ಪೊಂಪೈ ಕಾಲೇಜಿನಲ್ಲಿ ವಿ.ವಿ.ಮಟ್ಟದ ಮಹಿಳಾ ತ್ರೋಬಾಲ್

 ಮಂಗಳೂರು ವಿಶ್ವ ವಿದ್ಯಾನಿಲಯ ಅಂತರ್ ಕಾಲೇಜ್ ಮಹಿಳಾ ತ್ರೋಬಾಲ್ ಪಂದ್ಯಾಟ ಫೆ.10-11  ರಂದು ಐಕಳ ಪೊಂಪೈ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜಿನ ಸಂಚಾಲಕ ರೆ| ಫಾ| ಪೌಲ್ ಪಿಂಟೋ ತಿಳಿಸಿದರು. ಸೋಮವಾರ ಯುಗಪುರುಷ ಸಭಾಭವನದಲ್ಲಿ ನಡೆದ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೊಡಗು, ಉಡುಪಿ, ಮಂಗಳೂರು ಜಿಲ್ಲೆಗಳ 40 ಕ್ಕೂ ಹೆಚ್ಚು ಮಹಿಳಾ ತಂಡಗಳ 400ಕ್ಕೂ ಹೆಚ್ಚು ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದರು. ಫೆ 10 ಬೆಳ್ಳಿಗ್ಗೆ ಮುಂಡ್ಕೂರು ಮಾಲಾಡಿ ಬಾಲಕೃಷ್ಣ ಶೆಟ್ಟಿಯವರು ಪಂದ್ಯಾಟ ಉದ್ಘಾಟಿಸಲಿದ್ದು ಫೆ.11ರಂದು ಮಧ್ಯಾಹ್ನ ಸಮಾರೋಪ, ಪ್ರಶಸ್ತಿ ವಿತರಣೆ ನಡೆಯಲಿದೆ.ಕಾಲೇಜಿನ ಹಿರಿಯ ವಿದ್ಯಾರ್ಥಿ ಗುರುರಾಜ್ ಪೂಜಾರಿ, ಮಂಗಳೂರು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ| ಎಚ್.ನಾಗಲಿಂಗಪ್ಪ ಉಪಸ್ಥಿತರಿರುವರೆಂದು ಪೊಂಪೈ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಜೇಮ್ಸ್ ಓಲಿವರ್ ತಿಳಿಸಿದರು. ಸುದ್ಧಿಗೋಷ್ಠಿಯಲ್ಲಿ ಭುವನಾಭಿರಾಮ ಉಡುಪ, ಫ್ರೊ. ಜಗದೀಶ್ ಹೊಳ್ಳ ಉಪಸ್ಥಿತರಿದ್ದರು.

Comments

comments

Leave a Reply

Read previous post:
ಕಟೀಲು, ಜಳಕದಕಟ್ಟೆ, ನಿಡ್ಡೋಡಿ ರಸ್ತೆ ತಡೆ ಪ್ರತಿಭಟನೆ

22 ವರ್ಷಗಳ ಹಿಂದೆ ಡಾಮರೀಕರಣಗೊಂಡು ಕಳೆದೆರಡು ವರ್ಷಗಳ ಹಿಂದೆ ಕಳಪೆ, ತೇಪೆ ಕಾಮಗಾರಿ ಕಂಡು ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ಅಯೋಗ್ಯವಾಗಿರುವ ಕಟೀಲು, ಜಳಕದಕಟ್ಟೆ, ನಿಡ್ಡೋಡಿ ರಸ್ತೆ...

Close