ಕೊಡೆತ್ತೂರು ದೇವಸ್ಯ ಮಠದಲ್ಲಿ ಪ್ರತಿಷ್ಠಾ ಮಹೋತ್ಸವ

ಕೊಡೆತ್ತೂರು ದೇವಸ್ಯ ಶ್ರೀನಿವಾಸ ದೇವರ ಮಠದಲ್ಲಿ ಪ್ರತಿಷ್ಠಾ ಮಹೋತ್ಸವ ನಡೆಯಿತು. ಶಿಬರೂರು ಹಯಗ್ರೀವ ತಂತ್ರಿ, ಕಟೀಲು ದೇವಳದ ಅರ್ಚಕರಾದ ಪ್ರಸಾದ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ದೇವಸ್ಯ ಮಠದ ವೇದವ್ಯಾಸ ಉಡುಪ, ರಾಮಚಂದ್ರ ಉಡುಪ, ರಾಮದಾಸ ಉಡುಪ ಮತ್ತಿತರರಿದ್ದರು.

ಇದೇ ಸಂದರ್ಭ ನಾಲ್ಕು ಲಕ್ಷ ರೂ. ಅನುದಾನದಲ್ಲಿ ಡಾಮರೀಕಣ ರಸ್ತೆಯನ್ನು ಸಾಂಸದ ನಳಿನ್ ಕುಮಾರ್ ಉದ್ಘಾಟಿಸಿದರು.


ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸವನ್ನಿತ್ತ ಜಾನಪದ ಸಂಶೋದಕರಾದ ಕೆ.ಎಲ್.ಕುಂಡಂತಾಯರು ಕರಾವಳಿಯಲ್ಲಿ ಕಂಡು ಬರುವ ವಿಷ್ಣಮೂರ್ತಿಗಳೆಲ್ಲ ಜನಾರ್ದನ ಮೂರ್ತಿಗಳೆಂದು ಪ್ರತಿಪಾದಿಸಿದರು.  ಕಟೀಲು ದೇವಳ ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಶಾಸಕ ಮತ್ತು ವಿಪಕ್ಷ ಮುಖ್ಯ ಸಚೇತಕ ಅಭಯಚಂದ್ರ ಜೈನ್, ವಿದ್ವಾನ್ ಪಂಜ ಭಾಸ್ಕರ ಭಟ್, ಮೆನ್ನಬೆಟ್ಟು ಗಾಮ ಪಂಚಾಯತ್‌ನ ಅಧ್ಯಕ್ಷೆ ಶೈಲಾ ಶೆಟ್ಟಿ ಮತ್ತಿತರರಿದ್ದರು. ವಾಸ್ತುಶಿಲ್ಪಿ ಮಧೂರು ವಾಗೀಶ್ವರ ಸರಳಾಯರನ್ನು ಸಂಮಾನಿಸಲಾಯಿತು. ಸ್ಮರಣ ಸಂಚಿಕೆ ಶ್ರೀವಾಸ ಶ್ರೀನಿವಾಸವನ್ನು ಬಿಡುಗೊಳಿಸಲಾಯಿತು. ಮಠದ ವೇದವ್ಯಾಸ ಉಡುಪ ಪ್ರಸ್ತಾವನೆಗೈದರು. ವೇದವ್ಯಾಸ ಉಡುಪ ಸ್ವಾಗತಿಸಿದರು. ಸುಧಾ ಉಡುಪ ಕಾರ್ಯಕ್ರಮ ನಿರೂಪಿಸಿದರು. ಗಾಯತ್ರೀ ಎಸ್.ಉಡುಪ ವಂದಿಸಿದರು.

Comments

comments

Leave a Reply

Read previous post:
ಮುಡಬಿದಿರೆ – ದ.ಕ.ಜಿಲ್ಲಾ ಜೆ.ಡಿ.ಎಸ್ ಸಮಾವೇಶ

"ನಾನು ಜೆ.ಡಿ.ಎಸ್ ಗೆ ನಟಿಯಾಗಿ ಬಂದಿಲ್ಲ ಸಮಾಜಸೇವಕಿಯಾಗಿ ಬಂದಿದ್ದೇನೆ, ಅಸಹಾಯಕರ ಕಣ್ಣೀರೊರೆಸಲು ಜೆ.ಡಿ.ಎಸ್ ಸೂಕ್ತ ವೇದಿಕೆಯಾಗಿದ್ದು ದೇವೇ ಗೌಡ ಹಾಗೂ ಕುಮಾರ ಸ್ವಾಮಿಯವರ ತತ್ವ ಧೋರಣೆಗಳಿಗೆ ಮನಸೋತು...

Close