ಮಹಿಳಾ ತ್ರೋಬಾಲ್ ಆಳ್ವಾಸ್ ವಿನ್ನರ್ಸ್, ಫಿಲೋಮಿನಾ ರನ್ನರ್ಸ್

 ಐಕಳ ಕಾಲೇಜಿನಲ್ಲಿ ಕಳೆದೆರಡು ದಿನಗಳಿಂದ ನಡೆದ ಮಂಗಳೂರು ವಿ.ವಿ.ಮಟ್ಟದ ಅಂತರ್ ಕಾಲೇಜು ಮಹಿಳಾ ತ್ರೋಬಾಲ್ ಪಂದ್ಯಾಟದಲ್ಲಿ ಮುಡಬಿದಿರೆಯ ಆಳ್ವಾಸ್ ಕಾಲೇಜಿನ ತಂಡ ಪ್ರಥಮ ಪ್ರಶಸ್ತಿ ಗಳಿಸಿದೆ. ಅಂತಿಮ ಪಂದ್ಯದಲ್ಲಿ ಆಳ್ವಾಸ್‌ನ ತಂಡ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು ತಂಡವನ್ನು 25 -18, 25 – 03 ಅಂಕಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಉಪಾಂತ್ಯ ಪಂದ್ಯದಲ್ಲಿ ಆಳ್ವಾಸ್ ತಂಡ, ಬೆಸೆಂಟ್ ತಂಡವನ್ನು 25 -6, 25 – 13 ಅಂಕಗಳಿಂದ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ತಂಡವನ್ನು ಫಿಲೋಮಿನಾ ತಂಡ 23 – 25, 25 – 23, 15 – 11ರಿಂದ ಸೋಲಿಸಿ ಅಂತಿಮ ಸುತ್ತು ಪ್ರವೇಶಿಸಿತ್ತು. 3 ಮತ್ತು 4ನೇ ಸ್ಥಾನ ಕ್ರಮವಾಗಿ ಬೆಸೆಂಟ್ ಹಾಗೂ ಪಿ.ಪಿ.ಸಿ ಪಾಲಾಯಿತು.
ಸಮಾರೋಪದಲ್ಲಿ ಪೊಂಪೈ ಕಾಲೇಜಿನ ಸಂಚಾಲಕ ರೆ| ಫಾ| ಪೌಲ್ ಪಿಂಟೋ ಪ್ರಶಸ್ತಿ ವಿತರಿಸಿದರು. ಮಂಗಳೂರು ವಿ.ವಿ.ಯ ಡಾ| ನಾಗಲಿಂಗಪ್ಪ, ಚಂದ್ರಶೇಖರ ಹೆಗ್ಡೆ, ಗಣೇಶ್ ಶೆಟ್ಟಿಗಾರ್, ಗುರುರಾಜ್ ಪೂಜಾರಿ, ಆಸ್ಟಿನ್ ಡಯಾಸ್ ಮತ್ತಿತರರಿದ್ದರು. ಕಾಲೇಜಿನ ಪ್ರಾಚಾರ್ಯ ಪೆಟ್ರಿಕ್ ಮಿನೇಜಸ್  ಸ್ವಾಗತಿಸಿ, ದೈಹಿಕ ಶಿಕ್ಷಕ  ಜೇಮ್ಸ್ ಒಲಿವರ್ ವಂದಿಸಿದರು. ಮಂಗಳೂರು ವಿವಿಯ 31 ತಂಡಗಳಿದ್ದವು.

Comments

comments

Leave a Reply

Read previous post:
ಕೊಡೆತ್ತೂರು ದೇವಸ್ಯ ಮಠ ಉಗ್ರಾಣ ಮುಹೂರ್ತ

Photos by K.B. Suresh ಕೊಡೆತ್ತೂರು ದೇವಸ್ಯ ಮಠದ ನವೀಕೃತ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀ ಶ್ರೀನಿವಾಸ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಉಗ್ರಾಣ ಮುಹೂರ್ತ ಕಟೀಲು ದೇವಳ...

Close