ಶಾಲಾ- ಕಾಲೇಜ್‌ಗಳಲ್ಲಿ “ಟ್ಯಾಲೆಂಟ್‌ಹಂಟ್ “

ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿ ಮತ್ತು ಮ್ಯಾಟ್ರಿಕ್ಸ್ ಕೋಚಿಂಗ್ ಸೆಂಟರ್ ಸುರತ್ಕಲ್ ಇವರ ಜಂಟಿಯಾಗಿ ಅಯೋಜಿಸಿದ ಪ್ರತೀಭಾನ್ವೇಷಣೆ ಪರೀಕ್ಷೆಯು ನಗರದ ಕಟೀಲು, ಕಿನ್ನಿಗೋಳಿ, ಮುಲ್ಕಿ, ಸುರತ್ಕಲ್, ಪಣಂಬೂರು ವಲಯದಲ್ಲಿ ನಡೆಸಲಾಗುತ್ತಿದೆ. ಈ ಪರೀಕ್ಷೆಯು ಎರಡು ಹಂತದಲ್ಲಿ ನಡೆಯಲಿದ್ದು ಪ್ರಥಮ ಹಂತದ ಪರೀಕ್ಷೆಯನ್ನು ಆಯಾ ಶಾಲೆಗಳಲ್ಲಿ 9ನೇ, 10ನೇ, ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಡೆಸಲಾಗುತ್ತಿದೆ. ಪ್ರತೀ ಕಾಲೇಜಿನ ತರಗತಿಯಲ್ಲಿ 10 ವಿದ್ಯಾರ್ಥಿಗಳನ್ನು ಮುಂದಿನ ಹಂತದ ಪರೀಕ್ಷೆಗೆ ಆಯ್ಕೆ ಮಾಡಲಾಗುತ್ತಿದ್ದು, ಅಂತಿಮ ಹಂತದ ಪರೀಕ್ಷೆಯನ್ನು ಕಿನ್ನಿಗೋಳಿಯ ರೋಟರಿ ಆಂಗ್ಲ ಮಾಧ್ಯಮ ಹೈಸ್ಕೂಲಿನಲ್ಲಿ ಮಾರ್ಚ್ ತಿಂಗಳಲ್ಲಿ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದ ಪ್ರತಿ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸದಲ್ಲಿ ಕೋಚಿಂಗಿಗೆ ರಿಯಾಯಿತಿ ದೊರೆಯಲಿದೆ. ಹಾಗೂ ಪ್ರತೀಭಾನ್ವಿತ ಮೊದಲ 10 ವಿದ್ಯಾರ್ಥಿಗಳಿಗೆ ಪೂರ್ಣ ರಿಯಾಯಿತಿ ದೊರೆಯಲಿದೆ ಹಾಗೆಯೇ ಮೊದಲ 3 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಸ್ಪರ್ಧೆಗೆ ಬೇಕಾಗುವ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ಇದರ ಪೂರ್ಣ ಪ್ರಯೋಜನವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆಯಬೇಕಾಗಿ ಮತ್ತು ನಗರದ ಎಲ್ಲಾ ಶಾಲಾ ಕಾಲೇಜುಗಳು ತಮ್ಮ ಸಹಕಾರವನ್ನು ಕೊಡಬೇಕಾಗಿ ರೋಟರಾಕ್ಟ್ ಕ್ಲಬ್ ಕಿನ್ನಿಗೋಳಿಯ ಅಧ್ಯಕ್ಷ ಗಣೇಶ್ ಕಾಮತ್, ರೋಟರಾಕ್ಟ್ನ ನಿಕಟ ಪೂರ್ವ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ಹಾಗೂ ಮ್ಯಾಟ್ರಿಕ್ಸ್ ಕೋಚಿಂಗ್ ಸೆಂಟರಿನ ಅಧ್ಯಕ್ಷ ಗುರುರಾಜ್ ಉಡುಪ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

 

Comments

comments

Leave a Reply

Read previous post:
ಕೊಂಡೇಲ ಫ್ರೆಂಡ್ಸ್ ಕ್ರಿಕೆಟ್

photo by: Mithuna Kodethuru ಕೊಂಡೇಲ ತರುಣ ವೃಂದದ ಆಶ್ರಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತ "ಮರು ಫ್ರೆಂಡ್ಸ್" ಜೋಕಟ್ಟೆ ತಂಡ ಪ್ರಶಸ್ತಿ ಪಡೆಯಿತು. ಜಿ.ಪಂ.ಸದಸ್ಯ ಈಶ್ವರ್...

Close