ವಿ.ವಿ ಮಟ್ಟದ ಮಹಿಳೆಯರ ತ್ರೋಬಾಲ್

Photo By Donald D’Souza Kirem

ಮಂಗಳೂರು ವಿ.ವಿ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಶುಕ್ರವಾರ ಐಕಳ ಪೊಂಪೈ ಕಾಲೇಜಿನಲ್ಲಿ ಪ್ರಾರಂಭಗೊಂಡಿದೆ. ಕಾಲೇಜಿನ ಸಂಚಾಲಕ ರೆ|ಫಾ.ಪೌಲ್ ಪಿಂಟೋ ಪಂದ್ಯಾಟ ಉದ್ಘಾಟಿಸಿದರು. ಮಂಗಳೂರು ವಿ.ವಿ ಯ ಸಹಾಯಕ ದೈಹಿಕ ಶಿಕ್ಷಕ ನಿರ್ದೇಶಕ ಜೆರಾಲ್ಡ್ ಸಂತೋಷ್ ಡಿಸೋಜ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗ್ಡೆ, ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸಿಲ್ವೆಸ್ಟರ್ ಡಿಮೆಲ್ಲೋ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ ಗಣೇಶ್ ಶೆಟ್ಟಿಗಾರ್, ಮತ್ತಿತರರಿದ್ದರು.

ಕಾಲೇಜಿನ ಪ್ರಾಚಾರ್ಯ ಪೆಟ್ರಿಕ್ ಮಿನೇಜಸ್ ಸ್ವಾಗತಿಸಿ, ದೈಹಿಕ ಶಿಕ್ಷಕ ಜೇಮ್ಸ್ ಒಲಿವರ್ ವಂದಿಸಿದರು. ಡಾ| ರಾಧಾಕೃಷ್ಣ ಭಟ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. 29 ಮಹಿಳಾ ತಂಡಗಳು ಪಾಲ್ಗೊಂಡಿದ್ದ ಪಂದ್ಯಾಟದ ಸಮಾರೋಪ ಶನಿವಾರ ನಡೆಯಲಿದೆ.

 

Comments

comments

Leave a Reply

Read previous post:
ನಂಬಿಕೆ

 ’ನಂಬಿ ಕೆಟ್ಟವರಿಲ್ಲವೊ ಜಗದಲಿ ನಂಬದೆ ಕೆಟ್ಟರು?’ ಎಂದು ಪುರಂದರ ದಾಸರು ಅಂದು ಹೇಳಿದ ಮಾತು ಸಾರ್ವಕಾಲಿಕ ಮತ್ತು ಸಾರ್ವತ್ರಿಕ ಸತ್ಯ,. ನಂಬಿಕೆಯ ಮೇಲೆ ಈ ಜಗತ್ತು ನಿಂತಿದೆ....

Close