ಕಟೀಲು, ಜಳಕದಕಟ್ಟೆ, ನಿಡ್ಡೋಡಿ ರಸ್ತೆ ತಡೆ ಪ್ರತಿಭಟನೆ

22 ವರ್ಷಗಳ ಹಿಂದೆ ಡಾಮರೀಕರಣಗೊಂಡು ಕಳೆದೆರಡು ವರ್ಷಗಳ ಹಿಂದೆ ಕಳಪೆ, ತೇಪೆ ಕಾಮಗಾರಿ ಕಂಡು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಕಟೀಲು, ಜಳಕದಕಟ್ಟೆ, ನಿಡ್ಡೋಡಿ ರಸ್ತೆ ಮರು ಡಾಮರೀಕರಣಕ್ಕೆ ಆಗ್ರಹಿಸಿ ಕಟೀಲು, ನಿಡ್ಡೋಡಿ ಗ್ರಾಮಸ್ಥರು ರಸ್ತೆ ತಡೆ, ಪ್ರತಿಭಟನೆ ನಡೆಸಿದರು.

4 ಕಿ.ಮೀ ಉದ್ದದ ಈ ರಸ್ತೆ ಡಾಮರೀಕರಣಗೊಂಡರೆ ಕಟೀಲು ಮುಡಬಿದಿರೆಗೆ 6 ಕಿ.ಮೀ ನಷ್ಟು ಉಳಿತಾಯವಾಗಲಿದೆ. ನಿಡ್ಡೋಡಿ ಐ.ಟಿ.ಐ, ಬಾಪೂಜಿ ಶಾಲೆ, ಸತ್ಯನಾರಾಯಣ ಪ್ರೌಢ ಶಾಲೆ, ಕಟೀಲು ವಿದ್ಯಾ ಸಂಸ್ಥೆಗೆ ಬರುವ ವಿದ್ಯಾರ್ಥಿಗಳು ಮತ್ತು ಕಟೀಲು ದೇವಳಕ್ಕೆ ಬರುವ ಭಕ್ತಾದಿಗಳು ಈ ಕೆಟ್ಟ ರಸ್ತೆಯಿಂದ ತೊಂದರೆಗೀಡಾಗಿದ್ದಾರೆಂದು ಪ್ರತಿಭಟನಾಕಾರರು ತಿಳಿಸಿದರು.

ಮುಡಬಿದಿರೆಯಿಂದ ಕಟೀಲು, ಬಜಪೆ ವಿಮಾನ ನಿಲ್ದಾಣಕ್ಕೆ ಈ ರಸ್ತೆ ಹತ್ತಿರದ ಪ್ರಯಾಣಕ್ಕೆ ಸಹಕಾರಿಯಾಗಿದ್ದು ಜನಪ್ರತಿನಿಧಿಗಳು ಕೂಡಲೇ ಸ್ಪಂದಿಸ ಬೇಕೆಂದು ಸೇರಿದ್ದ ಗ್ರಾಮಸ್ಥರು ತಿಳಿಸಿದರು.

ಈ ಕುರಿತು ಸಂಸದರು, ಶಾಸಕರು, ಜಿ.ಪಂ, ತಾ.ಪಂ ಸದಸ್ಯರು, ಕಲ್ಲಮುಂಡ್ಕೂರು, ಮೆನ್ನಬೆಟ್ಟು ಪಂಚಾಯತ್‌ಗಳಿಗೆ, ಕಟೀಲು ದೇವಳಕ್ಕೆ ಬಲವಾದ ಮನವಿ ಸಲ್ಲಿಸಲಾಗುವುದೆಂದು ಪ್ರತಿಭಟನಾಕಾರರು ತಿಳಿಸಿದರು.

Comments

comments

Leave a Reply

Read previous post:
ಬಟ್ಟಕೋಡಿಯಲ್ಲಿ ಯಕ್ಷಗಾನ ಕಲಾವಿದರಿಗೆ ಸನ್ಮಾನ

ಬಟ್ಟಕೋಡಿ ಮುರತ್ತಮೇಲ್ ಪದ್ಮಾವತಿ ಓಡಿ ಶೆಟ್ಟಿಗಾರ್ ಕುಟುಂಬಿಕರಿಂದ ಕಟೀಲು ಮೇಳದ ಯಕ್ಷಗಾನ ಬಯಲಾಟ ರವಿವಾರ ನಡೆದಾಗ, ಮೇಳದ ಕಲಾವಿದರಾದ ಪೆರುವಾಯಿ ನಾರಾಯಣ ಭಟ್ (ಚೆಂಡೆ), ಮಂಜುನಾಥ ಭಟ್...

Close