹ್ಮರಥೋತ್ಸವ

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ನಂದಿನಿ ಅವತರಣ ದಿನ ಆಚರಣೆ ಫೆ.7ರಂದು ನಡೆಯಲಿದ್ದು, ರಾತ್ರಿ ಭಕ್ತರೊಬ್ಬರ ಸೇವೆಯ ಬ್ರಹ್ಮರಥೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತೀಳಿಸಲಾಗಿದೆ.

Close