ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲೆಗೆ ನವಚೇತನ ರಜತ ವೈಭವ ವಾಲಿಬಾಲ್ ಟ್ರೋಫಿ

ಏಳಿಂಜೆಯ ನವಚೇತನ ಯುವಕ ಮಂಡಲದ ರಜತ ವರ್ಷಚರಣೆಯ ಪ್ರಯುಕ್ತ ನಡೆದ ರಾಷ್ಟ್ರಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಟೂರ್ನಿಯಲ್ಲಿ ಕಿನ್ನಿಗೋಳಿಯ ವೀರಮಾರುತಿ ವ್ಯಾಯಾಮ ಶಾಲೆ ಪ್ರಥಮ ಸ್ಥಾನಿಯಾಗಿ ರಜತ ವೈಭವ ಟ್ರೋಫಿ ಸಹಿತ ರೂ.51,000 ನಗದು ಗಳಿಸಿದೆ. ದ್ವಿತೀಯ ಸ್ಥಾನಿ ಮಂಗಳೂರಿನ ಪಂಚಮ್ ಫ್ರೆಂಡ್ಸ್ ತಂಡವನ್ನು 25-15, 25-16 ನೇರ ಸೆಟ್‌ಗಳಿಂದ ಸೋಲಿಸಿ ಈ ಪ್ರಶಸ್ತಿ ತನ್ನದಾಗಿಸಿತು. ಸೆಮಿ ಫೈನಲ್‌ನಲ್ಲಿ ಪಂಚಮ್ ತಂಡ ತೃತೀಯ ಸ್ಥಾನಿ, ಉಳೆಪಾಡಿ ಕಾಪಿಕಾಡ್ ಫ್ರೆಂಡ್ಸ್ ತಂಡವನ್ನು 26-24, 25-07 ಸೆಟ್‌ಗಳಿಂದ ಸೋಲಿಸಿದರು. ಚತುರ್ಥ ಸ್ಥಾನಿ ಹಾಸನ ತಂಡವನ್ನು ವೀರಮಾರುತಿ ವ್ಯಾಯಾಮ ಶಾಲೆ 25-12, 25-19  ಸೆಟ್‌ಗಳಿಂದ ಪರಾಭವಗೊಳಿಸಿತು. ವೀರಮಾರುತಿಯ ಕಾರ್ತಿಕ್ ಉತ್ತಮ ಹೊಡೆತಗಾರ, ಜಗದೀಶ್ ಉತ್ತಮ ಸವ್ಯಸಾಚಿ ಪ್ರಶಸ್ತಿ ಪಡೆದರೆ, ಪಂಚಮ್ ನ ಬಲ್ವಿಂದರ್ ಸಿಂಗ್ ಉತ್ತಮ ಲಿಫ್ಟರ್ ಪ್ರಶಸ್ತಿ ಗಳಿಸಿದರು. ಶಿಸ್ತಿನ ತಂಡ ಪ್ರಶಸ್ತಿಯನ್ನು ಹಾಸನ ತಂಡ ಗಳಿಸಿತು.
ದಾಮಸ್ ಕಟ್ಟೆ ಕಿರೆಂ ಚರ್ಚ್‌ನ ಧರ್ಮಗುರು ರೆ|ಫಾ| ಪೌಲ್ ಪಿಂಟೋ, ಕಿನ್ನಿಗೋಳಿ ಮಸೀದಿಯ ಧರ್ಮಗುರು ಅಬ್ದುಲ್ ಲತೀಫ್ ಸಖಾಫಿ, ಏಳಿಂಜೆ ದೇವಳದ ಅರ್ಚಕ ಗಣೇಶ್ ಭಟ್, ಸ್ವರಾಜ್ ಶೆಟ್ಟಿ, ಪ್ರಶಸ್ತಿ ವಿತರಿಸಿದರು.

