ಕೊಡೆತ್ತೂರು ದೇವಸ್ಯ ಮಠದಲ್ಲಿ ಪ್ರತಿಷ್ಟಾ ಮಹೋತ್ಸವ

ಕೊಡೆತ್ತೂರು ದೇವಸ್ಯ ಮಠದ ನವೀಕೃತ ಶಿಲಾಮಯ ಗರ್ಭಗುಡಿಯಲ್ಲಿ ತಾ.12 ರಂದು ಶ್ರೀ ಶ್ರೀನಿವಾಸ ದೇವರ ಪುನರ್ ಪ್ರತಿಷ್ಟಾ ಮಹೋತ್ಸವ, ಕಲಶಾಭಿಷೇಕ ನಡೆಯಲಿದೆ ಎಂದು ವೇದವ್ಯಾಸ ಉಡುಪ ತಿಳಿಸಿದ್ದಾರೆ.

ತಾ.10 ರಂದು ಉಗ್ರಾನ ಮುಹೂರ್ತ, ತಾ.12 ರಂದು ಶ್ರೀ ವಿಷ್ಣುಮುರ್ತಿ ದೇವರಿಗೆ ನವಕ ಕಲಶಾಭಿಷೇಕ, ಭಜನೆ, ಗಣೇಶ ಕೊಲಕಾಡಿ ತಂಡದಿಂದ ತಾಳಮದ್ದಲೆ, ಪಿಂಗಾರ ಕಲಾವಿದರಿಂದ “ಆಯೆ ಬರೆತಿಜೆ” ನಾಟಕ ನಡೆಯಲಿದೆ. ಸಭಾ ಕಾರ್ಯಕ್ರಮದಲ್ಲಿ ಸಾಂಸದ ನಳಿನ್ ಕುಮಾರ್, ಶಾಸಕ ಅಭಯಚಂದ್ರ ಜೈನ್ , ಪಂಜ ಭಾಸ್ಕರ ಭಟ್, ಕೆ.ಎಲ್.ಕುಂಡಂತಾಯ, ಕಟೀಲು ದೇವಳದ ವೇದ ಮೂರ್ತಿ  ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀ ವೇಂಕಟರಮಣ ಆಸ್ರಣ್ಣ, ಶ್ರೀ ಅನಂತಪದ್ಮನಾಭ ಆಸ್ರಣ್ಣರು ಭಾಗವಹಿಸಲಿದ್ದಾರೆ.

ತಾ. 13 ರಂದು ಕೃಷ್ಣಾಪುರದ ಸ್ವಾಮೀಜಿಯವರಿಂದ ಅನುಗ್ರಹ ಆಶೀರ್ವಚನ, ರಾತ್ರಿ ಕಟೀಲು ಮೇಳದವರಿಂದ “ಶ್ರೀ ದೇವೀ ಮಾಹಾತ್ಮ್ಯಂ”ವಿದೆ ಎಂದು ಪ್ರಕಟನೆ ತಿಳಿಸಿದೆ.

 

Comments

comments

Leave a Reply

Read previous post:
ಪೊಂಪೈ ಕಾಲೇಜಿನಲ್ಲಿ ವಿ.ವಿ.ಮಟ್ಟದ ಮಹಿಳಾ ತ್ರೋಬಾಲ್

 ಮಂಗಳೂರು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜ್ ಮಹಿಳಾ ತ್ರೋಬಾಲ್ ಪಂದ್ಯಾಟ ಫೆ.10-11  ರಂದು ಐಕಳ ಪೊಂಪೈ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಸಂಚಾಲಕ ರೆ| ಫಾ|...

Close