ಕಟೀಲು ಮಕ್ಕಳ ಚಿಲಿಪಿಲಿ ಮೇಳ

ಕಿನ್ನಿಗೋಳಿ ರೋಟರಾಕ್ಟ್ ಕ್ಲಬ್‌ವತಿಯಿಂದ ಅಯೋಜಿಸಲಾದ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆಯ ಚಿಲಿಪಿಲಿ ಮೇಳವನ್ನು ಅಂತರಾಷ್ಟ್ರೀಯ ಖ್ಯಾತಿಯ ಲಹರಿ ಕಲಾವಿದರಾದ ಹರೀಶ್ ಕೊಡಿಯಲ್ ಬೈಲ್ ಉದ್ಘಾಟಿಸಿದರು.

ಮಕ್ಕಳಿಗೆ ಡ್ರಾಯಿಂಗ್ ಶೀಟಿನಿಂದ ಮುಖವಾಡಗಳ ರಚನೆ, ಪ್ಲಾಸ್ಟಿಕ್ ಬೊಟಲ್‌ಗಳಿಂದ ಪೆನ್‌ಸ್ಟಾಂಡ್‌ಗಳ ಕಲಾಕೃತಿ ರಚನೆ, ಮಣ್ಣಿನಿಂದ ಗೊಂಬೆ ಹಾಗೂ ಮುರ್ತಿಗಳ  ರಚನೆಯನ್ನು ಕಲಿಸಲಾಯಿತು. ಆಸಕ್ತಿಯುಳ್ಳ 50 ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಈ ಸಂದರ್ಭದಲ್ಲಿ ಕಟೀಲು ದೇವಳದ ಅರ್ಚಕರಾದ ಶ್ರೀ ಹರಿನಾರಾಯಣ ಆಸ್ರಣ್ಣ, ಶಾಲಾ ಉಪಪ್ರಾಚಾರ್ಯರಾದ ಸುರೇಶ್ ಭಟ್, ಅಧ್ಯಾಪಕರಾದ ಆಲೇಕ್ಸ್ ತೌವ್ರೋ, ಕೆ.ವಿ. ಶೆಟ್ಟಿ, ರೊಟರಿ ವಲಯ ಸೇನಾನಿ ಹೆರಿಕ್ ಪಾಯಸ್, ರೋಟರಾಕ್ಟ್ ಸಭಾಪತಿ ಕೆ.ಬಿ.ಸುರೇಶ್, ರೋಟರಾಕ್ಟ್  ಅಧ್ಯಕ್ಷ ಗಣೇಶ್ ಕಾಮತ್, ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಆಚಾರ್, ಸದಸ್ಯ ಪುಷ್ಪರಾಜ್ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಅಂತರ್ ಜಿಲ್ಲಾ, ಅಂತರ್ ಶಾಲಾ ನಾಟಕೋತ್ಸವ ಸಮಾರೋಪ

"ಮಕ್ಕಳ ಪ್ರತಿಭಾ ವಿಕಸನಕ್ಕೆ ನಾಟಕದಂತಹ ಸಾಂಸ್ಕೃತಿಕ ವೇದಿಕೆಗಳು ಪೂರಕ" ಎಂದು ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಅವರು ಶನಿವಾರ ಯುಗಪುರುಷ ಸಭಾಭವನದಲ್ಲಿ ಉಡುಪಿ, ಕಾಸರಗೋಡು,ಜಿಲ್ಲಾಸಹಿತ ದಕ್ಷಿಣ...

Close