ಉದ್ಘಾಟನೆ: ರಾಷ್ಟ್ರಮಟ್ಟದ 12 ತಂಡಗಳು ಪಾಲ್ಗೊಂಡಿದ್ದ ಪಂದ್ಯಾಟದ ಉದ್ಘಾಟನೆ ಶನಿವಾರ ಸಂಕಲಕರಿಯ ಶಾಂಭವೀ ನದಿ ತೀರದ ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ದನ ಕ್ರೀಡಾಂಗಣದಲ್ಲಿ ನಡೆಯಿತು. ಬೆಂಗಳೂರಿನ ಶೆಟ್ರೋನ್ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕ ಏಳಿಂಜೆ ಕೋಂಜಾಲು ಗುತ್ತು ದಿವಾಕರ ಶೆಟ್ಟಿಯವರ ಅಧ್ಯಕ್ಷ್ಷತೆಯಲ್ಲಿ ಏಳಿಂಜೆ ಕೋಂಜಾಲು ಗುತ್ತು ಪ್ರಭಾಕರ ಶೆಟ್ಟಿ, ಭಾಸ್ಕರ ಶೆಟ್ಟಿ, ದಯಾನಂದ ಶೆಟ್ಟಿ, ಶಾಸಕ ಅಭಯ ಚಂದ್ರ ಜೈನ್, ಕಾರ್ಕಳ ಪೊಲೀಸ್ ಉಪ ಅಧೀಕ್ಷಕ ಸಂತೋಷ್ ಕುಮಾರ್, ಪಂದ್ಯಾಟ ಉದ್ಘಾಟಿಸಿದರು. ಶಿಬರೂರು ಗುತ್ತು ಕಿಟ್ಟಣ್ಣ ಶೆಟ್ಟಿ, ನಗ್ರಿ ಗುತ್ತು ವಿವೇಕ್ ಶೆಟ್ಟಿ, ಸುರೇಂದ್ರ ಕುಮಾರ್ ಹೆಗ್ಡೆ, ಈಶ್ವರ ಕಟೀಲು, ಬಿ. ನಿತ್ಯಾನಂದ ಶೆಟ್ಟಿ, ಯೋಗೀಶ್ ರಾವ್, ಸಖರಾಂ ಶೆಟ್ಟಿ, ಉಳಿಪಾಡಿ ರಾಜೇಶ್ ನಾಕ್, ಭುವನಾಭಿರಾಮ ಉಡುಪ, ಸದಾನಂದ ಭಟ್, ಸುಧಾಕರ ಶೆಟ್ಟಿ, ಲಕ್ಷ್ಮಣ್ ಬಿ.ಬಿ, ನಾಗೇಶ್ ಮಿಜಾರು ಮತ್ತಿತರರಿದ್ದರು.

ಕೂಟದ ಸಂಘಟಕ ಅನಿಲ್ ಶೆಟ್ಟಿ ಸ್ವಾಗತಿಸಿ, ಶರತ್ ಶೆಟ್ಟಿ ಪ್ರಸ್ತಾಪಿಸಿದರು, ಸುಧಾಕರ ಸಾಲಿಯಾನ್ ವಂದಿಸಿ, ಸಾಯಿನಾಥ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಸಾಧಕರಾದ ನಾರಾಯಣ ಆಳ್ವ, ಅಕ್ಷತಾ ಪೂಜಾರಿ, ಇಂಚರ ಕೆ. ಶೆಟ್ಟಿ, ಜಯಲಕ್ಷ್ಮಿ ಕಟೀಲು, ರಾಷ್ಟ್ರೀಯ ವಾಲಿಬಾಲ್ ನಾಯಕ ಪ್ರದೀಪ್ ಇವರನ್ನು ಸನ್ಮಾನಿಸಲಾಯಿತು.

Comments

comments

Leave a Reply

Read previous post:
ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣರ ಶೃದ್ಧಾಂಜಲಿ ಸಭೆ

Photo By Prakash M Suvarna ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿಯವರು ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಮಾಜಿ ಶಾಸಕ ಕೆ.ಸೋಮಪ್ಪ ಸುವರ್ಣರ ಶೃದ್ಧಾಂಜಲಿ ಸಭೆಯಲ್ಲಿ  ಅಧಿಕಾರ...

Close