ಮಾರ್ಚ್‌ನಲ್ಲೇ ಮಳೆ ಆರಂಭ !?!

ಸಾಮಾನ್ಯವಾಗಿ ಏಪ್ರಿಲ್ ಎರಡನೇ ವಾರದಲ್ಲಿ ಸುರಿಯುವ ಬೇಸಿಗೆ ಮಳೆ ಈ ಬಾರಿ ಮಾರ್ಚ್ 15ರ ವೇಳೆಗೆ ಒಂದು ತಿಂಗಳು ಮೊದಲೇ ಭೂಮಿಯನ್ನು ತುಸು ತಂಪಾಗಿಸಲಿದೆ ಎನ್ನುತ್ತಿದೆ ಹವಾಮಾನ ಇಲಾಖೆಯ ಮುಲಗಳು.
ಪ್ರತಿ ವರ್ಷ ಏಪ್ರಿಲ್ ಮೊದಲ ಅಥವಾ 2ನೇ ವಾರದಲ್ಲಿ ಬೇಸಿಗೆ ಮಳೆ ಶುರುವಾಗುವುದು ನಿತ್ಯದ ವಾಡಿಕೆ. ಆದರೆ, ವಾತಾವರಣದ ಏರುಪೇರು ಹಾಗೂ ಹೆಚ್ಚುತ್ತಿರುವ ಉಷ್ಣಾಂಶದಿಂದಾಗಿ ನಿರೀಕ್ಷೆಗಿಂತಲೂ 15 ದಿನ ಮೊದಲೇ ಬೇಸಿಗೆ ಮಳೆ ಶುರುವಾಗಲಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಮಾರ್ಚ್‌ನಲ್ಲಿ ಉಷ್ಣಾಂಶದಲ್ಲಿ ಏರಿಕೆಯಾಗಿ ವಾತಾವರಣದ ಒತ್ತಡ ಕಡಿಮೆಯಾಗುತ್ತದೆ. ಆದರೆ, ಕಳೆದ ವರ್ಷದ ನವೆಂಬರ್-ಡಿಸೆಂಬರ್‌ನಲ್ಲಿ ಮಳೆಯಾಗದ, ಪರಿಣಾಮ, ಭೂಮಿಯಲ್ಲಿ ನೀರಿನ ಅಂಶ ಕಡಿಮೆಯಾಗಿ ಉಷ್ಣಾಂಶದಲ್ಲಿ ನಿರೀಕ್ಷೆಗೂ ಮೊದಲೇ ಏರಿಕೆ ಉಂಟಾಗಿದೆ. ಹೀಗೆ, ಮಾರ್ಚ್‌ನಲ್ಲಿ ಏರಿಕೆಯಾಗಬೇಕಾಗಿದ್ದ ಉಷ್ಣಾಂಶ ಫೆಬ್ರವರಿ ಮೊದಲ ವಾರದಿಂದಲೇ ಹೆಚ್ಚಾಗುತ್ತಿರುವುದರಿಂದ ವಾಡಿಕೆಗಿಂತ ೧೫ರಿಂದ ೨೦ದಿನ ಮೊದಲು ಬೇಸಿಗೆ ಮಳೆ ಶುರುವಾಗುವ ಸಂಭವವಿದೆ ಎಂದು ಬೆಂಗಳೂರು ಕೃಷಿ ವಿವಿ ಹವಾಮಾನ ವಿಭಾಗ ಮುಖ್ಯಸ್ಥರು ತಿಳಿಸಿದ್ದಾರೆ.
ರಾಜ್ಯದಲ್ಲಿ ಏಪ್ರಿಲ್ ಮೊದಲ ವಾರದಿಂದ ಮೇ. ಕೊನೆ ತನಕ ಬೇಸಿಗೆ ಮಳೆ ಬೀಳುವುದು ವಾಡಿಕೆ. ಆದರೆ, ಈ ಬಾರಿ ವಾಡಿಕೆಗಿಂತ ಮೊದಲೇ ಮಳೆ ಕಾಣಿಸಿಕೊಳ್ಳುವುದರಿಂದ ಬೇಸಿಗೆ ಮಳೆ ಪ್ರಮಾಣವೂ ಸರಾಸರಿಗಿಂತ ಅಧಿಕ ಇರಬಹುದು.

Comments

comments

Leave a Reply

Read previous post:
ನಿಡ್ಡೋಡಿಯಲ್ಲಿ ಸತ್ಯನಾರಾಯಣ ಪೂಜೆ, ಧಾರ್ಮಿಕ ಸಭೆ

ನಿಡ್ಡೋಡಿ ಅರಿಯಾಳ ಪೇಟೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ವತಿಯಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ರವಿವಾರ ನಿಡ್ಡೋಡಿಯಲ್ಲಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ...

Close