ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣರ ಶೃದ್ಧಾಂಜಲಿ ಸಭೆ

Photo By Prakash M Suvarna

ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣರ ಶೃದ್ಧಾಂಜಲಿ ಸಭೆಯಲ್ಲಿ  ಅಧಿಕಾರ ಅಂತಸ್ತು ಶಾಶ್ವತವಲ್ಲ ಜೀವಿತಾವಧಿಯಲ್ಲಿ ಸಮಾಜಕ್ಕೆ ನೀಡಿದ ಸೇವೆ ಮಾತ್ರ ಶಾಶ್ವತ ಎಂದುಹೇಳಿದರು.
ನೈತಿಕ ಜೀವನದೊಂದಿಗೆ ಸಮಾಜಿಕ ಮತ್ತು ಶೈಕ್ಷಣಿಕ ಹರಿಕಾರರಾಗಿ ಸೋಮಪ್ಪ ಸುವರ್ಣರು ನೀಡಿದ ಸೇವೆ ಜನಮಾನಸದಲ್ಲಿ ಉಳಿದಿರುವುದು ಇತರರಿಗೆ ಮಾದರಿಯಾಗಿದೆ ಎಂದ ಅವರು ಸುವರ್ಣರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುಂದುವರಿಸಿಕೊಂದು ಅವರ ಹೆಸರನ್ನು ಶಾಶ್ವತವಾಗಿಸಬೇಕು ಎಂದರು.
ರಾಷ್ಟ್ರೀಯ ಬಿಲ್ಲವರ ಮಹಾ ಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣರು ಮಾತನಾಡಿ, ವೈಜ್ಞಾನಿಕ ಚಿಂತನೆಯ ಶೈಕ್ಷಣಿಕ ಸಾಧಕ ಹಾಗೂ ಉತ್ತಮ ಸಂಘಟಕರಾದ ಸುವರ್ಣರು ನಮ್ಮಲೆಲ್ಲರಿಗೂ ದಾರಿ ದೀಪವಾಗಿದ್ದರು ಎಂದರು.
ಈ ಸಂದರ್ಭ ರಾಜ್ಯ ವಿಪಕ್ಷ ಮುಖ್ಯ ಸಚೇತಕ ಅಭಯಚಂದ್ರ ಜೈನ್, ಮಾಜಿ ಸಂಸದ ವಿನಯ ಕುಮಾರ್ ಸೋರಕೆ, ಬಿ.ರಮಾನಾಥ ರೈ, ಶಾಸಕ ಗೋಪಾಲ ಭಂಡಾರಿ, ಕೆ.ಪಿ ಜಗದೀಶ ಅಧಿಕಾರಿ, ಬಸವರಾಜ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಕೆ.ರಾಘು ಸುವರ್ಣ,ಗೋಪೀನಾಥ ಪಡಂಗ, ಡಾ.ಎಂ.ಎ.ಆರ್ ಕುಡ್ವಾ, ನೂರ್ ಮಹಮ್ಮದ್, ವೀಣಾ ಕಾಮತ್ ಹಳೆಯಂಗಡಿ, ಎನ್.ಪಿ.ಶೆಟ್ಟಿ, ಶಾಲೆಟ್‌ಪಿಂಟೊ, ಸಂತೋಷ್ ಹೆಗ್ಡೆ, ಭಾಸ್ಕರ ಪುತ್ರನ್, ಶಿಕ್ಷಕ ಕೃಷ್ಣಪ್ಪ ಪೂಜಾರಿ, ಪ್ರಭಾಕರ ಬಂಗೇರಾ, ಸುದರ್ಶನ್ ಎಚ್ ಮತ್ತು ಸೋಮಪ್ಪ ಸುವರ್ಣರ ಮಕ್ಕಳು ಕುಟುಂಬಿಕರು ಉಪಸ್ಥಿತರಿದ್ದರು. ಡಾ.ಗಣೇಶ್ ಅಮೀನ್ ಸಂಕಮಾರ್ ನಿರೂಪಿಸಿದರು.

Comments

comments

Leave a Reply

Read previous post:
ಮಹಿಳಾ ತ್ರೋಬಾಲ್ ಆಳ್ವಾಸ್ ವಿನ್ನರ್ಸ್, ಫಿಲೋಮಿನಾ ರನ್ನರ್ಸ್

 ಐಕಳ ಕಾಲೇಜಿನಲ್ಲಿ ಕಳೆದೆರಡು ದಿನಗಳಿಂದ ನಡೆದ ಮಂಗಳೂರು ವಿ.ವಿ.ಮಟ್ಟದ ಅಂತರ್ ಕಾಲೇಜು ಮಹಿಳಾ ತ್ರೋಬಾಲ್ ಪಂದ್ಯಾಟದಲ್ಲಿ ಮುಡಬಿದಿರೆಯ ಆಳ್ವಾಸ್ ಕಾಲೇಜಿನ ತಂಡ ಪ್ರಥಮ ಪ್ರಶಸ್ತಿ ಗಳಿಸಿದೆ. ಅಂತಿಮ...

Close